🎉 Up to 70% Off Selected ItemsShop Sale
HomeStore

ಮೂವತ್ನಾಲ್ಕು ಹೆಜ್ಜೆಗಳು

Product image 1
Product image 2

ಮೂವತ್ನಾಲ್ಕು ಹೆಜ್ಜೆಗಳು

ಮೂವತ್ನಾಲ್ಕು ಹೆಜ್ಜೆಗಳು

ಸಾಹಿತ್ಯಕ ವಾತಾವರಣದಲ್ಲಿ ಬೆಳೆದು ಬಂದಿರುವ ಸಂದ್ಯೋದ ವಾಡಪ್ಪಿಯವರು ಸಹಜವಾಗಿಯೇ ಸಾಹಿತ್ಯವನ್ನು ಸಂಭ್ರಮಿಸುವವರು, ಶಾಲಾ ದಿನಗಳಿಂದಲೇ ತನ್ನ ಎಳೆಯ ಭಾವನೆಗಳಿಗೆ ಶಬ್ದ ಪೋಣಿಸುವ ಗುಣವನ್ನು ಪಡೆದುಕೊಂಡಿರುವ ಸಂಸ್ಕೋದ ಅವರು ಇಂದಿನ ಭರಾಟೆಯ ಬದುಕಿನಲ್ಲೂ ಸೃಜನಶೀಲರಾಗಿರುವದು ಸಂತಸದ ಸಂಗತಿಯೇ ಸರಿ, ಸಮಾಜ ಮುಖಿ ಚಿಂತನೆಗಳು ಬಹುತೇಕ ಇಲ್ಲಿಯ ಕವನಗಳ ಆಶಯವಾಗಿರುವದನ್ನು ನಾವು ಗಮನಿಸಬಹುದು. "ಕಳೆದು ಹೋದ ದೇವರುಗಳು" ಧರ್ಮದ ಡಾಂಭಿಕತೆಯಲ್ಲಿ ದೇವರು ಕಳೆದು ಹೋಗಿದ್ದಾನೆ ಎಂಬ ನೋವು ಅವರಲ್ಲಿ ಕಾಣುತ್ತದೆ. 'ನಾನೊಂದು ಗೊಂಬೆ" ಭಯೋತ್ಪಾದನೆಯ ಭೀಕರ ಚಿತ್ರವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ. "ನಮ್ಮೂರ ಜಾತ್ರೆ" ಜಾತ್ರೆಯ ವರ್ಣನೆಯಂತೆ ಕಂಡರೂ ಯುಗಧರ್ಮಕ್ಕೆ ತಕ್ಕಂತೆ ಮೌಲ್ಯಗಳು ಬಣ್ಣ ಬದಲಿಸಿಕೊಂಡರೂ, ಆದರ್ಶಗಳು ನಿತ್ಯ ನೂತನವಾಗಿರುತ್ತದೆ ಎಂಬುದು ಈ ಕವಿತೆಯ ಆಂತರ್ಯ.

೬೦ ಕವನಗಳನ್ನು ಹೊಂದಿರುವ ಈ ಕವಿತಾ ಸಂಕಲನದ ಆರಂಭದ ಕವನಗಳು ಬಾಲ್ಯದಲ್ಲಿಯೇ ಬರೆದಿರುವುದರಿಂದ ಸಹಜವಾಗಿಯೇ ಶಬ್ದ ಸಂಪತ್ತು ಹಾಗು ಜೀವನಾನುಭವದ ಕೊರತೆ ಕಂಡರೂ ಯೌವನದ ತುಡಿತದಲ್ಲಿ ಕವಿತೆಗಳು ಸಮಾಜದ ಓರೆ ಕೋರೆಗಳನ್ನು ತಿದ್ದ ಬೇಕೆಂಬುವ ಹಂಬಲ ಎದ್ದು ಕಾಣುತ್ತದೆ. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ತಣ್ಣನೆಯ ಪ್ರತಿಭಟನೆ ಕವಿತೆಯಲ್ಲಿ ಕಂಡು ಬರುತ್ತದೆ. ಈ ಪರಿಪ್ರೇಕ್ಷದಲ್ಲಿ "ಯುದ್ಧ" ಕವನ ಚೆನ್ನಾಗಿ ಮೂಡಿಬಂದಿದೆ. 'ಹೇ ಸುನಾಮಿ"ಯಲ್ಲಿ "ದಡ ನಂಬಿ ಬದುಕಿದವರಿಗೆ ನೀರು ಕುಡಿಸಿದೆಯಲ್ಲ" ಎಂಬ ದ್ವಂದ್ವಾರ್ಥದಲ್ಲಿ ವಿಷಾದ ಎದ್ದು ತೋರುತ್ತದೆ. ಯಾವುದನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿದ್ದನೋ ಆ ವ್ಯಕ್ತಿ ಈಗ ನೀರಿನ ಪಾಲಾಗಿದ್ದಾನೆ. ಯಾರನ್ನು ನಂಬುವದು ಎಂಬುದು ತೋಚದಂತಾಗಿದೆ. "ಮೊಲೆವಾಲು ನಂಜಾಗಿ" ವಚನದ ಅಂತರ್ಯವೂ ಇದೇ ಅಲ್ಲವೇ?

