🎉 Up to 70% Off Selected ItemsShop Sale
HomeStore

ಕಾಫ್ಕಾನೊಂದಿಗೆ ಸಂವಾದ

Product image 1
Product image 2

ಕಾಫ್ಕಾನೊಂದಿಗೆ ಸಂವಾದ

ಕಾಫ್ಕಾನೊಂದಿಗೆ ಸಂವಾದ

ಸಮಾನತೆ ಆಧುನಿಕತೆ ಅಧ್ಯಾತ್ಮ ನಮ್ಮ ಈ ಕಾಲದ ಮೂರು ಹಸಿವುಗಳೆಂದು ನಾನು ಪದೇ ಪದೇ ರಗಳೆಯಾಗುವಷ್ಟು ಹೇಳಿದ್ದೇನೆ. ಈ ಪುನರುಚ್ಚಾರಕ್ಕೆ ಕಾರಣ ಬ್ರಾಹ್ಮಣಿಕೆಯ ಗರ್ವ ತೊರೆದಿದ್ದರಿಂದ ತುಂಬಿಕೊಳ್ಳಬೇಕಾದ ನನ್ನ ಒಳಬಾಳಿನ ಹಂಬಲ ಆದರೆ ಲೌಕಿಕವಾಗಿಯೂ ಅಗತ್ಯವಾದ ಅಂದರೆ ಅತ್ಯಭಿಮಾನಕ್ಕೂ ಅನಿವಾರ್ಯವಾದ ಈ ಸಮಾನತೆಯ ಹಸಿವು ಲೌಕಿಕದ ಜೀವನದಲ್ಲಿ ಒಳತಿರುಳು ಇಲ್ಲದ ಅಹಮಿಕೆಗೂ ತನ್ನ ಹೊರಗಿರುವ ಇತರರ ಬಗ್ಗೆ ಪ್ರೀತಿಯೇ ಇಲ್ಲದ ಆಸೆಯ ಉಬ್ಬಸಕ್ಕೂ ಕಾರಣವಾಗಬಹುದೆಂದು ನನಗೆ ಹೊಳೆದರೂ ತಾತ್ವಿಕ (ಕರೆಕ್ಷನೆಸ್)ಗಾಗಿ ನಾನದಕ್ಕೆ ಎಚ್ಚರಾಗಿರಲಿಲ್ಲ. ತಮ್ಮ ದಿವ್ಯ ಮುಗುಳ್ಳಗೆಯ ಸ್ನೇಹದಲ್ಲಿ ಕೆಲವು ದಿನಗಳ ಹಿಂದೆ ಧಾರವಾಡದ ಸಾಹಿತ್ಯ ಸಂಭ್ರಮದ ಹೊತ್ತಿನಲ್ಲಿ ಚಹಾ ಕುಡಿಯುತ್ತ ಇದ್ದಾಗ ಯಾವ ವೈಚಾರಿಕ ಛಾಲೆಂಜು ಇಲ್ಲದಂತೆ ನನ್ನ ಕಿವಿಮೇಲೆ ಬಿದ್ದರೆ ಸಾಕೆಂಬಂತೆ ಸಮಾನತೆಯನ್ನು ಟೀಕಿಸುವ ಅಡ್ಡಮಾತನ್ನು ಸುಮ್ಮನೇ ಹೇಳಿಬಿಟ್ಟವರು ಆನಂದ ಝುಂಜರವಾಡರು, ಹುಸಿಯನ್ನು ಬಾಯಿತಪ್ಪಿಯೂ ಆಡದ ಈ ಕವಿಯ ಮಾತು ನನ್ನಲ್ಲಿ ಭಾವನಾತ್ಮಕ ಅಲೆಗಳನ್ನು ಎಬ್ಬಿಸಿದೆ. ತುಳಿತಕ್ಕೆ ಒಳಗಾದ ಜನಾಂಗಗಳಿಗೆ ಸಮಾನತೆ ಅಡ್ಡ ಮಾತಿಲ್ಲದ ಮಂತ್ರದಂತೆ ಎಂಬುದನ್ನು ನನ್ನ ಹೃದಯದೊಳಗಿಟ್ಟುಕೊಂಡೇ ಮುಂದಿನ ಮಾತುಗಳು ನನ್ನಿಂದ ಹುಟ್ಟಿಕೊಂಡಿವೆ.

ಲೌಕಿಕ ಸಮಾನತೆಯ ರಾಜಕೀಯ ಘೋಷಣೆಯ ಜೊತೆ ಈ ಅಲೌಕಿಕ ವಿಧೇಯತೆಯ ಹಸಿವು ಇಲ್ಲವೋ ಎಂಬಂತೆ ಕಾಲಕ್ಕೆ ಅಗತ್ಯವೆನಿಸುವ ಪೌರುಷದ ಲೌಕಿಕ ಗರ್ವ ಅಡಗಿ ಸಪ್ಪೆಯಾಗಿರುತ್ತದೆ. ಕೆಲವೊಮ್ಮೆ ಬಂಡೆಯೊಳಗಿನ ಸಸಿಯೆಂಬಂತೆ ಇಣುಕುತ್ತದೆ. ಒಮ್ಮೊಮ್ಮೆ ನಮ್ಮ ಏಕಾಂತದ ದಿಗಿಲಿನಲ್ಲಿ ಬೆಚ್ಚಿ ತೋರಿ ಮಾಯವಾಗುತ್ತದೆ. ನಾವು ಗಳಿಸಿ ಒಟ್ಟಿಕೊಳ್ಳುತ್ತ ಹೋಗುವ ಇಹದ ಸರಕುಗಳಲ್ಲಿ ಕಾಣೆಯಾಗಿ ಬಿಟ್ಟು ಜೀವಿ ಸಾಯುತ್ತಾನೆ. ಆಧುನಿಕ ಸಂಪತ್ತುಗಳ ರಮ್ಯ ವಂಚನೆಯಲ್ಲಿ ಆಗೀಗ ವಿಷಣ್ಣತೆಯಾಗಿ ತೋರಿ ಈ ಅಲೌಕಿಕ ವಿನಯ ಮಾಯವಾಗುತ್ತದೆ. ಸಾವನ್ನು ಮುಂದೂಡಬಲ್ಲ ಟೆಕ್ನಾಲಾಜಿಯ ನಮ್ಮ ಕಾಲದ ದುರಂತ ಇದು.

ರಾಜಕೀಯವಾಗಿ ಹೇಳುವದಾದರೆ ನಮ್ಮನ್ನು ತುಳಿದಿಡುವ ರಾವಣಲೋಕದಲ್ಲೋ ಹಿಟ್ಲರನ ಲೋಕದಲ್ಲೋ ಒತ್ತಾಯಕ್ಕೆ ಶರಣಾಗುವ ನಾವು ವಂಚಿತರಾಗುವದು ಸಮಾನತೆಯಿಂದ ಮಾತ್ರವಲ್ಲ; ಎಲ್ಲ ಜೀವಿಗಳ ಇನ್ನೊಂದು ಹಸಿವಾದ ಸ್ವಯಂ ವಿಧೇಯತೆಯಿಂದಲೂ. ಇದನ್ನು ತಿಳಿದಾಗ ನಮ್ಮ ರಾಜಕಾರಣ ಬದಲಾಗುತ್ತದೆ.

-ಯು ಆರ್ ಅನಂತಮೂರ್ತಿ 
-ಕೃಪೆ: ಕಸ್ತೂರಿ ಪತ್ರಿಕೆ

$0.52

Original: $1.73

-70%
ಕಾಫ್ಕಾನೊಂದಿಗೆ ಸಂವಾದ

$1.73

$0.52

Product Information

Shipping & Returns

Description

ಕಾಫ್ಕಾನೊಂದಿಗೆ ಸಂವಾದ | Harivu Books