🎉 Up to 70% Off Selected ItemsShop Sale
HomeStore

ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು

Product image 1
Product image 2

ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು

ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು

ಇದು ದೀಕ್ಷಿತರ ಕಥಾ ಜಗತ್ತು. ಇದು ಇಂದಿನ ನಮ್ಮ ನಾಡಿನ, ಒಟ್ಟಾರೆ ದೇಶದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕನ್ನಡಿ ಏಕೆಂದರೆ ದೀಕ್ಷಿತರು ಚಿತ್ರಗಳನ್ನು ತೋರುತ್ತಾರೆಯೇ ಹೊರತು ತೀರ್ಮಾನಗಳನ್ನು ಹೇಳುವುದಿಲ್ಲ. ಕನ್ನಡಿಯ ಪ್ರತಿಫಲನ ಯಾಂತ್ರಿಕವಾದುದು, ನಿಜ. ಆದರೆ ಕನ್ನಡಿ ಎಲ್ಲಿ, ಯಾವುದಕ್ಕೆ ಹಿಡಿಯುವುದು ಎಂಬುದು ಕಲಾವಿದನ(ಕತೆಗಾರನ) ನಿಲುವುಗಳನ್ನು " ಧ್ವನಿಸುತ್ತದೆ. ಅಬ್ಬರವಿಲ್ಲದೆ ಅವರು ಇಂದಿನ ಬಾಳುವೆಯ ಅನೇಕ ನಿಷ್ಟುರ ಸತ್ಯಗಳನ್ನು ಹೇಳಿದ್ದಾರೆ. ಕತೆಗಳಿಂದ ಹೊರಬಂದ ಮೇಲೂ ಅವರ ಅನೇಕ ಪಾತ್ರಗಳು ನನ್ನ ಮನಸಿನಲ್ಲಿ ಉಳಿದಿವೆ: ಪದ್ಮಾವತಿ, ಕಾಶಪ್ಪ, ರೇವಾಡಿಯ ಅಣ್ಣ ಶ್ರೀ ತಮ್ಮ, ಅತ್ತೆ, ಈಶ್ವರಮಾವ, ವಾಸಂತಿ, ರಮಾಕಾಂತ, ಸುಗುಣಾ, ಸರಳಾಬಾಯಿ ತಕ್ಷಣ ನೆನಪಿಗೆ ಬರುವ ಕೆಲವು ಹೆಸರುಗಳು. ನಮಗಾಗುವ ಅನುಭವಗಳನ್ನು ಬುಡಮಟ್ಟ ಪ್ರತ್ಯಕ್ಷವಾಗಿ ಶೋಧಿಸಬೇಕೆಂಬ ನಿಲುವಿನಲ್ಲಿ ವೆಂಕಟೇಶ ದೀಕ್ಷಿತರು ಅವರದೇ ಕಥೆಯ ಸುಭಾಷ ರೆಡ್ಡಿಗೆ ಹತ್ತಿರವಿದ್ದಾರೆ! ಅವರ ಸೃಜನಶೀಲತೆಯ ಮಹತ್ವದ ಕ್ಷಣಗಳು ಇಲ್ಲಿಯ ಕಥೆಗಳಲ್ಲಿವೆ. ಇದಕ್ಕಾಗಿ ನಮ್ಮ ಗೆಳೆಯರನ್ನು ಪ್ರೀತಿ ಮತ್ತು ಸಂತೋಷದಿಂದ ಅಭಿನಂದಿಸುತ್ತಿದ್ದೇನೆ.

-ಚೆಂತಾಮಣಿ ಕೊಡ್ಲೆಕೆರೆ

$0.65

Original: $2.16

-70%
ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು

$2.16

$0.65

Product Information

Shipping & Returns

Description

ಇದು ದೀಕ್ಷಿತರ ಕಥಾ ಜಗತ್ತು. ಇದು ಇಂದಿನ ನಮ್ಮ ನಾಡಿನ, ಒಟ್ಟಾರೆ ದೇಶದ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಕನ್ನಡಿ ಏಕೆಂದರೆ ದೀಕ್ಷಿತರು ಚಿತ್ರಗಳನ್ನು ತೋರುತ್ತಾರೆಯೇ ಹೊರತು ತೀರ್ಮಾನಗಳನ್ನು ಹೇಳುವುದಿಲ್ಲ. ಕನ್ನಡಿಯ ಪ್ರತಿಫಲನ ಯಾಂತ್ರಿಕವಾದುದು, ನಿಜ. ಆದರೆ ಕನ್ನಡಿ ಎಲ್ಲಿ, ಯಾವುದಕ್ಕೆ ಹಿಡಿಯುವುದು ಎಂಬುದು ಕಲಾವಿದನ(ಕತೆಗಾರನ) ನಿಲುವುಗಳನ್ನು " ಧ್ವನಿಸುತ್ತದೆ. ಅಬ್ಬರವಿಲ್ಲದೆ ಅವರು ಇಂದಿನ ಬಾಳುವೆಯ ಅನೇಕ ನಿಷ್ಟುರ ಸತ್ಯಗಳನ್ನು ಹೇಳಿದ್ದಾರೆ. ಕತೆಗಳಿಂದ ಹೊರಬಂದ ಮೇಲೂ ಅವರ ಅನೇಕ ಪಾತ್ರಗಳು ನನ್ನ ಮನಸಿನಲ್ಲಿ ಉಳಿದಿವೆ: ಪದ್ಮಾವತಿ, ಕಾಶಪ್ಪ, ರೇವಾಡಿಯ ಅಣ್ಣ ಶ್ರೀ ತಮ್ಮ, ಅತ್ತೆ, ಈಶ್ವರಮಾವ, ವಾಸಂತಿ, ರಮಾಕಾಂತ, ಸುಗುಣಾ, ಸರಳಾಬಾಯಿ ತಕ್ಷಣ ನೆನಪಿಗೆ ಬರುವ ಕೆಲವು ಹೆಸರುಗಳು. ನಮಗಾಗುವ ಅನುಭವಗಳನ್ನು ಬುಡಮಟ್ಟ ಪ್ರತ್ಯಕ್ಷವಾಗಿ ಶೋಧಿಸಬೇಕೆಂಬ ನಿಲುವಿನಲ್ಲಿ ವೆಂಕಟೇಶ ದೀಕ್ಷಿತರು ಅವರದೇ ಕಥೆಯ ಸುಭಾಷ ರೆಡ್ಡಿಗೆ ಹತ್ತಿರವಿದ್ದಾರೆ! ಅವರ ಸೃಜನಶೀಲತೆಯ ಮಹತ್ವದ ಕ್ಷಣಗಳು ಇಲ್ಲಿಯ ಕಥೆಗಳಲ್ಲಿವೆ. ಇದಕ್ಕಾಗಿ ನಮ್ಮ ಗೆಳೆಯರನ್ನು ಪ್ರೀತಿ ಮತ್ತು ಸಂತೋಷದಿಂದ ಅಭಿನಂದಿಸುತ್ತಿದ್ದೇನೆ.

-ಚೆಂತಾಮಣಿ ಕೊಡ್ಲೆಕೆರೆ

ಮಾವಿನಕುರ್ವೆ ಬೀಗ ಮತ್ತು ಇತರ ಕತೆಗಳು | Harivu Books