ರುದ್ರ ರಮಣೀಯ, ಪ್ರಕೃತಿ ಸಾಮಾಜಿಕ ವಿರೋಧಾಭಾಸಗಳು, ಹಾಸ್ಯಾಸ್ಪದವಾಗುತ್ತಿರುವ ದೇಶಪ್ರೇಮದ ಕಲ್ಪನೆ, ಕವಿಯ ಮನ ಕಲುಕಿದ ಕೆಲ ಚಿಕ್ಕ ಪುಟ್ಟ ಘಟನೆಗಳು, ಇವರ ಕವಿತೆಗಳ ಮುಖ್ಯ ಸಂಗತಿಗಳಾಗಿವೆ. ಆದರೆ, ಕವಿಯಾಗಲು ಬಯಸುವ ಯಾವುದೇ ತರುಣ-ತರುಣಿ ತನ್ನ ಅಂತರಂಗದ ತುಮುಲವನ್ನು ಕವಿತೆಯಾಗಿಸುವಾಗ ಪ್ರಣಯ-ಪ್ರೀತಿ ಗಂಡು ಹೆಣ್ಣಿನ ನಡುವೆ ಇರುವ ಅದಮ್ಯ ಸೆಳೆತ ಕಾವ್ಯದ ಒಂದು ಮಹತ್ವದ ವಸ್ತುವಾಗಿರುತ್ತದೆ. ಇಂತಹ ಭಾವನೆ ಸಂಮೋದ ಅವರಲ್ಲಿ ಕಂಡು ಬರದೇ ಇರುವದು ಸೋಜಿಗವೆನಿಸುತ್ತದೆ.

ಹೊಸ ಪೀಳಿಗೆಯ ಜನರನ್ನು ತಲುಪಲು ಈಗ ಇಲೆಕ್ಟ್ರಾನಿಕ ಮಾಧ್ಯಮಗಳು ಬಳಕೆಯಾಗುತ್ತಿದೆ. ಅಂತಹ ಓದುಗರ ಸಂಖೆಯೂ ಹೆಚ್ಚಿದೆ. ಸಾಹಿತ್ಯದ ಕುರಿತು ಅವರಿಗೆ ಇರುವ ಅಭಿರುಚಿಯನ್ನು ಕಂಡು ಅವರ ಬಗ್ಗೆ ಗೌರವ ಮೂಡುತ್ತದೆ. ಆದರೆ ಇದರೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಕಾವ್ಯ ಸಂಪತ್ತಿನ ಪರಿಚಯವಾದರೆ, ನಾವು ಈಗ ಬರೆಯುತ್ತಿರುವ ಕವಿತೆಗಳು ಇನ್ನಷ್ಟು ಪರಿಪಕ್ವಗೊಂಡು, ಆಳವಾದ ಅಧ್ಯಯನ ಬಯಸುವ ಕವಿತೆಗಳಾಗಿ ಮಾರ್ಪಡುತ್ತವೆ. ಕಾಲವನ್ನು ಮೀರಿ ಕವಿತೆ ಉಳಿಯಬೇಕೆನ್ನುವ ಬಯಕೆ ಸಾಕಾರಗೊಳ್ಳುತ್ತದೆ. ಇಂತಹ ಯಶಸ್ಸು ಸಂದ್ಯೋದ ವಾಡಪ್ಪಿಯವರಿಗೆ ಸಿದ್ದಿಸಲಿ ಎಂಬುದು ನನ್ನ ಹಾರೈಕೆಯಾಗಿದೆ.

ಶುಭಾಶಯಗಳೊಂದಿಗೆ ಪರಿಣಿತೇಶ

$0.86
ಮೂವತ್ನಾಲ್ಕು ಹೆಜ್ಜೆಗಳು
$0.86

Product Information

Shipping & Returns

Description

ಮೂವತ್ನಾಲ್ಕು ಹೆಜ್ಜೆಗಳು | Harivu Books