ಬಣಮಿ
ನೆಲದ ಮೇಲೆ ಒಂದು ಹನಿ ನೀರು ಸುರಿಸದೆ ಸುಮ್ಮನೆ ಗುಂಪುಗೂಡಿ ಹರಟೆ ಹೊಡೆಯುತ್ತಿದ್ದ, ಹಿಂಡು ಹಿಂಡು ದಟ್ಟ ಮೋಡಗಳಿಗೆ ನೋಡಿ * ತುಟಿ ಮ್ಯಾಗ ಹನಿ ನೀರಿಲ್ಲ ಗದರಿಸಿ ಗದರಿಸಿ ಮಂದಿಗಿ ಎದಿ ಒಡಸಲತವ" ಎಂದು ಗಡಿಗೆ ತನ್ನೊಳಗೆ ಒಟ ಒಟ ಒದರುತ್ತಿದ್ದಳು.
ಕಪ್ಪು ಆವರಿಸಿದ ಮುಗಿಲ ಕೆಳಗೆ ನೆಲ ಅಂಜುತ್ತಾ ಹಿಂದೆ ಸರಿಯುತ್ತಿತ್ತು. ಗಾಳಿ ತನ್ನ ಪಾಡಿಗೆ ತಾ ತಣ್ಣಗೆ ಸುಳಿದಾಡುತ್ತಿತ್ತು. ಮೆಲ್ಲಗೆ ತೇಲಿ ಬರುವ ಒಣ ಎಲೆಗಳು ನೆಲದ ಮೇಲೆ ಬೀಳುವ ಮನಸ್ಸಿಲ್ಲದೆ ಗಾಳಿಯಲ್ಲಿ ಹಾರುತ್ತಾ ನೆಲಕ್ಕಿಳಿಯುತ್ತಿದ್ದವು. ತಂಪು ಭಯ ಹುಟ್ಟಿಸುವಂತೆ ಇನ್ನಷ್ಟು ಬಿಗಿಯಾಗಿ ಗಾಳಿಗೆ ಅಪ್ಪಿಕೊಂಡಿತ್ತು. ಒಮ್ಮೆಲೆ ಯಾಕೋ ಗಾಳಿ ಜೋರಾಗಿ ಬೀಸಿತು. ಧೂಳು ಹುಚ್ಚೆದ್ದು ಕುಣಿಯುವುದೊಂದೆ ಬಾಕಿ, ಮೈಮೇಲೆ 'ಖಡಲ್' ಎಂದು ಮುಗಿಲು ಮುರಿದು ಬಿದ್ದಂತೆ ಜೋರಾಗಿ ಬಂದ ಸದ್ದಿಗೆ ಗಡಿಗೆ ಅಂಗಳದಿಂದ ನಡುಮನೆಗೆ 'ಠಣ್' ಎಂದು ಹಾರಿದಳು. ಭಯಂಕರ ಸದ್ದು ಬಂದರು ಮಿಂಚು ಯಾರ ಕಣ್ಣಿಗೂ ಬೀಳಲಿಲ್ಲ. ಎಲ್ಲಿ ತಮ್ಮ ಕಣ್ಣುಗಳು ಕೆಲಸ ಮಾಡುವುದು ನಿಲ್ಲಿಸಿದವೆ ಎಂದು ಅನುಮಾನ ಪಟ್ಟು, ಊರ ಮಂದಿ ಪರಸ್ಪರ ಗುರುತು ಹಿಡಿದು ಹೆಸರು ಮತ್ತೊಮ್ಮೆ ವಿನಿಮಯ ಮಾಡಿಕೊಂಡರು. ಊರ ಪ್ರತಿ ಮನೆಯ ಬಾಗಿಲಿನಿಂದ ಗದ್ದಲ ಬೀದಿಗೆ ಬಂದು ಅಪ್ಪಳಿಸುತ್ತಿತ್ತು. ಗಡಿಗೆವ್ವ ಎಲ್ಲರೂ ಮಾಡುತ್ತಿರುವ ಕರಾಮತಿ ತಾನು ಮಾಡಬೇಕೆಂದು " ಬೇರಪ್ಪ" ಎಂದು ಕರೆದಳು. ಯಾವ ಉತ್ತರವೂ ಬರಲಿಲ್ಲ. ಮತ್ತೊಮ್ಮೆ ಜೋರಾಗಿ "ಬೇರಪ್ಪ...ಓ ಬೇರು, ನನ್ನಪ್ಪ ಎಲ್ಲಿದಿಯೋ ಹುಲಿ" ಎಂದು ಜೋರಾಗಿ ಕೂಗಿದಳು. ಆ ಕಡೆಯಿಂದ ಯಾವ ಧ್ವನಿಯೂ ಇಲ್ಲ.
-(ಮುಗಿಲ ತುದಿ ಕಥೆಯಿಂದ)
Product Information
Product Information
Shipping & Returns

Original: $1.19
-70%$1.19
$0.36Product Information
Product Information
Shipping & Returns
Shipping & Returns
Description