🎉 Up to 70% Off Selected ItemsShop Sale
HomeStore

ಚೂರು ಬಿಂಬ

Product image 1
Product image 2

ಚೂರು ಬಿಂಬ

ಚೂರು ಬಿಂಬ

ತಾಹಾನ ಪತ್ರ, ಅಪನ ಕತ್ತರಿ, ಕಡುನೀಲಿ ಅಂಗಿ ಈ ಮೂರೂ ಕಥೆಗಳೂ ಮಾನವ ಸಂಬಂಧಗಳ ಸಂಕೀರ್ಣತೆಗಳನ್ನು ಬೇರೆಬೇರೆ ಆಯಾಮಗಳಲ್ಲಿ ಶೋಧಿಸುತ್ತಲೇ ತಮ್ಮ ಹೊರಮೈ ಮತ್ತು ಒಳಮೈಗಳನ್ನೂ ಕಟ್ಟಿಕೊಳ್ಳುತ್ತವೆ. ಕಥೆಗಳ ಸೂಕ್ಷ್ಮ ಹೂರಣಕ್ಕೆ ಅಚ್ಚುಕಟ್ಟಾದ ಹೊದಿಕೆ ಹೊದಿಸುವ ಕಲೆ ಲೇಖಕರಿಗೆ ಸ್ವಾಭಾವಿಕವಾಗಿ ಒಲಿದಿದೆ. ಎರಡೂ ಒಂದಕ್ಕೊಂದು ಪೂರಕವಾಗುವಂತೆ ಚೆಂದವಾಗಿ ಹೊಂದಿಸುವಲ್ಲಿ ಲೇಖಕರು ಬಹುತೇಕ ಯಶಸ್ವಿಯಾಗಿದ್ದಾರೆ. ಭಾಷೆ, ತಂತ್ರ ಮತ್ತು ಕಥನಕಲೆ ಸಹಜವಾಗಿ ಬೆಸೆದುಕೊಂಡು ಕಥೆಗಳು ಬರೆಯಲ್ಪಟ್ಟಿವೆ. ಅದರ ಜೊತೆಗೆ ಕಥೆಗಳು ಔತಣದಿಂದ ಕುಸುರಿಗೊಂಡಿವೆ.

ಕಥೆಗಾರರು ಪಾತ್ರಗಳ ಸಿಟ್ಟನ್ನೂ, ಕ್ರೌರ್ಯವನ್ನೂ, ದ್ವೇಷವನ್ನೂ ಕೂಡ ಕುಸುರಿಮಾಡಿ ಮೆತ್ತಗಾಗಿಸಿಬಿಡುತ್ತಾರೆ. ಈ ಕಥೆಗಳಲ್ಲಿ ಅವು ಪೂರಕವಾಗಿ ಕೆಲಸ ಮಾಡಿದೆ. ಭಾವಕ್ಕೂ ಅಭಿವ್ಯಕ್ತಿಗೂ ಸೂಕ್ತ ಸಂಪರ್ಕವಿರಬೇಕಾದರೆ ಭಾವಕ್ಕೆ ತಕ್ಕ ಅಭಿವ್ಯಕ್ತಿ ಮುಖ್ಯ ಎಂದು ನಾವು ನಂಬಿದ್ದೇವೆ. ಈ ಕಥೆಗಳಲ್ಲಿ ಎರಡರ ನಡುವೆ ಸಮನ್ವಯವನ್ನು ಗಳಿಸಿಕೊಂಡಿರುವ ಕಥೆಗಾರರ ಈ ಶಕ್ತಿ ಹೀಗೇ ಇರಲಿ ಎಂದು ನಾವು ಹಾರೈಸುತ್ತೇವೆ.

-ವಿನಯಾ ಒಕ್ಕುಂದ ಮತ್ತು ಗುರುಪ್ರಸಾದ್ ಕಾಗಿನೆಲೆ
ತೀರ್ಪುಗಾರರು, ಟೊಟೊ ಸಾಹಿತ್ಯ ಪುರಸ್ಕಾರ - 2023 (ಕನ್ನಡ ಸಾಹಿತ್ಯ ವಿಭಾಗ)

ಆಳಕ್ಕಿಳಿಯುವ, ಸಮುದಾಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸುವ, ನಗರಗಳನ್ನೆಲ್ಲವ ಸಂಚರಿಸುವ, ಕುಟುಂಬವನ್ನು ಶೋಧಿಸುವ, ಮಾನವ ಸಂವಹನದ ದುರ್ಬಲತೆಗಳನ್ನು ಒರೆಗೆ ಹಚ್ಚುವ ಕಥೆಗಳ ಗುಚ್ಛವಾಗಿ ಹೊಮ್ಮಿರುವ ದಾದಾಪೀರ್ ಜೈಮನ್ ಅವರ ಚೂರು ಬಿಂಬ ಕೃತಿಯು ಪ್ರೀತಿ, ಸ್ನೇಹ, ಲೈಂಗಿಕತೆ ಮತ್ತು ಲಿಂಗತ್ವದ ತಿರುಳನ್ನು ಅದರ ಎಲ್ಲಾ ಕ್ರೌರ್ಯ ಮತ್ತು ಮೃದುತ್ವದೊಂದಿಗೆ ತೆರೆದಿಟ್ಟಿದೆ. ಪತ್ರಗಳೇ ಹೇಳುವ ಕಥೆಗಳಿಂದ ಹಿಡಿದು, ಸ್ಥಳಾಂತರವು ತಂದೊಡ್ಡುವ ಸ್ಥಿತ್ಯಂತರಗಳವರೆಗೆ, ಚೂರು ಬಿಂಬ ಎಂಬುದು ಯುವಜನರ ಮತ್ತು ಬದುಕುಳಿಯುವಿಕೆಯ ಸಂಕೀರ್ಣತೆಗಳನ್ನು ಸಂವೇದನಾಶೀಲ ಕಣ್ಣಿನಿಂದ ಮತ್ತು ಕೇಂದ್ರೀಕೃತ ಮಸೂರದಿಂದ ಅನ್ವೇಷಿಸುವ ಸಂಕಲನವಾಗಿದೆ.

-ಡಾ. ಇಂದಿರಾ ಚಂದ್ರಶೇಖರ್
ಕಥೆಗಳಿಗೆಂದೇ ಮೀಸಲಾಗಿರುವ ಔಟ್ ಆಫ್ ಪ್ರಿಂಟ್ ನಿಯತಕಾಲಿಕೆಯ ಸ್ಥಾಪಕಿ ಮತ್ತು ಸಂಪಾದಕಿ 

$0.39

Original: $1.30

-70%
ಚೂರು ಬಿಂಬ

$1.30

$0.39

Product Information

Shipping & Returns

Description

ಚೂರು ಬಿಂಬ | Harivu Books