🎉 Up to 70% Off Selected ItemsShop Sale
HomeStore

ಛಾಂದೋಗ್ಯ ಉಪನಿಷದ್ವಿಜ್ಞಾನ

Product image 1
Product image 2

ಛಾಂದೋಗ್ಯ ಉಪನಿಷದ್ವಿಜ್ಞಾನ

ಛಾಂದೋಗ್ಯ ಉಪನಿಷದ್ವಿಜ್ಞಾನ

ಸಾಮವೇದಕ್ಕೆ ಸಂಬಂಧಿಸಿದ ಈ ಛಾಂದೋಗ್ಯ ಉಪನಿಷತ್ತಿನಲ್ಲಿ ಸಾಮಗಾನದ ಬಗೆಗೆ ವಿಶೇಷ ಒತ್ತು ನೀಡಲಾಗಿದೆ. ಆತ್ಮಸಾಕ್ಷಾತ್ಕಾರಕ್ಕೆ ಇದರಲ್ಲಿ ಅನೇಕ ಉಪಾಸನಾ ಮಾರ್ಗಗಳನ್ನು ಹೇಳಿದ್ದರೂ ಉದ್ದೀಥ ಮಹಾಸಾಮಗಾನವನ್ನು ವಿವರಿಸಲು ಎರಡು ಅಧ್ಯಾಯಗಳನ್ನೇ ಮೀಸಲಾಗಿ ಇರಿಸಲಾಗಿದೆ.

ವಿವಿಧ ಉಪಾಸನಾ ಮಾರ್ಗಗಳನ್ನು ಇಲ್ಲಿ 'ವಿದ್ಯೆ' ಎಂದು ಕರೆಯಲಾಗಿದೆ. ಉದ್ದೀಥ ವಿದ್ಯೆ, ಮಧು ವಿದ್ಯೆ, ಗಾಯತ್ರಿ ಉಪಾಸನೆ, ಶಾಂಡಿಲ್ಯ ವಿದ್ಯೆ, ಪುರುಷ ವಿದ್ಯೆ, ಸಂವರ್ಗ ವಿದ್ಯೆ, ಷೋಡಶಕಲಾ ವಿದ್ಯೆ, ಉಪಕೋಸಲ ವಿದ್ಯೆ, ಪ್ರಾಣ ವಿದ್ಯೆ, ಪಂಚಾಗ್ನಿ ವಿದ್ಯೆ, ವೈಶ್ವಾನರ ವಿದ್ಯೆ, ಸದ್ವಿದ್ಯೆ, ಭೂಮ ವಿದ್ಯೆ, ದಹರ ವಿದ್ಯೆಗಳೆಂಬ ಹದಿನಾಲ್ಕು ಬಗೆಯ ಉಪಾಸನಾ ಮಾರ್ಗಗಳನ್ನು ಎಂಟು ಅಧ್ಯಾಯಗಳಲ್ಲಿ ವಿವರಿಸಲಾಗಿದೆ."

ಇಂದು "ಉಪಾಸನೆ"ಯಂತಹ ಪದಗಳು ನಿಘಂಟಿನಲ್ಲಿ ಮಾತ್ರ ಉಳಿಯುವ ಅಪಾಯ ಬರುತ್ತಿದೆ. ಆದರೆ, ಸಂಸ್ಕಾರವಂತ ಮತ್ತು ನಿಜವಾದ ವಿದ್ಯಾವಂತ ಯುವಕರು ಇಂತಹ ವಿದ್ಯೆಯನ್ನು ಅಭ್ಯಾಸಮಾಡುವ ಕಡೆಗೆ ಒಲವು ತೋರುತ್ತಿರುವುದು ಸ್ವಲ್ಪಮಟ್ಟಿಗೆ ಸಂತಸವನ್ನು ಉಂಟುಮಾಡುತ್ತಿದೆ. ಇವರು ನಿಜವಾದ 'ಆನಂದ'ದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು.

ವಿದ್ವಾನ್ ಯು. ಪದ್ಮನಾಭ ಭಟ್ಟರು ನಮ್ಮ ಭಾರತವರ್ಷದ ಉದ್ದಾಮ ಪಂಡಿತರಲ್ಲಿ ಒಬ್ಬರು. ತಮ್ಮ ಬದುಕನ್ನು ವೇದ-ಉಪನಿಷತ್ತುಗಳತ್ತ ಮುಖ್ಯವಾಗಿ ಯುವಜನತೆ ಆಕರ್ಷಿತರಾಗುವಂತೆ ಮಾಡಲು ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಅದರಿಂದಾಗಿ, ವಸ್ತುನಿಷ್ಠ ವ್ಯಾಖ್ಯಾನದ ಹೆಸರಿನಲ್ಲಿ ಮನಮುಟ್ಟುವಂತೆ ಕ್ರಮಬದ್ಧವಾಗಿ ಪಾಠಮಾಡುತ್ತಾರೆ. ಇದು ಕನ್ನಡದ ಭಾಗ್ಯವೂ ಕೂಡ.

ಇದುವರೆಗೆ, ವಿದ್ವಾನ್ ಯು. ಪದ್ಮನಾಭ ಭಟ್ಟರ ಲೇಖನಿಯಿಂದ ಮೂಡಿಬಂದ ಒಂಬತ್ತು ಉಪನಿಷದ್ವಿಜ್ಞಾನ ಕೃತಿಗಳನ್ನು ಹೆಮ್ಮೆಯಿಂದ ಪ್ರಕಟಿಸಿದ್ದೇವೆ. ನಿರೀಕ್ಷೆಗೂ ಮೀರಿ, ಜಿಜ್ಞಾಸುಗಳು ಈ ಕೃತಿಗಳನ್ನು ಸ್ವಾಗತಿಸಿದ್ದಾರೆ. ಈ ಕೃತಿ ಹತ್ತನೆಯ-ಉಪನಿಷದ್ವಿಜ್ಞಾನದ ವಸ್ತುನಿಷ್ಠ ಮನನ.

ಸದ್ಯ, ವೇದಗಳ ವ್ಯಾಖ್ಯಾನದ ವಿಶೇಷ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿದ್ವಾನ್ ಯು. ಪದ್ಮನಾಭ ಭಟ್ಟರು ಇನ್ನೊಂದು ರೀತಿಯಲ್ಲಿ ನಮಗೆ ವಿಶೇಷ ಎನ್ನಿಸುತ್ತಾರೆ. ಇದು ಜಿಜ್ಞಾಸುಗಳ ಭಾಗ್ಯ.

$4.97
ಛಾಂದೋಗ್ಯ ಉಪನಿಷದ್ವಿಜ್ಞಾನ
$4.97

Product Information

Shipping & Returns

Description

ಛಾಂದೋಗ್ಯ ಉಪನಿಷದ್ವಿಜ್ಞಾನ | Harivu Books