🎉 Up to 70% Off Selected ItemsShop Sale
HomeStore

ಜಂಗಲ್ ಬುಕ್

Product image 1
Product image 2

ಜಂಗಲ್ ಬುಕ್

ಜಂಗಲ್ ಬುಕ್

ಜೋಸೆಫ್ ರುಡಿಯಾರ್ಡ್ ಕಿಪ್ಲಿಂಗ್ ಜಗತ್ತಿನ ಶ್ರೇಷ್ಠ ಕಾದಂಬರಿಕಾರ, ಕವಿ, ಸಣ್ಣ ಕಥೆಗಾರ ಮತ್ತು ವರದಿಗಾರ. ತಂದೆಯಂತೆ ಆನುಷಂಗಿಕವಾಗಿ ಪ್ರತಿಭೆಯನ್ನು ಹೊತ್ತು ತಂದವನು. ತನ್ನ ಕಾಲ್ಪನಿಕ ಸಣ್ಣ ಕಥೆಗಳ ಗುಚ್ಛ" ಜಂಗಲ್ ಬುಕ್" ನಿಂದ ಯೂಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್, ದೃಶ್ಯ ಮಾಧ್ಯಮಗಳಿಲ್ಲದ 1894ರ ಕಾಲಘಟ್ಟದಲ್ಲೇ ಜಗತ್ತಿನಾದ್ಯಂತ ಹೆಸರುಗಳಿಸಿದವನು. ಬ್ರಿಟಿಷ್ ಬರಹಗಾರನಿಗೆ ಸಿಕ್ಕ ಮೊದಲ ನೋಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಭಾಜನನಾದವನು. ಅತಿ ಚಿಕ್ಕ ವಯಸ್ಸಿಗೇ ನೋಬೆಲ್ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಇಂಗ್ಲಿಷ್ ಲೇಖಕ. ಈತನ 'ಜಂಗಲ್ ಬುಕ್' ಕೃತಿಯು ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದೆ.

ಕಿಪ್ಲಿಂಗ್ ಬಾಂಬೆ ಪ್ರೆಸಿಡೆನ್ಸಿಯ ಮಲಬಾರ್ ಹಿಲ್ಸ್ ನಲ್ಲಿ 1865 ಡಿಸೆಂಬರ್ 30 ರಲ್ಲಿ ಜನಿಸಿದನು. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಪಯಣ, ನಂತರ ಭಾರತಕ್ಕೆ ಬಂದ ಈತ ಬಹುತೇಕ ದುರ್ಗಮ ಕಾಡುಗಳಲ್ಲಿ ಸುತ್ತಾಡಿ, ಭಾರತದ ಕಾಡುಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಿ, ಜೀವಂತ ಪ್ರಸಂಗಗಳನ್ನು ಕಥೆಗಳಲ್ಲಿ ಹೆಣೆದಿರುವ ರೀತಿ ಬೆರಗುಗೊಳಿಸುತ್ತದೆ. ವಿಶೇಷವಾಗಿ ಮಕ್ಕಳಿಗಾಗಿಯೇ ರಚಿಸಿದ ಸಾಹಸ ಕಥೆಗಳನ್ನು ಜಗತ್ತಿನ ಓದುಗರು ಅಪ್ಪಿಕೊಂಡಿದ್ದಾರೆ.

ಒಂದೂಕಾಲು ಶತಮಾನದ ಹಿಂದಿನ ಆಂಗ್ಲ ಭಾಷೆಯನ್ನು ಕನ್ನಡಕ್ಕೆ ಸರಳವಾಗಿ ಅರ್ಥವಾಗುವಂತೆ, ಓದುವಿಕೆಗೆ ಎಲ್ಲಿಯೂ ಅಡೆತಡೆಗಳು ಬಾರದಂತೆ ಅನುವಾದ ಮಾಡಿರುವುದು ಶ್ರೀಮತಿ ಆಶಾ ಅವರ ಇಂಗ್ಲಿಷ್ ಜ್ಞಾನದ ಪ್ರತಿಭೆಯ ದ್ಯೋತಕವಾಗಿದೆ. ಕಠಿಣವಾದ ಪದಗಳನ್ನು ಸರಳೀಕರಣಗೊಳಿಸಿ, ಕೆಲವು ಕಡೆ ರೂಪಾಂತರ ಮತ್ತು ಭಾವಾಂತರದ ಜಾಣೆಯನ್ನು ಮೆರೆದಿರುವುದು ಅನುಭವೀ ಅನುವಾದಕರ ಛಾಪು ಮೂಡಿಸುವಂತಿದೆ. ಕನ್ನಡದ ಸಾಹಿತ್ಯಕ್ಕೆ ಹೊಸ ಪ್ರತಿಭೆಯೊಂದರ ಸೇರ್ಪಡೆಗೆ ಅಭಿನಂದನೆ. ಶ್ರೀಮತಿ ಆಶಾ ಜಿ ರವರು ಭವಿಷ್ಯದ ಶ್ರೇಷ್ಠ ಅನುವಾದಕಿಯಾಗುವುದರಲ್ಲಿ ಸಂಶಯವಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಗೆ 'ಜಂಗಲ್ ಬುಕ್' ಕನ್ನಡಾನುವಾದವು ಪ್ರಶಂಸೆಗೆ, ಅಭಿನಂದನೆಗೆ ಒಳಗಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಹೊ ನ ನೀಲಕಂಠೇಗೌಡ

$0.73

Original: $2.43

-70%
ಜಂಗಲ್ ಬುಕ್

$2.43

$0.73

Product Information

Shipping & Returns

Description

ಜಂಗಲ್ ಬುಕ್ | Harivu Books