🎉 Up to 70% Off Selected ItemsShop Sale
HomeStore

ಬದಲಾವಣೆಯ ತುರ್ತು

Product image 1
Product image 2

ಬದಲಾವಣೆಯ ತುರ್ತು

ಬದಲಾವಣೆಯ ತುರ್ತು

ಇದು ಜೆ. ಕೃಷ್ಣಮೂರ್ತಿಯವರ ಐವತ್ತು ವರ್ಷಗಳಷ್ಟು ಹಳೆಯದಾದ ಕೃತಿಯ ಹೊಸ ಆವೃತ್ತಿ. ಈ ಗ್ರಂಥದಲ್ಲಿ ನಿರೂಪಿತವಾದ ವಿಷಯಗಳು ಅನುಬಂಧನ, ಅರಿವು, ಭಯ ಮತ್ತು ದೇವರು ಈ ವಿಷಯಗಳಿಂದ ಹಿಡಿದು ನೈತಿಕತೆ ಮತ್ತು ಕಲೆ, ಯಾತನೆ ಮತ್ತು ಆತ್ಮಹತ್ಯೆ ವರೆಗೆ ಚಾಚಿಕೊಂಡಿವೆ. ಇಲ್ಲಿನ ಸಂವಾದಗಳು ಬಂಧುರತೆ ಹಾಗೂ ನಿಖರತೆಯಿಂದ ಬೆಳಗುತ್ತವೆ; ಕೃಷ್ಣಮೂರ್ತಿಯವರ ಬೋಧನೆಗಳ ಬಗೆಗಿನ ತಿಳಿವಳಿಕೆಯನ್ನು ವಿಸ್ತರಿಸಿ ಕೊಳ್ಳಬೇಕು ಮತ್ತು ಹರಿತಮಾಡಿಕೊಳ್ಳಬೇಕು ಎಂಬಂಥ ಓದುಗರಿಗೆ ಆನಂದ ನೀಡುತ್ತವೆ. ಸಂವಾದ ಮುಖೇನ ಹೊಮ್ಮಿದ ಶೋಧ ಪ್ರವೃತ್ತಿ ಹಾಗೂ ಸಂವಹನ ಕಲೆ ಹಲವು ವಾಕ್ಯ ಪುಂಜಗಳಲ್ಲಿ ಅತ್ಯುತ್ತಮ ಅಭಿವ್ಯಕ್ತಿ ಕಂಡಿವೆ. ಉದಾತ್ತ ಆದರ್ಶಗಳಲ್ಲಿ ಹುದುಗಿರುವ ಡಾಂಭಿಕತೆಯನ್ನು ಈ ಹಲವು ವಾಕ್ಯ ಪುಂಜಗಳಲ್ಲಿ ಅವರು ಬಯಲು ಮಾಡುತ್ತಾರೆ. 'ನೀವು ವಿದ್ವೇಷವನ್ನು ಸಂಚಯನ ಮಾಡಿದ ಮೇಲೆಯೇ ಕ್ಷಮೆ ಕಂಡುಬರುತ್ತದೆ. ಕ್ಷಮೆಯೇ ಅಸಮಾಧಾನ'. 'ನಾನು' ರಹಿತವಾದುದೇ ಕಲೆ ಎಂದು ಕಲೆಯನ್ನು ಮರು ವ್ಯಾಖ್ಯಾನಿಸಲಾಗಿದೆ. ಆತ್ಮಹತ್ಯೆ ಹಾಗೂ ದಯಾ ಮರಣದ ನೈತಿಕತೆ ಬಗೆಗಿನ ಚರ್ಚೆ ಋಜು ಮಾರ್ಗದ ಜೀವನದ ಬಗೆಗಿನ ಚಿಂತನ ಮಂಥನವಾಗಿ ಮಾರ್ಪಡುತ್ತದೆ. ಭಯದ ಬಗೆಗಿನ ಪ್ರಶ್ನೆ ಅವಲಂಬನದ ಬಗೆಗಿನ ಚರ್ಚೆಯಾಗುತ್ತದೆ. 'ಈ ಜಗತ್ತಿನಲ್ಲಿ ನಾನು ಬದುಕುವುದು ಹೇಗೆ?' ಎಂಬ ಪ್ರಶ್ನೆ 'ನಾನು ಹೇಗೆ ಬದಲಾಗಲಿ?' ಎಂಬ ಪ್ರಶ್ನೆಯ ರೂಪ ತಳೆಯುತ್ತದೆ. ಹೀಗೆ ಪ್ರಜ್ಞಾವಂತ ಓದುಗನ ಪಾಲಿಗೆ ಪ್ರತಿಯೊಂದು ಅಧ್ಯಾಯವೂ ಹೊಸ ಒಳನೋಟಗಳನ್ನು ಒದಗಿಸುತ್ತದೆ.

ಜೆ. ಕೃಷ್ಣಮೂರ್ತಿ (1895-1986] ಸಾರ್ವಕಾಲಿಕ ಜಾಗತಿಕ ಶ್ರೇಷ್ಠ ತತ್ವಜ್ಞಾನಿ ಹಾಗೂ ಧಾರ್ಮಿಕ ಬೋಧಕ ಎಂದು ಮಾನ್ಯರು. ಆರು ದಶಕಗಳಿಗೂ ಹೆಚ್ಚುಕಾಲ ಅವರು ಜಗತ್ತಿನಾದ್ಯಂತ ಸಂಚರಿಸಿ ಓರ್ವ ಗೆಳೆಯನಂತೆ, ಗುರುವಿನ ಹಾಗಲ್ಲ, ಭಾಷಣಗಳನ್ನು ಮಾಡಿದ್ದಾರೆ. ಸಂವಾದಗಳನ್ನು ನಡೆಸಿದ್ದಾರೆ. ಅವರ ಬೋಧನೆಗಳು ಗ್ರಂಥಜ್ಞಾನ ಹಾಗೂ ಸಿದ್ಧಾಂತಗಳನ್ನು ಆಧರಿಸಿಲ್ಲ. ಆದುದರಿಂದಲೇ ಸದ್ಯದ ಜಾಗತಿಕ ಬಿಕ್ಕಟ್ಟು ಹಾಗೂ ಮಾನವನ ಇರವಿನ ಚಿರಂತನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರ ಜತೆ ಅವು ನೇರವಾಗಿ ಸಂವಹನ ಸಾಧಿಸುತ್ತವೆ.

$0.78

Original: $2.59

-70%
ಬದಲಾವಣೆಯ ತುರ್ತು

$2.59

$0.78

Product Information

Shipping & Returns

Description

ಬದಲಾವಣೆಯ ತುರ್ತು | Harivu Books