🎉 Up to 70% Off Selected ItemsShop Sale
HomeStore

ಅವರ ಕೈಹಿಡಿದು ನಡೆಯೋಣವೇ?

Product image 1
Product image 2

ಅವರ ಕೈಹಿಡಿದು ನಡೆಯೋಣವೇ?

ಅವರ ಕೈಹಿಡಿದು ನಡೆಯೋಣವೇ?

'ದೀಕ್ಷಿತ್ ನಾಯರ್' ಎಂಬ ನಾನು ಈವರೆಗೆ ಕೇಳರಿಯದ, ಅಪರೂಪದ ಹೆಸರಿನ ಈ ತರುಣನನ್ನು ಕಂಡರೆ ನನಗೆ ಅಚ್ಚರಿಯಾಗುತ್ತದೆ. ಇಂದಿನ ತರುಣ ಜನಾಂಗದಲ್ಲಿ ಸಾಹಿತ್ಯದ ಬಗ್ಗೆ ಈ ಪಾಟಿ ಪ್ಯಾಷನ್ ಇರುವವರೂ ಇದ್ದಾರಲ್ಲ ಎಂದು ಈ ಅಚ್ಚರಿ. ಆಧುನಿಕ ಕನ್ನಡ ಸಾಹಿತ್ಯ, ಅದರಲ್ಲೂ ಕಾವ್ಯ ಪರಂಪರೆಯ ಬಗ್ಗೆ ಇವನ ಆಳವಾದ ಅಧ್ಯಯನ ಮತ್ತು ಸೂಕ್ಷ್ಮ ಗ್ರಹಿಕೆಯ ಬಗ್ಗೆ ಈ ಅಚ್ಚರಿ. ಜತೆಗೆ ಇಂಥವರಿಂದ ಗಂಭೀರ ಸಾಹಿತ್ಯಕ್ಕೆ ಕನ್ನಡದಲ್ಲಿ ಭವಿಷ್ಯವಿದೆ ಎಂಬ ಸಮಾಧಾನ, ನಿರಾಳ ಭಾವ.

ಈಗಾಗಲೇ ತನ್ನ ಪ್ರಕಟಿತ ಮೂರು ಕೃತಿಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತನಾಗಿರುವ ಈ ಯುವಕ ಇದೀಗ 'ಅವರ ಕೈಹಿಡಿದು ನಡೆಯೋಣವೇ' ಎಂಬ ತನ್ನ ನಾಲ್ಕನೆಯ ಕೃತಿಯನ್ನು ಹೊರತರುತ್ತಿದ್ದಾನೆ. ಇದರಲ್ಲಿ ತಮ್ಮ ನ್ಯೂನತೆಗಳನ್ನು ಬದಿಗೊತ್ತಿ, ತಮ್ಮದೇ ವಿಶಿಷ್ಟ ರೀತಿಗಳಲ್ಲಿ ಸಾಧನೆ ಮತ್ತು ಸಮಾಜಸೇವೆ ಮಾಡುತ್ತಿರುವ ಅಜ್ಞಾತ ವ್ಯಕ್ತಿಗಳ ಹೃದಯಸ್ಪರ್ಶಿ ಚಿತ್ರಣವಿದೆ. ಸ್ಫೂರ್ತಿದಾಯಕ ಆಪ್ತ ಬರಹಗಳಿವೆ. ದೀಕ್ಷಿತ್ ನಾಯರ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ನೆಲೆ ನಿಲ್ಲಲಿ ಎಂದು ಹೃತ್ತೂರ್ವಕವಾಗಿ ಹಾರೈಸುತ್ತೇನೆ.

- ಬಿ.ಆರ್.ಲಕ್ಷ್ಮಣರಾವ್

ಅವನು ಸಂದರ್ಶನಕ್ಕಾಗಿ ಪಟ್ಟಿರುವ ಕಷ್ಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವನಿಗೆ 'ಇದೆಲ್ಲ ಬೇಕೇನೋ?' ಎಂದು ಬುದ್ದಿವಾದ ಹೇಳಿದ್ದೇನೆ. 'ಕೇವಲ ಜನಪ್ರಿಯತೆ ಹೊಂದಿರುವ ಜನರನ್ನು ಮಾತ್ರ ನಾವು ಹೊಗಳುತ್ತೇವೆ ಆದರೆ ಇಂಥ ವ್ಯಕ್ತಿಗಳನ್ನು ಪರಿಚಯಿಸುವವರು ಯಾರು?' ಎಂದು ಅವನು ಹೇಳಿದಾಗಲೆಲ್ಲ ಅವನ ಕಣ್ಣಲ್ಲಿ ಮೂಡಿಬರುವ ಖುಷಿ ನನ್ನನ್ನು ಕಟ್ಟಿ ಹಾಕುತ್ತದೆ. ಇದ್ಯಾವುದೂ ಅವನು ತನ್ನ ಸ್ವಂತಕ್ಕಾಗಿ ಮಾಡುತ್ತಿರುವ ಕೆಲಸವಲ್ಲ. ಒಬ್ಬ ಪ್ರಾಮಾಣಿಕ ಲೇಖಕ ಮಾಡಬೇಕಾಗಿರುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾನೆ. ಜಗತ್ತು ಇವನ ಬಗ್ಗೆ ಇಲ್ಲಸಲ್ಲದ್ದು ಹೇಳಿದರೂ ನನಗೆ ಇವನ ಮೇಲಿನ ಗೌರವ ಹಾಗೂ ಪ್ರೀತಿ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಇನ್ನೂ ಇಂಥ ನೂರಾರು ಜನರ ಪರಿಚಯ ಮಾಡಿಕೊಡಲಿದ್ದಾನೆ. ಅವನಿಗೆ ಬೇಕಾಗಿರುವುದು ನಮ್ಮ ಬೆಂಬಲವಷ್ಟೇ. ಅವನ ಪರಿಶ್ರಮ ಅವನ ಬರಹಗಳಲ್ಲಿ ಎಂದಿಗೂ ಜೀವಂತ. ಆಲ್ ದಿ ಬೆಸ್ಟ್ ಗೆಳೆಯ. ಅವರ ಕೈಹಿಡಿದು ನಡೆಯಲು ನಾನು ಸಿದ್ಧ.

-ಯತೀಶ ಎಸ್. 

$2.43
ಅವರ ಕೈಹಿಡಿದು ನಡೆಯೋಣವೇ?
$2.43

Product Information

Shipping & Returns

Description

ಅವರ ಕೈಹಿಡಿದು ನಡೆಯೋಣವೇ? | Harivu Books