ಅಭಿರುಚಿ
"ಡಾ. ಗಣೇಶ್ ಅವರು ಬರಿಯ ಅವಧಾನಿಗಳಲ್ಲ. ಶತಾವಧಾನಿಗಳು. ಅವರು ಒಂದೊಂದು ಪದಕ್ಕೂ ನೂರು ಅರ್ಥ ಹೇಳಬಲ್ಲ ಚತುರ ವಾಗ್ನಿ. ಒಂದೊಂದು ಸಂದರ್ಭಕ್ಕೂ ನೂರು ಉದಾಹರಣೆ ಹೇಳಬಲ್ಲ ಧೀಮಂತ. ಅವರ ಪ್ರತಿ ಮಾತೂ ಪ್ರತಿ ಅಕ್ಷರವೂ ಶುದ್ಧಾತಿಶುದ್ಧ ಸವಿಗನ್ನಡದಿಂದಲೇ ಕೂಡಿರುತ್ತದೆ ಎಂಬುದು ಇನ್ನೊಂದು ಹೆಚ್ಚುಗಾರಿಕೆ.
ಗಣೇಶ್ ಬರಹಗಳ ವಿಶೇಷತೆಯೆಂದರೆ ಹುಡುಕಾಟ. ಒಂದೊಂದು ವಿಷಯವನ್ನೂ ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆ ಕುರಿತು ಗಂಭೀರವಾಗಿ ಯೋಚಿಸುತ್ತಾರೆ. ಅನಂತರ ತಮಗೆ ಅನಿಸಿದ್ದನ್ನು ಶ್ರದ್ದೆಯಿಂದ ಮತ್ತು ಶಿಸ್ತಿನಲ್ಲಿ ಬರೆಯುತ್ತಾರೆ....
'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಮಾತು ಶತಾವಧಾನಿ ಗಣೇಶ್ ಅವರಿಗೆಂದೇ ಸೃಷ್ಟಿಯಾಯಿತೋ ಏನೋ. ಯಾಕೆಂದರೆ ಗಣೇಶ್ರು ಅರಿಯದ ಸಂಗತಿಯಿಲ್ಲ, ಬರೆಯದ ವಿಚಾರವಿಲ್ಲ.... ಏಕಕಾಲಕ್ಕೆ ಪ್ರಬಂಧ ಮತ್ತು ಕಾವ್ಯವಾಗುವ ಅನುಪಮ ಗುಣ ಗಣೇಶ್ ಅವರ ಬರಹಗಳಿಗಿದೆ. ಇದರ ಜತೆ ಜತೆಗೆ ಪ್ರತಿ ಬರಹದಲ್ಲೂ ಹತ್ತು ಹಲವು ನವನವೀನ ವಿಷಯಗಳನ್ನು ಅವರ ಬರಹಗಳು ತೆರೆದಿಡುತ್ತಾ ಹೋಗುವುದರಿಂದ ವಿಶ್ವಕೋಶವೂ ನಿಘಂಟೂ ಆಗಿಬಿಡುವ ಇನ್ನೊಂದು ಸಾಧ್ಯತೆಯೂ ಈ ಬರಹಗಳಿಗಿದೆ...."
ವಿಶ್ವೇಶ್ವರ ಭಟ್ ('ಮುನ್ನುಡಿ'ಯಿಂದ)
Product Information
Product Information
Shipping & Returns

Description