🎉 Up to 70% Off Selected ItemsShop Sale
HomeStore

ಭೀಷ್ಮ ಪ್ರಜ್ಞೆ

Product image 1
Product image 2

ಭೀಷ್ಮ ಪ್ರಜ್ಞೆ

ಭೀಷ್ಮ ಪ್ರಜ್ಞೆ

ಅನಂತಮೂರ್ತಿ ಅವರ ಅಪ್ರಕಟಿತ ಬರಹಗಳ ಸಂಪುಟ

ಮಹಾಭಾರತದಲ್ಲಿ ಭೀಷ್ಮನನ್ನು ಎಲ್ಲರೂ ಯಾಚಿಸುವವರೆ; ಸ್ವಂತ ಅಪ್ಪನೂ ಕೂಡ. ಅಪ್ಪನ ಕಾಮಜೀವನಕ್ಕಾಗಿ ತನ್ನ ಕಾಮ ಜೀವನವನ್ನು ತ್ಯಾಗ ಮಾಡಿದ ಈ ಭೀಷ್ಮನನ್ನು ಯಾರೂ ಉತ್ಕಟವಾಗಿ ಪ್ರೀತಿಸುವಂತೆ ನಮಗೆ ಕಾಣುವುದಿಲ್ಲ. ಹುಷಾರು ತಪ್ಪಿ ನಡೆದುಕೊಳ್ಳುವವರೇ - ಅರ್ಜುನ, ಭೀಮ, ಕರ್ಣ, ದೌಪದಿ ನಮಗೆ ಪ್ರಿಯರಾಗುವುದು. ಇತ್ತ ಗೃಹಸ್ಥನೂ ಆಗದೆ, ಸನ್ಯಾಸಿಯೂ ಆಗದೆ ಎಲ್ಲದಕ್ಕೂ ಸಾಕ್ಷಿಯಾಗಿ ಮುದುಕನಿಗೆ ಯೌವನವೇ ಇಲ್ಲವೆನ್ನಿಸುತ್ತದೆ... 

ಈ ವ್ಯಕ್ತಿಯ ನೈತಿಕ ಲೋಕ ಯಾವ ಬಗೆಯದೆಂದು ಆಲೋಚಿಸುತ್ತಿದ್ದಂತೆ ನನಗೆ ಹೊಳೆದದ್ದು ತನ್ನ ಕಾಲಕ್ಕೆ ಆಯ್ಕೆಯ ಸಂಕಟದಲ್ಲಿ ಎದುರಾಗುವ, ಸರಳವಾದ ತೀರ್ಪಿಗೆ ಬರಲಾರದೆ ಸುಮ್ಮನಿರುವಂತೆ ತೋರುವ ಲಿಬರಲ್ ಧೋರಣೆಯ ಮನುಷ್ಯನದು. ತಾನು ಮಾಡುವುದು ತಪ್ಪೋ ಸರಿಯೋ ಎಂಬ ಬಗ್ಗೆ ತೀರ ತಲೆಕೆಡಿಸಿಕೊಳ್ಳದವರೇ ಎಲ್ಲ ಕಾಲದಲ್ಲೂ ಕ್ರಿಯಾಶೀಲರು. ಇಂಥವರ ನಡುವೆ ಭೀಷ್ಮ ಮೌನಿ; ಕಾಲಕ್ಕೆ ತನ್ನನ್ನು ಒಡ್ಡಿಕೊಂಡವನು. ಯೌವನವನ್ನೇ ಕಾಣದ ಅಕಾಲ ವೃದ್ಧ.

...ಸದ್ಯ ಮತ್ತು ಶಾಶ್ವತಕ್ಕೆ ಕನ್ನಡಿಯಾಗಿರುವುದು ಒಂದು ಭಾಷೆಯ ನಿಜವಾದ ಜವಾಬ್ದಾರಿ. ನಾವು ಅನೇಕ ಸಲ ಸದ್ಯದ ಬಗ್ಗೆ ದಿಗಿಲುಗೊಂಡು ಶಾಶ್ವತವನ್ನು ಮರೆತೆಬಿಡುತ್ತೇವೆ. ಕೆಲವು ಸಲ ಶಾಶ್ವತದ ಆರಾಧಕರಾಗಿ ಸದ್ಯಕ್ಕೆ ಸ್ಪಂದಿಸದೆ ಹೋಗುತ್ತೇವೆ. ಪಂಪ ಸದ್ಯಕ್ಕೂ ಮಿಡಿದ. ತನ್ನ ರಾಜನನ್ನೇ ಅರ್ಜುನನ್ನಾಗಿ ತನ್ನ ಕಾಲದವನನ್ನೇ ಮಾಡಿಕೊಂಡ. ಕರ್ನಾಟಕದ ನದಿಗಳು ಕೂಡ ಪಂಪನಲ್ಲಿ ಹರಿಯುತ್ತವೆ. ಸದ್ಯ ಮತ್ತು ಶಾಶ್ವತವನ್ನು ನಾವು ಕನ್ನಡದಲ್ಲಿ ಯಾವತ್ತೂ ಬೆರೆಸುತ್ತಾ ಬಂದಿದ್ದೇವೆ...

(ಒಳಗಿನ ಪುಟಗಳಿಂದ)

$1.08
ಭೀಷ್ಮ ಪ್ರಜ್ಞೆ
$1.08

Product Information

Shipping & Returns

Description

ಭೀಷ್ಮ ಪ್ರಜ್ಞೆ | Harivu Books