🎉 Up to 70% Off Selected ItemsShop Sale
HomeStore

ಭೀಮಗಾನ

Product image 1
Product image 2

ಭೀಮಗಾನ

ಭೀಮಗಾನ

ಇದು ಭೀಮಗಾನ, ಪಂ.ಭೀಮಸೇನ ಜೋಷಿ ಅವರ ಗಾಯನ ಎಷ್ಟು ಶ್ರೇಷ್ಠವೋ, ಅವರ ಬದುಕಿನ ನಾದವೂ ಅಷ್ಟೇ ಮಧುರ. ಅವರ ರಾಗಾಲಾಪ ಎಷ್ಟು ಭೌಮವೋ, ನಡೆಯೂ ಅಷ್ಟೇ ವೈವಿಧ್ಯಮಯ. ಈ ಶ್ರೇಷ್ಠ ಗಾಯಕನ ಬದುಕಿನ ಬಣ್ಣವನ್ನು ಅಕ್ಷರಗಳಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಪತ್ರಕರ್ತೆ ಚಿತ್ರಾ ಸಂತೋಷ್.

ಇಲ್ಲಿ ಮನೆಯಿಂದ ಓಡಿಹೋಗುವ ೧೧ ವರ್ಷದ ಭೀಮನೂ ಇದ್ದಾನೆ, ನಟಸಾರ್ವಭೌಮ ಡಾ.ರಾಜ್ರನ್ನು ಹಾಡಿ ತಣಿಸುವ ಪ್ರೌಢ ಭೀಮಸೇನ ಜೋಷಿಯೂ ಇದ್ದಾರೆ, ಭಾರತ ರತ್ನವಾಗಿ ಇನ್ನೋರ್ವ ರತ್ನದ ಜೊತೆ ಸಂಭಾಷಿಸುವ ನಿಜ ರತ್ನವೂ ಇದ್ದಾರೆ. ಜೋಷಿಯವರ ಬದುಕಿನ ವಿವಿಧ ಹಂತಗಳನ್ನು ನಾದಲೋಕದ ವಿವಿಧ ಗಣ್ಯರಿಂದ ಹೊರತೆಗೆದ ಫಲವಿದು. ಪಂ.ಬಾಲಮುರಳೀಕೃಷ್ಣ, ಉಸ್ತಾದ್ ರಶೀದ್ ಖಾನ್, ಗುರು ಸವಾಯಿ ಗಂಧರ್ವ... ಮೊದಲಾದವರ ಜತೆಗೆಲ್ಲ ಭೀಮಣ್ಣನ ಬಂಧ ಇಲ್ಲಿ ತೆರೆದುಕೊಳ್ಳುತ್ತಾ ಸಾಗಿದೆ. ಇದರ ಜೊತೆಗೇ ಪಂ.ವಿನಾಯಕ ತೊರವಿ, ಪಂ.ವೆಂಕಟೇಶಕುಮಾರ್, ಪಂ.ಜಯತೀರ್ಥ ಮೇವುಂಡಿ, ಸಂಗೀತಾ ಕಟ್ಟಿ ಮೊದಲಾದ ಇಂದಿನ ಹಿಂದೂಸ್ಥಾನಿ ಗಾನಲೋಕದ ವಜ್ರಗಳೆಲ್ಲ ಆಸೀನರಾಗಿ ಭೀಮಸೇನ ಜೋಷಿಯವರ ಬದುಕಿನ ತುಣುಕುಗಳನ್ನು ಈ ಕೃತಿಯ ತುಂಬ ಹಾಡಿದಂತಿದೆ.

ಭೀಮಸೇನ ಜೋಷಿ ಹಿಂದೂಸ್ಥಾನಿ ಸಂಗೀತಕ್ಕೇ ಗೌರವ ತಂದವರು. ಕನ್ನಡಿಗರಿಗೂ ಹೆಮ್ಮೆ. ಅವರ ಬದುಕಿನ ಕಥನ ಎಷ್ಟು ಪ್ರೇರಣದಾಯಕವೋ ಅಷ್ಟೇ ರೋಚಕ. ಅದನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಬರೆದಿರುವ ಇಲ್ಲಿನ ಬರಹಗಳಲ್ಲಿ ಪತ್ರಕರ್ತರಿಗೆ ಸಹಜವಾದ ಖಚಿತತೆ ಇದೆ, ಭಾವಪೂರಿತ ನಿರೂಪಣೆಯ ಆಪ್ತತೆಯೂ ಇದೆ. ಇದು ಮುದ ನೀಡುವ ಕಥನವೂ ಹೌದು, ಭೀಮ ಬದುಕಿನ ಮಾಹಿತಿ ಕೋಶವೂ ಹೌದು. ಭೀಮಸೇನ ಜೋಷಿ ಎಲ್ಲಿದ್ದಾರೆ ಅಂದರೆ ಇಂದಿಗೂ ಅವರ ಗಾನವನ್ನು ಆಲಿಸುವ ಅಭಿಮಾನಿಗಳಲ್ಲಿ, ಹೀಗೆ ಶ್ರದ್ದೆಯಿಂದ ಬರೆಯುವ ಕಲಾಭಿಮಾನದ ಬರಹಗಳಲ್ಲಿ ಎನ್ನಬೇಕು. ಇಲ್ಲಿರುವುದು ಭೀಮಸೇನ ಜೋಷಿಯವರ ಆಲಾಪ, ಅವರ ಖಯಾಲ್, ಇದು ಭೀಮ ಮೆಹಫಿಲ್...

ವಿದ್ಯಾರಶ್ಮಿ ಪೆಲತ್ತಡ್ಕ | ಪತ್ರಕರ್ತೆ | ಕವಯತ್ರಿ

$0.55

Original: $1.84

-70%
ಭೀಮಗಾನ

$1.84

$0.55

Product Information

Shipping & Returns

Description

ಭೀಮಗಾನ | Harivu Books