🎉 Up to 70% Off Selected ItemsShop Sale
HomeStore

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಥೆ - ಚರಿತ್ರೆ - ಪುರಾಣ - ಪರಿಚಯ - ಕ್ಷೇತ್ರ - ದರ್ಶನ

Product image 1
Product image 2

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಥೆ - ಚರಿತ್ರೆ - ಪುರಾಣ - ಪರಿಚಯ - ಕ್ಷೇತ್ರ - ದರ್ಶನ

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಥೆ - ಚರಿತ್ರೆ - ಪುರಾಣ - ಪರಿಚಯ - ಕ್ಷೇತ್ರ - ದರ್ಶನ

ಪೀಠಿಕೆ

ನಮ್ಮ ಭಾರತ ದೇಶವು ಅನೇಕ ಧರ್ಮಗಳ ನೆಲೆವೀಡು. ವಿವಿಧ ಮತ ಪಂಥದವರು ಒಂದೇ ಕಡೆಯಲ್ಲಿ ವಾಸಿಸುತ್ತಿದ್ದರೂ, ವೈವಿಧ್ಯತೆಯಲ್ಲಿ ಏಕತೆಯನ್ನು ಮತ್ತು ಪರಸ್ಪರ ಧರ್ಮಸೌಹಾರ್ದತೆ ಹಾಗೂ ಸಹೋದರ ಭಾವವೆಯನ್ನು ಕಾಣುವ ಪುಣ್ಯಭೂಮಿ ನಮ್ಮದು. ವಿದೇಶಿಯರೂ ಸಹ ಇಲ್ಲಿಯ ಧಾರ್ಮಿಕ ಮನೋಭಾವನೆಗೆ ಮಾರುಹೋಗಿದ್ದಾರಲ್ಲದೆ, ಇಲ್ಲಿಯ ಜನರ ಧರ್ಮಸಹಿಷ್ಣುತೆಯನ್ನು ಮೆಚ್ಚಿಕೊಂಡಿದ್ದಾರೆ.

ಇಡೀ ಭಾತರದೇಶದಲ್ಲೇ ಅನೇಕ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ರಾಜ್ಯವು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿ, ಧಾರ್ಮಿಕ ಭಾವನೆಗಳನ್ನು ದೃಢಪಡಿಸುವುಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕದ ಮಂಗಳೂರು, ಉಡುಪಿ ಜಿಲ್ಲೆಗಳೆಂದರೆ ವಿವಿಧ ಧರ್ಮಗಳ ನೆಲೆಬೀಡೆಂದೇ ಹೇಳಬಹುದು. ಇಲ್ಲಿರುವ ಅನೇಕ ದೇವಾಲಯಗಳು ದೇಶದಾದ್ಯಂತ ಪ್ರಸಿದ್ಧವಾಗಿರುವುದೂ ಅಲ್ಲದೆ, ಧರ್ಮದ ಜಾಗೃತಸ್ಥಾನಗಳಾಗಿ ಭಕ್ತರ ಧರ್ಮಶ್ರದ್ದೆಯನ್ನು ಸದೃಢಗೊಳಿಸುವ ಕೇಂದ್ರಬಿಂದುಗಳಾಗಿವೆ. ಈ ಕೇಂದ್ರಗಳು ಕೇವಲ ಹಿಂದೂಗಳನ್ನು ಮಾತ್ರವೇ ಅಲ್ಲ, ಇತರ ಧರ್ಮಿಯರನ್ನೂ ಆಕರ್ಷಿಸುತ್ತವೆ

ಜೈನ ಧರ್ಮಿಯರ ಆರಾಧ್ಯದೈವವಾದ ಬಾಹುಬಲಿ ಮೂರ್ತಿಯ ಏಕಶಿಲಾ ವಿಗ್ರಹಗಳು ಕಾರ್ಕಳ, ವೇಣೂರು ಮತ್ತು ಧರ್ಮಸ್ಟಗಳಲ್ಲಿವೆ. ಮೂಡಬಿದರೆಯಲ್ಲಿ ಇರುವ ಸಾವಿರ ಕಂಬಗಳ ಬಸದಿ, ಉಳ್ಳಾಲದ ಸಯ್ಯದ್ ಮದನಿ ದರ್ಗಾ, ಸೇಂಟ್ ಅಲೋಶಿಯಸ್, ಮೊಲಾಗ್ರಿಸ್ ಮತ್ತು ಕಾರ್ಕಳದ ಅತ್ತೂರ್ ಚರ್ಚ್ - ಇವೆಲ್ಲವೂ ಪ್ರಸಿದ್ಧವಾಗಿವೆ.

