🎉 Up to 70% Off Selected ItemsShop Sale
HomeStore

ಮೊದಲ ತೊದಲು

Product image 1
Product image 2

ಮೊದಲ ತೊದಲು

ಮೊದಲ ತೊದಲು

ರಾಜ್ಯದ ಹಿರಿಯ ಕವಯತ್ರಿಯರಲ್ಲಿ ಒಬ್ಬರಾಗಿರುವ ಶ್ರೀಮತಿ ಶೋಭಾ ಪುರೋಹಿತ್ ಅವರು ಮೂಲತಃ ರಾಯಚೂರು ಜಿಲ್ಲೆಯವರು; ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಿವೃತ್ತ ಸರ್ಕಾರಿ ನೌಕರರಾಗಿರುವ ಇವರು ಚಿಕ್ಕ ವಯಸ್ಸಿನಲ್ಲಿಯೇ ಕವನಗಳನ್ನು ಬರೆಯಲಾರಂಭಿಸಿದರು. ಇವರು ೧೨ನೇ ವಯಸ್ಸಿನಲ್ಲಿದ್ದಾಗ ಬರೆದ 'ಹೃದಯಸ್ಪರ್ಶಿ' ಎಂಬ ಕವನ ೧೯೭೨ರಲ್ಲಿ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ಇವರ ತಂದೆ ಕಂದಾಯ ಇಲಾಖೆಯಲ್ಲಿ ತಹಸೀಲ್ದಾರರಾಗಿ ಸೇವೆ ಸಲ್ಲಿಸಿ, ನಂತರ ಬೆಂಗಳೂರು ಡೈರಿಯಲ್ಲಿ (Dairy) ಎರವಲು ಸೇವೆಯ ಮೇಲೆ ಕೆಲಸ ಮಾಡಿ ನಿವೃತ್ತರಾಗಿದ್ದರು. ಇವರು ಕಳೆದ ಏಳು ವರ್ಷಗಳ ಹಿಂದೆ ನಿಧನರಾದರು. ತಾಯಿ ಶ್ರೀಮತಿ ಶಾಮಲ ಅವರು ಗೃಹಿಣಿಯಾಗಿದ್ದು, ಅವರು ಗತಿಸಿ ೧೩ ವರ್ಷಗಳಾಯಿತು. ಐದು ಮಕ್ಕಳ ಪೈಕಿ ಇವರು ಎರಡನೆಯವರು. ಇವರ ಅಕ್ಕನನ್ನು ಹೊರತುಪಡಿಸಿ ಉಳಿದವರೆಲ್ಲರೂ ಉನ್ನತ ಉದ್ಯೋಗದಲ್ಲಿದ್ದು ಈಗ ನಿವೃತ್ತಿ ಹೊಂದಿದ್ದಾರೆ.

ಬಾಲ್ಯದಿಂದಲೇ ಕವನ ಬರೆಯುತ್ತಿದ್ದರೂ, ನಂತರದ ದಿನಗಳಲ್ಲಿ ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳಿಂದಾಗಿ ಕವನ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಾವು ಮತ್ತೆ ಕವನ ರಚಿಸಲು ಕುಟುಂಬ ಸದಸ್ಯರು, ಸೋದರ-ಸೋದರಿಯರು, ಸ್ನೇಹಿತೆಯರು, 'ಕಥಾ ಕವನ ಸಂಕಲನ' ಗುಂಪಿನ ನಿರ್ಮಾತೃ ಪಲ್ಲವಿ ಇಡ್ಯಾ ಹಾಗೂ ವಿವಿಧ ಸಾಹಿತ್ಯ ಗುಂಪುಗಳ ಕಾವ್ಯಾಸಕ್ತರ ಪ್ರೇರಣೆ ಮತ್ತು ಸಹಕಾರವೇ ಕಾರಣವೆಂದು ಶ್ರೀಮತಿ ಶೋಭಾ ಪುರೋಹಿತ್ ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ನಮ್ಮ 'ಪ್ರಗತಿಪರ ಪ್ರಕಾಶನ'ದ ವತಿಯಿಂದ ಲೇಖಕ-ಲೇಖಕಿಯರ ಪ್ರಥಮ ಕೃತಿಗಳನ್ನು ಹೊರತರಲಾಗುತ್ತಿದೆ. ೧೯೮೫ರಿಂದ ಇಲ್ಲಿಯವರೆಗೆ ೩೩೦ ಕೃತಿಗಳನ್ನು ಪ್ರಕಟಿಸಲಾಗಿದ್ದು, ಸಂಸ್ಥೆಗೆ ಇದೀಗ ೩೫ರ ಹರೆಯ. ಇಂತಹ ಶುಭ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಜನಿಸಿ, ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಶೋಭಾ ಪುರೋಹಿತ್ ಅವರ 'ಮೊದಲ ತೊದಲು' ಎಂಬ ಪ್ರಥಮ ಕೃತಿಯನ್ನು ಹೊರತರಲಾಗುತ್ತಿದೆ. ಇದು ಸಂಸ್ಥೆಯ ೩೩೧ನೇ ಪ್ರಕಟಣೆ.

ಹಿರಿಯರಾದ ಶೋಭಾ ಪುರೋಹಿತ್ ಅವರಿಗೆ ಅಪಾರ ಜೀವನಾನುಭವವಿದೆ. ಸಮಾಜದ ಒಳ-ಹೊರಗನ್ನು ತೆರೆದ ಕಣ್ಣುಗಳಿಂದ ನೋಡಿದ ಇವರ ಕವನಗಳಲ್ಲಿ ಸಾಮಾಜಿಕ ತುಡಿತವಿದೆ. ಇವರ ಪ್ರಥಮ ಕೃತಿ 'ಮೊದಲ ತೊದಲು' ಇದೀಗ ನಿಮ್ಮ ಕೈಯಲ್ಲಿದೆ. ಕವಯತ್ರಿ ಶೋಭಾ ಪುರೋಹಿತ್ ಅವರಿಗೆ ಒಳಿತಾಗಲಿ; ಇವರಿಂದ ಇನ್ನೂ ನೂರಾರು ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಲಭಿಸಲಿ ಎಂಬುದೇ ನಮ್ಮ ಹಾರೈಕೆ.

ಡಾ|| ಭೇರ್ಯ ರಾಮಕುಮಾರ್
ಸಾಹಿತಿಗಳು ಮತ್ತು ಪ್ರಕಾಶಕರು, ಪ್ರಗತಿಪರ ಪ್ರಕಾಶನ.

$0.20

Original: $0.65

-69%
ಮೊದಲ ತೊದಲು

$0.65

$0.20

Product Information

Shipping & Returns

Description

ಮೊದಲ ತೊದಲು | Harivu Books