🎉 Up to 70% Off Selected ItemsShop Sale
HomeStore

ದೀಡೆಕರೆ ಜಮೀನು

Product image 1
Product image 2

ದೀಡೆಕರೆ ಜಮೀನು

ದೀಡೆಕರೆ ಜಮೀನು

ಎಲ್ಲಿ ಕಷ್ಟ ಇದೆಯೋ ಅಲ್ಲಿ ಕತೆ ಇದೆ. ಎಲ್ಲಿ ನೋವಿದೆಯೋ ಆ ಚಿತ್ರಕ್ಕೆ ನೆನಪಲ್ಲಿ ಉಳಿಯುವ ಶಕ್ತಿ ಇರುತ್ತದೆ. ಅದರಿಂದಾಗಿಯೇ ಕತೆಗಾರ ಓದುಗನ ಮನಸ್ಸಲ್ಲಿ ಜಾಗ ಸಂಪಾದಿಸುತ್ತಾನೆ. ಇದೊಂದು ಆಕರ್ಷಕ ಭಾಷೆಯಲ್ಲಿರುವ ಆದರೆ ಸಂಕೀರ್ಣ ಭಾವಗಳನ್ನು ಒಳಗೊಂಡ ವಿಶಿಷ್ಟ ಕಥಾ ಸಂಕಲನ.

-ಕನ್ನಡಪ್ರಭ

ಇಲ್ಲಿನ ಕಥೆಗಳ ಕೇಂದ್ರದಲ್ಲಿರುವುದು ರೈತರು, ಮಹಿಳೆಯರು ಹಾಗೂ ಜನ ಸಾಮಾನ್ಯರು. ವರ್ತಮಾನದ ಸಣ್ಣ ಕಂಪನಕ್ಕೂ ತಲ್ಲಣಿಸಿ ಹೋಗುವ ಬದುಕುಗಳನ್ನು ಕತೆಗಾರರು ಆಸ್ಥೆಯಿಂದ, ಪ್ರಾಮಾಣಿಕತೆಯಿಂದ ಚಿತ್ರಿಸಿದ್ದಾರೆ. ಮೌಲ್ಯಪ್ರಧಾನ ವ್ಯವಸ್ಥೆಯ ಕಾಳಜಿ ಕತೆಗಳಲ್ಲಿ ಕಣ್ಣಿಗೆ ಕಟ್ಟುವಂತಿದೆ. ಮನುಷ್ಯನ ಕ್ರೌರ್ಯದ ವಿವಿಧ ಆಯಾಮಗಳನ್ನು ಕತೆಗಳು ಚಿತ್ರಿಸುತ್ತವೆ.

-ಮಯೂರ

ಇಲ್ಲಿನ ಕಥೆಗಳ ಹೆಸರುಗಳನ್ನು ಬದಲಿಸಿ ತುಸು ಮಾರ್ಪಾಡು ಮಾಡಿದರೆ ಅವು ಯಾವುದೇ ಊರಿನ ಕಥೆಯೂ ಆಗುವಂತಹ ವಸ್ತು, ಸಂದರ್ಭ ಹೊಂದಿವೆ. ಸಂಕಲನದಲ್ಲಿ ಬಳಕೆಯಾಗಿರುವ ಉತ್ತರ ಕರ್ನಾಟಕದ ಆಡುಭಾಷೆ ಕಥೆಗಳಿಗೆ ಒಂದು ವಿಶಿಷ್ಟ ಕಾಂತಿ ನೀಡಿದೆ.

-ಉದಯವಾಣಿ

ಈ ಸಂಕಲನದಲ್ಲಿನ ಕಥೆಗಳು ಅದೆಷ್ಟರ ಮಟ್ಟಿಗೆ ಉತ್ಕೃಷ್ಟವಾಗಿವೆಯೆಂದರೆ ಓದುಗನನ್ನು ಅನೂಹ್ಯವಾದ ಲೋಕವೊಂದಕ್ಕೆ ಸ್ವಯಂ ತಾವೇ ಕರೆದುಕೊಂಡು ಹೋಗುತ್ತವೆ. ಆ ಲೋಕವೆಂಬ ಸಾಮಾಜಿಕ, ರಾಜಕೀಯ ಪರಿಸರದ ಇಂಚಿಂಚೂ ಪರಿಚಯ ಮಾಡಿಕೊಡುತ್ತ ಅವು ನಮ್ಮದೆ ಬದುಕಿನ ಅನುಭವಗಳೆಂಬ ಭ್ರಮೆಯನ್ನು ಹುಟ್ಟಿಸುತ್ತವೆ.

-ವಿಜಯ ಕರ್ನಾಟಕ

ಗ್ರಾಮೀಣ ಪರಿಸರವನ್ನು ಹಾಗೂ ಅಲ್ಲಿ ನಡೆಯುವ ವಿದ್ಯಮಾನಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಬಲ್ಲ ಸಾಮರ್ಥ್ಯವಿರುವ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಈ ಸಂಕಲನದ ಎಂಟು ಕಥೆಗಳು ಗ್ರಾಮಭಾರತದ ಅಸ್ವಾಭಾವಿಕ/ ಅಮಾನವೀಯ ಪ್ರಸಂಗಗಳನ್ನು ತೀರಾ ಹತ್ತಿರದಿಂದ ಕಾಣಿಸಿ ಕೊಡುತ್ತವೆ. ಇಲ್ಲಿನ ಬಹಳಷ್ಟು ಕಥೆಗಳು ತಮ್ಮ ಮೆಲುದನಿಯ ನಿರೂಪಣೆಯಿಂದ ಹಾಗೂ ತೀವ್ರ ಮಾನವೀಯ ಕಾಳಜಿಯಿಂದ ಓದುಗರನ್ನು ಗೆದ್ದುಕೊಳ್ಳುತ್ತವೆ.

$0.73

Original: $2.43

-70%
ದೀಡೆಕರೆ ಜಮೀನು

$2.43

$0.73

Product Information

Shipping & Returns

Description

ದೀಡೆಕರೆ ಜಮೀನು | Harivu Books