🎉 Up to 70% Off Selected ItemsShop Sale
HomeStore

ಚಿಟ್ಟೆ ಹೆಜ್ಜೆ ಜಾಡು

Product image 1
Product image 2

ಚಿಟ್ಟೆ ಹೆಜ್ಜೆ ಜಾಡು

ಚಿಟ್ಟೆ ಹೆಜ್ಜೆ ಜಾಡು

ಈ ಜೋಗಿ ಎಂಬ ಕತೆಗಾರ ಅಥವಾ ಕಾದಂಬರಿಕಾರ ಅಥವಾ ವಿಮರ್ಶಕ ಅಥವಾ ಸಿನಿಮಾ ಸಾಹಿತಿ ಅಥವಾ ಕಿರುತೆರೆಯ ಯುಗಪುರುಷ ಅಥವಾ ಪತ್ರಕರ್ತ ಅಥವಾ ಚಿಂತಕ ಅಥವಾ ಕಿಲಾಡಿ ಅಥವಾ ಸಭ್ಯತೆಯ ವ್ಯಕ್ತಿ. ನಿಜಕ್ಕೂ ಪ್ರತಿಭೆಯ ಗಿರಿ, ಅವನೇ ಅದಕ್ಕೆ ಗರಿ.

ಹಾಗೆಂದರೆ ಅಗೋ ಹೊಗಳಿದ ಎನ್ನಬಾರದು.

ಜೋಗಿಯನ್ನು ಬಲ್ಲವರೇ ಬಲ್ಲರು.

ಬೆಲ್ಲವನ್ನು ಮೆಲ್ಲುವವರಂತೆ.

ಜೋಗಿಯೊಳಗೊಬ್ಬ ಸಂತನಿದ್ದಾನೆ.

ಅದನ್ನು ಬಾಲ್ಯದಲ್ಲೇ ಕಂಡ ಕಾರಣಕ್ಕೆ ಹೇಳುತ್ತಿದ್ದೇನೆ, ಆತ ಎಂಥವರನ್ನೂ ಸಂತೋಷವಾಗಿಡಬಲ್ಲ ಮಾಂತ್ರಿಕತೆ ಹೊಂದಿರುವುದನ್ನೂ ಹಾಗೇ ಬದುಕುವುದನ್ನು ಕಲಿಯುವುದನ್ನೂ ಕಲಿಸಬಲ್ಲ ಅನುಭವಮಂಟಪವನ್ನು ತಾನಾಗಿ ಕೇಳಿದವರಿಗೆಲ್ಲಾ ಕಟ್ಟಿಕೊಡಬಲ್ಲ.

ದೇವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದ ಈ ಜೋಗಿಯಲ್ಲಿ ಇನ್ನೇನು ಕಾಣಬಹುದು..ಹೇಳಿ. ಮಾನವೀಯತೆ ಜೋಗಿ ಬರಹಗಳ ಒಳಒಸರು. ಆತ ಬಾಲ್ಯದಲ್ಲಿ ಬರೆಯುತ್ತಿದ್ದ ಕತೆಗಳಿಂದ ತೊಡಗಿ ಈ ಹದಿಮೂರನೇ ಕೃತಿಯ ತನಕ ಎಲ್ಲವನ್ನೂ ಓದಿದ ಹೆಗ್ಗಳಿಕೆಯಿಂದ ಹೇಳುವೆ. ಎಲ್ಲೂ ಯಾರನ್ನೂ ನೋಯಿಸದ ಜೋಗಿ ಬರಹಗಳ ಮೂಲಕ ಜಗತ್ತು ತನ್ನನ್ನು ಪ್ರೀತಿಸುವಂತೆ ಮಾಡಿದರೆ ಅದಕ್ಕೆ ನುಡಿದಂತೆ ನಡೆದದ್ದು ಕಾರಣ. ಜೋಗಿ ಬರಹಗಳು ಕನ್ನಡದಲ್ಲಿ ಜೋಪಾನವಾಗಿರುವುದಕ್ಕೆ ಆತ ಅಕ್ಷರಗಳಿಗೆ ಟಂಕಿಸಿದ ಆ ಒಲುಮೆಯೇ ಕಾರಣ.

ಜೋಗಿ ಯಾನೆ ಹತ್ವಾರ ಗಿರೀಶ ರಾವು ಬರಹಗಳಿಗೆ ಪ್ರತ್ಯೇಕ ಒಳನೋಟಗಳಿವೆ ಎಂಬುದನ್ನು ಓದಿದವರೆಲ್ಲಾ ಒಪ್ಪಿಕೊಳ್ಳುತ್ತಾರೆ. ಎಂದೂ ಕೆಡದ ಹಾಗೇ ತನ್ನ ಬರಹಗಳನ್ನು ಸಿದ್ಧಗೊಳಿಸುವ ಆತನ ಪ್ರಾವೀಣ್ಯಕ್ಕೆ ಆತ ಬರೆದುದೇ ಜಾಮೀನು ನಿಲ್ಲುತ್ತವೆ.

ಅದು ಚಿಟ್ಟೆ ಹೆಜ್ಜೆ ಹಾಕಿದಂತೆ.. ಇಂದರಳಿದ ಹೂವಿಗೆ, ನಾಳೆ ಅರಳೋ ಮೊಗ್ಗಿಗೆ...

- ಗೋಪಾಲಕೃಷ್ಣ ಕುಂಟಿನಿ

$0.26

Original: $0.86

-70%
ಚಿಟ್ಟೆ ಹೆಜ್ಜೆ ಜಾಡು

$0.86

$0.26

Product Information

Shipping & Returns

Description

ಚಿಟ್ಟೆ ಹೆಜ್ಜೆ ಜಾಡು | Harivu Books