ಕನ್ನಡ ನುಡಿಯ ಜೀವಾಳ
ಕನ್ನಡ ಸಾಹಿತ್ಯ ಪರಿಷತ್ತು ಕರುನಾಡಿನ ಗಾಳಿ-ಬೆಳಕು. ಕಸಾಪ ಎಂಬುದು ಕನ್ನಡಿಗರ ಪಾಲಿನ ಮೂರಕ್ಷರದ ಮಹಾಮಂತ್ರ, ಶತಮಾನ ದಾಟಿದ ಪರಿಷತ್ತು ಕನ್ನಡಿಗರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಪರಿ ಅಭೂತಪೂರ್ವ.
ಪರಿಷತ್ತು ತನ್ನ ಪ್ರಕಟಣೆಗಳ ಮೂಲಕ ಕನ್ನಡಿಗರ ಬೌದ್ಧಿಕ ಹಸಿವನ್ನು ನೀಗಿಸುತ್ತಿದೆ. ಅವರ ಅರಿವಿನ ಕ್ಷಿತಿಜಗಳನ್ನು ವಿಸ್ತರಿಸುತ್ತಿದೆ. ಪರಿಷತ್ತು ಗಂಟಿಗಿಂತ ನಿಘಂಟಿಗೆ, ಅನ್ನಕ್ಕಿಂತ ಅರಿವಿಗೆ ಒತ್ತು ನೀಡಿದೆ. ಅದರದು ನಿರಂತರ ಅಕ್ಷರ ದಾಸೋಹ ! ಇದುವರೆಗೆ ಸುಮಾರು ೧೭೫೦ ಕೃತಿಗಳನ್ನು ಕನ್ನಡಿಗರ ಮಡಿಲಿಗಿರಿಸಿದ ಕೀರ್ತಿ ಪರಿಷತ್ತಿನದು.
ಪರಿಷತ್ತಿನ ಪ್ರಕಟಣೆಗಳು ಓದುಗರಿಗೆ ಸುಲಭವಾಗಿ ಲಭಿಸುವಂತಾಗಲು ವಿತರಣಾ ಜಾಲವನ್ನು ದೃಢಗೊಳಿಸಲಾಗುವುದು. ಅವು ಆನ್ಲೈನ್ ಮೂಲಕವೂ ಮಾರಾಟಕ್ಕೆ ಲಭ್ಯವಾಗಲಿವೆ. ಮುದ್ರಣ ವಿಧಾನದಲ್ಲಿ ಆಗಿರುವ ಎಲ್ಲ ತಾಂತ್ರಿಕ ಆವಿಷ್ಕಾರಗಳನ್ನೂ ಬಳಸಿಕೊಂಡು ಪುಸ್ತಕಗಳ ವಿನ್ಯಾಸವನ್ನು ಆಕರ್ಷಕ ಗೊಳಿಸಲಾಗುವುದು. ಇ-ಪುಸ್ತಕಗಳನ್ನೂ ಹೊರತರಲಾಗುವುದು.
ಪಂಡಿತಮಾನ್ಯವಾದ ಕೃತಿಗಳ ಪ್ರಕಟಣೆ ಮುಂದುವರೆಯಲಿದೆ. ಇದರ ಜೊತೆಗೆ ಜನಸಾಮಾನ್ಯರಿಗೆ ಉಪಯುಕ್ತವಾಗುವಂತಹ ಕೃತಿಗಳನ್ನೂ ಹೊರತರ ಲಾಗುವುದು. ಇದಕ್ಕಾಗಿ 'ಜನಪ್ರಿಯ ಪುಸ್ತಕಮಾಲೆ'ಯನ್ನು ಆರಂಭಿಸಲಾಗುವುದು. ತನ್ನ ಪ್ರಕಟಣೆಗಳ ಮಾರಾಟವನ್ನು ವಿಕೇಂದ್ರೀಕರಿಸುವ ಉದ್ದೇಶವೂ ಪರಿಷತ್ತಿಗಿದೆ. ಪುಸ್ತಕ ಮನಸ್ಕತೆಯನ್ನು ಹೆಚ್ಚಿಸುವಂತಹ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು.
ಕನ್ನಡದ ಮಹತ್ವದ ಭಾಷಾಶಾಸ್ತ್ರಜ್ಞರಲ್ಲಿ ಒಬ್ಬರಾದ ಶಂ.ಬಾ.ಜೋಶಿಯವರ ಈ ಕೃತಿ ಕನ್ನಡ ನುಡಿಯ ಹುಟ್ಟಿನ ಕುರಿತು ಮಹತ್ವದ ಬೆಳಕನ್ನು ಚೆಲ್ಲುತ್ತದೆ. ಭಾಷೆಯ ಶಬ್ದಗುಣ ಮತ್ತು ಅರ್ಥಗುಣದ ಬಗ್ಗೆ ಈವರೆಗೂ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಕೃತಿ ಕನ್ನಡಕ್ಕೆ ವಿಶಿಷ್ಟವಾದ ನಾದದ ಗುಣದ ಕುರಿತು ಅರ್ಥಪೂರ್ಣ ಚರ್ಚೆಯನ್ನು ಬೆಳೆಸಿದೆ. ಉದಾಹರಣೆಗಳ ಮೂಲಕ ಅದನ್ನು ಬೆಳೆಸಿರುವ ಕ್ರಮ ಗಟ್ಟಿಯಾದ ಸೈದ್ಧಾಂತಿಕ ಚೌಕಟ್ಟನ್ನು ರೂಪಿಸಿದೆ. ಭಾಷಾಶಾಸ್ತ್ರಕ್ಕೆ ಹಲವು ಮಹತ್ತರವಾದ ಒಳನೋಟಗಳನ್ನು ನೀಡುವ ಈ ಕೃತಿಯನ್ನು ಕನ್ನಡಿಗರು ಆದರದಿಂದ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನಮ್ಮದು.
ಈ ಕೃತಿಯನ್ನು ಕನ್ನಡ ಜನರು ಅತ್ಯಂತ ಆದರದಿಂದ ಸ್ವೀಕರಿಸುವರೆಂಬ ನಂಬಿಕೆಯಿದೆ.
ನಾಡೋಜ ಡಾ. ಮಹೇಶ ಜೋತಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
Product Information
Product Information
Shipping & Returns

Original: $0.22
-68%$0.22
$0.07Product Information
Product Information
Shipping & Returns
Shipping & Returns
Description