ನಾವು ಭಾರತೀಯರು ಧರ್ಮದಲ್ಲಿ ಅಚಲ ನಂಬಿಕೆಯುಳ್ಳವರು. ಯಾವ ಕಾಲಕ್ಕೂ ಧರ್ಮವೇ ನಮ್ಮನ್ನು ಕಾಪಾಡುವುದೆಂಬ ಅವಿಚಲ ನಂಬಿಕೆ, ಶ್ರದ್ದೆಯುಳ್ಳವರು. ನಮ್ಮ ಈ ಧಾರ್ಮಿಕ ಸಂಸ್ಕೃತಿಯನ್ನು ಧರ್ಮಕ್ಷೇತ್ರಗಳು ಉಳಿಸಿ ಬೆಳೆಸಿಕೊಂಡು ಬರುತ್ತಿವೆ. ಇಹ-ಪರಗಳೆರಡರ ಸಾಧನೆಗೆ, ಧರ್ಮ, ಕಲೆ, ಶಿಕ್ಷಣ, ಸಂಸ್ಕೃತಿ, ಆಧ್ಯಾತ್ಮಿಕ ಏಳಿಗೆಗೆ ಈ ಧಾರ್ಮಿಕ ಕ್ಷೇತ್ರಗಳು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿವೆಯಲ್ಲದೆ, ಅವುಗಳ ಸದೃಢ ನೆಲೆಗೆ ಈ ಕೇಂದ್ರಗಳೇ ಕಾರಣಗಳಾಗಿವೆ.

ಈ ಪರಶುರಾಮ ಸೃಷ್ಟಿಯಲ್ಲಿರುವ ಖ್ಯಾತ ಸಪ್ತಮಹಾಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡದ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಪುರಾಣಪ್ರಸಿದ್ಧವಾದುದು. ಸುಳ್ಯ ತಾಲೂಕಿನ ಪೂರ್ವ ಭಾಗದಲ್ಲಿ ನೆಲೆಸಿದ ಈ ಕ್ಷೇತ್ರವು ಮಲೆನಾಡಿನ ಅಂಚಿನಲ್ಲಿ ಆವೃತವಾಗಿದೆ. ಕುಮಾರಧಾರಾ ನದಿಯು ಸುಬ್ರಹ್ಮಣ್ಯ ಕ್ಷೇತ್ರದ ಹೊರದ್ವಾರದಲ್ಲಿ ಪ್ರವಹಿಸುತ್ತದೆ.

ನದಿಯ ಎರಡೂ ದಡಗಳಲ್ಲೂ ದಟ್ಟವಾಗಿ ಬೆಳೆದಿರುವ ಗಿಡಮರ, ಬಳ್ಳಿಗಳ ಫಲವತ್ತಾದ ಗೊಂಚಲುಗಳಲ್ಲಿ ಹಾರಾಡುವ ದುಂಬಿಗಳಿಂದಲೂ, ಕೋಗಿಲೆಗಳ ಮಧುರವಾದ ಪಂಚಮ ಸ್ವರಗಳಿಂದಲೂ, ಹಲಸು, ತೆಂಗು, ಬಾಳೆ, ಅಡಿಕೆ ಇತ್ಯಾದಿ ಗಿಡಮರಗಳಿಂದ ತುಂಬಿದ ಪ್ರಕೃತಿ ಸೌಂದರ್ಯವು ಭಕ್ತರನ್ನು ತನ್ನತ್ತ ಕೈಬೀಸಿ ಕರೆದು ಮನಸ್ಸಿಗೆ ಪರಮೋಲ್ಲಾಸವನ್ನು ಉಂಟುಮಾಡುತ್ತವೆ. ಕಬ್ಬು, ಬತ್ತಗಳ ಹೊಲಗದ್ದೆ ಗಳಿಂದಲೂ, ಹುಲುಸಾಗಿ ಬೆಳೆದಿರುವ ತೋಟಗಳಿಂದಲೂ ಸುಶೋಭಿತವಾದ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ಅಗ್ರಹಾರಗಳಿಂದ ಬರುವ ವೇದಘೋಷಗಳು, ಮಹಾಮುನಿಗಳ ಆಶ್ರಮಗಳಿರುವುದರಿಂದ ಕುಮಾರಸ್ವಾಮಿಯು ಸರ್ಪಗಳ ರಾಜನಾದ ವಾಸುಕಿಯೊಂದೊಡಗೂಡಿ ವಾಸಮಾಡಿದನೆಂದು ಹೇಳಿದರೆ ತಪ್ಪಾಗಲಾರದು.

$0.10

Original: $0.32

-69%
ಕುಕ್ಕೆ ಶ್ರೀಸುಬ್ರಹ್ಮಣ್ಯ ಕಥೆ - ಚರಿತ್ರೆ - ಪುರಾಣ - ಪರಿಚಯ - ಕ್ಷೇತ್ರ - ದರ್ಶನ

$0.32

$0.10

Product Information

Shipping & Returns

Description

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಥೆ - ಚರಿತ್ರೆ - ಪುರಾಣ - ಪರಿಚಯ - ಕ್ಷೇತ್ರ - ದರ್ಶನ | Harivu Books