13 ದಿನಗಳ ಪಲಾಯನ
'13 ಡೇಯ್ಸ್', ಜರ್ಮನ್ ಜೈಲಿನಲ್ಲಿ ಸೆರೆಯಾಳಾಗಿದ್ದ ಇಂಗ್ಲೆಂಡ್ ಸೇನೆಯಲ್ಲಿದ್ದ ಕ್ಯಾಪ್ಟನ್ ಜಾನ್ ಅಲನ್ ಲೈಡ್ ಕೌಂಟರ್ನ ಒಂದು ತರಹದ ಆತ್ಮಕಥೆಯಂತಹ ಪುಸ್ತಕ. ಒಬ್ಬ ಯೋಧ ಶಿಕ್ಷಾ ಶಿಬಿರದಿಂದ ತಪ್ಪಿಸಿಕೊಳ್ಳುವ ಸಾಹಸದ ಸರಳ ನಿರೂಪಣೆ. ಯಾವುದೇ ದೇಶದ ಯೋಧನಾದರೂ ಅವನ ಶ್ರದ್ಧೆ, ಅವನ ನೆಲದ ಸಾರ್ವಭೌಮತೆಯ ರಕ್ಷಣೆಯ ಕಡೆಗಿರುತ್ತದೆ. ಈ ವಿಚಾರದಲ್ಲಿ ಎಲ್ಲಾ ಸೈನಿಕರೂ ಒಂದೇ ರೀತಿ ವರ್ತಿಸುತ್ತಾರೆ, ಯೋಚಿಸುತ್ತಾರೆ ಮತ್ತು ಬದುಕುತ್ತಾರೆ.
ಯಾವ ಸೈನಿಕನೂ ಬಂಧನವನ್ನು ಸಹಿಸಿಕೊಳ್ಳಲಾರ; ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಯುದ್ಧಕೈದಿಗಳಾಗಿ ಸೆರೆಹಿಡಿಯಲ್ಪಡುವ ಸೈನಿಕರ ನೋವುಗಳು, ಕಷ್ಟ-ಕಾರ್ಪಣ್ಯಗಳು, ಅವರು ಅನುಭವಿಸುವ ತುಮುಲ, ವಿಮೂಚನೆಗಾಗಿ ನಡೆಸುವ ನಿರಂತರ ಪ್ರಯತ್ನಗಳನ್ನು ಒಂದಷ್ಟು ಪದಗಳಲ್ಲಿ ವರ್ಣಿಸುವುದು ಕಷ್ಟಸಾಧ್ಯ. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿಯ ಶಿಕ್ಷಾ ಶಿಬಿರದಲ್ಲಿ ಜೆ.ಎ.ಎಲ್. ಕೌಂಟರ್ ಅನುಭವಿಸಿದ್ದೂ ಇಂತಹದ್ದನ್ನೇ.
ಜರ್ಮನಿಯ ಫೀಲ್ಡ್ ಮತ್ತು ಸ್ವಾರ್ಮ್ ಸ್ಟೆಡ್ ಶಿಬಿರಗಳ ಸ್ಥಿತಿಗತಿಗಳನ್ನು ಇಂಚಿಂಚಾಗಿ ಬಿಡಿಸಿಡುವ ಕೌಂಟರ್, ಕೊನೆಗೆ ಕ್ಯಾಂಪಿನಿಂದ ಪಲಾಯನವಾಗಿ ನೂರಾ ಎಪ್ಪತ್ತು ಮೈಲಿ ದೂರದ ಡಚ್ ಗಡಿರೇಖೆ ದಾಟಿ ಹಾಲೆಂಡ್ ತಲುಪುವ 13 ದಿನಗಳ ರೋಚಕ ಕಥಾನಕವನ್ನು ತಮಗೆ ತಿಳಿದಂತೆ ನಿರೂಪಿಸಿದ್ದಾರೆ. ಶಿಕ್ಷಾ ಶಿಬಿರ ಮತ್ತು ಗಡಿಯ ನಡುವೆ ಎದುರಾಗುವ ಹಾಂಟೆ, ವೆಸರ್, ಏಮ್ಸ್ ನದಿಗಳನ್ನು ಪಾರುಮಾಡುವ ಪ್ರಯತ್ನ, ಜೊತೆಗಾರರಾಗಿದ್ದ ಫಾಕ್ಸ್ ಮತ್ತು ಬ್ಲಾಂಕ್ ಅವರೊಂದಿಗಿನ ಸಹಯಾನ, ಕತ್ತಲ ರಾತ್ರಿಗಳ ಪಯಣ, ಜರ್ಮನಿಯ ಕಾಡುಗಳ ವರ್ಣನೆ, ಹಳ್ಳಿಗಳ ಮತ್ತು ಜೋಳದ ಹೊಲಗಳ ಸೌಂದರ್ಯದ ವಿವರಣೆ, ಎದುರಾದ ಅಪಾಯಗಳು, ಬೋಚ್ಗಳ ಸರ್ಪಗಾವಲನ್ನು ಭೇದಿಸಿ ಗುರಿ ತಲುಪಿದ ಯಶೋಗಾಥೆ ಈ ಪುಸ್ತಕದಲ್ಲಿ ಅತ್ಯಂತ ಕೌತುಕಮಯವಾಗಿ ನಿರೂಪಿಸಲ್ಪಟ್ಟಿದೆ.
'ಯಾವುದೇ ರಾಷ್ಟ್ರದ ಸೈನಿಕನೂ ತನ್ನ ರಾಷ್ಟ್ರದ ಘನತೆಯ ರಕ್ಷಣೆಗಾಗಿ ಕರ್ತವ್ಯನಿರತನಾಗಿರುತ್ತಾನೆ ಅಷ್ಟೆ. ಯಾರೇ ಶತ್ರುದಳದ ಸೈನಿಕರು ಯುದ್ಧಕೈದಿಯಾಗಿ ಸೆರೆಸಿಕ್ಕರೆ ಅವರ ಕುರಿತಾಗಿ ಸಹಾನುಭೂತಿ ಹೊಂದಬೇಕು. ಅವರು ಅಪರಾಧಿಗಳಾಗಿರುವುದಿಲ್ಲ ಅಥವಾ ತಾವು ಸಿಕ್ಕಿಬಿದ್ದ ರಾಷ್ಟ್ರದ ನೆಲದ ಕಾನೂನಿಗೆ ದ್ರೋಹ ಬಗೆದಿರುವುದಿಲ್ಲ; ಹೀಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು' ಎನ್ನುವ ಆಶಯ ಈ ಪುಸ್ತಕದ ಹಿಂದಿದೆ. ಇದರಲ್ಲಿನ ಸಮೃದ್ಧ ರೋಚಕ ಭೂರಿಭೋಜನ ನಿಮ್ಮ ಓದಿನ ಹಸಿವನ್ನು ಖಂಡಿತಾ ತೃಪ್ತಿಗೊಳಿಸುತ್ತದೆ ಎನ್ನುವ ಅಧಮ್ಯ ನಂಬಿಕೆ ನನಗಿದೆ. ಇನ್ನು ಈ ಪುಸ್ತಕ ನಿಮ್ಮದು.
- ವಿಶ್ವಾಸ್ ಭಾರದ್ವಾಜ್ (ವಿಭಾ)
Product Information
Product Information
Shipping & Returns

Original: $1.62
-70%$1.62
$0.49Product Information
Product Information
Shipping & Returns
Shipping & Returns
Description