🎉 Up to 70% Off Selected ItemsShop Sale
HomeStore

ನಾವು ಹೊಸ ಗೆಳೆಯರು

Product image 1
Product image 2

ನಾವು ಹೊಸ ಗೆಳೆಯರು

ನಾವು ಹೊಸ ಗೆಳೆಯರು

ಕಲಘಟಗಿಯ ಬೆಲವಂತರ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈ.ಜಿ. ಭಗವತಿಯವರು 'ದೇವಮ್ಮನ ಲೋಟ' ಹಾಗೂ 'ಸುಂದರಜ್ಜಿಯ ಮೊಮ್ಮಗನಂತೆ' ಎಂಬ ಸಂವೇದನಾಶೀಲ ಕಥಾಸಂಕಲನಗಳ ಮೂಲಕ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಇದೀಗ 'ಮತ್ತೆ ಹೊಸ ಗೆಳೆಯರು' ಎಂಬ ದೀರ್ಘ ಕಥನಕ್ಕೆ ಒಡ್ಡಿಕೊಂಡಿರುವುದು ಸಂತೋಷದ ಸಂಗತಿ.

ರಾಮದುರ್ಗದ ಶಾಲೆಯಿಂದ ಸುರೇಬಾನ ಎಂಬ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗೆ ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿ ಬಂದ ಅನಿಲ, ಅಲ್ಲಿನ ಹೊಸ ಗೆಳೆಯರನ್ನು ತನ್ನ ಮನಸ್ಸಿನ ಆವರಣದಲ್ಲಿ ಬಿಟ್ಟುಕೊಳ್ಳುವ ಸಂದರ್ಭದಿಂದ ಇಲ್ಲಿನ ಕಥನ ಆರಂಭಗೊಳ್ಳುತ್ತದೆ. ಏಳನೇ ತರಗತಿ ಮುಗಿಸಿದ ಅನಿಲನ ತಂದೆಗೆ ಬೇರೆ ಊರಿಗೆ ವರ್ಗಾವಣೆಯಾದಾಗ, ಪುನಃ ಗೆಳೆಯರನ್ನು ತೊರೆಯುವ ಸಂದರ್ಭದವರೆಗೆ ಈ ