🎉 Up to 70% Off Selected ItemsShop Sale
HomeStore

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು

Product image 1
Product image 2

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು

ಕಳೆದ 40 ವರ್ಷಗಳಿಂದ ಕೈಂ, ಕಾನೂನು, ಪ್ರವಾಸ ಮೊದಲಾದ ವಿಷಯಗಳನ್ನು ಬರೆದು ಜನರನ್ನು ಎಚ್ಚರಿಸುತ್ತ ಬಂದಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಅವರ ಲೇಖನಿಯಿಂದ ಈ ಕಥೆಗಳು ಹರಿದು ಬಂದಿವೆ. ಅವರ ಎಲ್ಲ ಪುಸ್ತಕಗಳೂ ಮರುಮುದ್ರಣಗಳನ್ನು ಕಂಡಿರುವುದು ಅವರು ಗಳಿಸಿರುವ ಜನಪ್ರಿಯತೆಗೆ ಸಾಕ್ಷಿಯಾಗಿವೆ.

ಇಲ್ಲಿನ ಕಥೆಗಳಿಗೆ ಸಹಜವಾಗಿಯೇ ಅಥೆಂಟಿಸಿಟಿ ದಕ್ಕಿದೆ. ಶ್ರೀಯುತರ ಸಾಹಿತ್ಯಕ ಹಿನ್ನೆಲೆ ಕಥೆಗಳ ಉದ್ದಕ್ಕೂ ಸುಪ್ತವಾಗಿ ಹರಿದಿರುವುದನ್ನು ನಾವು ಕಾಣಬಹುದಾಗಿದೆ. ಪ್ರಜೆಗಳಲ್ಲಿ ಎಚ್ಚರಿಕೆಯ ಘಂಟೆಯನ್ನು ಮೊಳಗಿಸುವ ಇವುಗಳಲ್ಲಿ ವಿವಿಧ ಸ್ತರಗಳ ಜನರು ಕಾಣಬರುತ್ತಾರೆ. ಅದ್ಧೂರಿ ಬಯಕೆಗಳು, ಅತೃಪ್ತಿ, ದುರಾಸೆ, ಖ್ಯಾತಿಯನ್ನು ಗಳಿಸುವ ಹಂಬಲ, ಹೇಗಾದರೂ ಹಣ ಗಣಿಸುವ ಲೆಕ್ಕಾಚಾರಗಳು, ಸ್ವೇಚ್ಛಾ ಜೀವನದತ್ತ ತುಯ್ಯುವ ಮನಸ್ಸು, ರೈಸ್ ಪುಲ್ಲಿಂಗ್, ಧುತ್ತೆಂದು ಮೇಲೆದ್ದು ಅಬ್ಬರಿಸುವ ಕಾಮದ ಕೂಗು, ಮೊದಲಾದವು ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತವೆ ಎನ್ನುವುದು ಇಲ್ಲಿ ಮನಕ್ಕೆ ತಾಗುವಂತೆ ಚಿತ್ರಿತವಾಗಿವೆ. ಶುದ್ಧ ಹೃದಯ, ಮನಸ್ಸಿನ ಮೇಲಿನ ಹತೋಟಿ, ಪ್ರಾಮಾಣಿಕತೆಯೇ ಪ್ರಫುಲ್ಲ ಬದುಕಿಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ, ಹಾಗೂ ಬದುಕನ್ನು ಜತನವಾಗಿ ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಮನದಟ್ಟು ಮಾಡುತ್ತವೆ. ಪ್ರಸಿದ್ಧ ಚಿಂತಕರ ಅನನ್ಯ ಚಿಂತನೆಗಳನ್ನೂ ಸಹ ಸಂದರ್ಭಾನುಸಾರ ಕೃತಿಯಲ್ಲಿ ಬಳಸಲಾಗಿದ್ದು ಅವು ಕೃತಿಗೆ ವಿಶೇಷ ಮೆರಗನ್ನು ತಂದಿತ್ತಿವೆ.

$0.52

Original: $1.73

-70%
ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು

$1.73

$0.52

Product Information

Shipping & Returns

Description

ಕಳೆದ 40 ವರ್ಷಗಳಿಂದ ಕೈಂ, ಕಾನೂನು, ಪ್ರವಾಸ ಮೊದಲಾದ ವಿಷಯಗಳನ್ನು ಬರೆದು ಜನರನ್ನು ಎಚ್ಚರಿಸುತ್ತ ಬಂದಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಅವರ ಲೇಖನಿಯಿಂದ ಈ ಕಥೆಗಳು ಹರಿದು ಬಂದಿವೆ. ಅವರ ಎಲ್ಲ ಪುಸ್ತಕಗಳೂ ಮರುಮುದ್ರಣಗಳನ್ನು ಕಂಡಿರುವುದು ಅವರು ಗಳಿಸಿರುವ ಜನಪ್ರಿಯತೆಗೆ ಸಾಕ್ಷಿಯಾಗಿವೆ.

ಇಲ್ಲಿನ ಕಥೆಗಳಿಗೆ ಸಹಜವಾಗಿಯೇ ಅಥೆಂಟಿಸಿಟಿ ದಕ್ಕಿದೆ. ಶ್ರೀಯುತರ ಸಾಹಿತ್ಯಕ ಹಿನ್ನೆಲೆ ಕಥೆಗಳ ಉದ್ದಕ್ಕೂ ಸುಪ್ತವಾಗಿ ಹರಿದಿರುವುದನ್ನು ನಾವು ಕಾಣಬಹುದಾಗಿದೆ. ಪ್ರಜೆಗಳಲ್ಲಿ ಎಚ್ಚರಿಕೆಯ ಘಂಟೆಯನ್ನು ಮೊಳಗಿಸುವ ಇವುಗಳಲ್ಲಿ ವಿವಿಧ ಸ್ತರಗಳ ಜನರು ಕಾಣಬರುತ್ತಾರೆ. ಅದ್ಧೂರಿ ಬಯಕೆಗಳು, ಅತೃಪ್ತಿ, ದುರಾಸೆ, ಖ್ಯಾತಿಯನ್ನು ಗಳಿಸುವ ಹಂಬಲ, ಹೇಗಾದರೂ ಹಣ ಗಣಿಸುವ ಲೆಕ್ಕಾಚಾರಗಳು, ಸ್ವೇಚ್ಛಾ ಜೀವನದತ್ತ ತುಯ್ಯುವ ಮನಸ್ಸು, ರೈಸ್ ಪುಲ್ಲಿಂಗ್, ಧುತ್ತೆಂದು ಮೇಲೆದ್ದು ಅಬ್ಬರಿಸುವ ಕಾಮದ ಕೂಗು, ಮೊದಲಾದವು ಮನುಷ್ಯನ ಅವನತಿಗೆ ಹೇಗೆ ಕಾರಣವಾಗುತ್ತವೆ ಎನ್ನುವುದು ಇಲ್ಲಿ ಮನಕ್ಕೆ ತಾಗುವಂತೆ ಚಿತ್ರಿತವಾಗಿವೆ. ಶುದ್ಧ ಹೃದಯ, ಮನಸ್ಸಿನ ಮೇಲಿನ ಹತೋಟಿ, ಪ್ರಾಮಾಣಿಕತೆಯೇ ಪ್ರಫುಲ್ಲ ಬದುಕಿಗೆ ಕಾರಣವಾಗುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತಿಳಿಸುತ್ತವೆ, ಹಾಗೂ ಬದುಕನ್ನು ಜತನವಾಗಿ ಕಾಪಿಟ್ಟುಕೊಂಡು ಹೋಗಬೇಕೆಂಬುದನ್ನು ಮನದಟ್ಟು ಮಾಡುತ್ತವೆ. ಪ್ರಸಿದ್ಧ ಚಿಂತಕರ ಅನನ್ಯ ಚಿಂತನೆಗಳನ್ನೂ ಸಹ ಸಂದರ್ಭಾನುಸಾರ ಕೃತಿಯಲ್ಲಿ ಬಳಸಲಾಗಿದ್ದು ಅವು ಕೃತಿಗೆ ವಿಶೇಷ ಮೆರಗನ್ನು ತಂದಿತ್ತಿವೆ.

ಹೀಗೊಂದು ಲವ್ ಸ್ಟೋರಿ ಮತ್ತು ಇತರ ಪೊಲೀಸ್ ಕಥೆಗಳು | Harivu Books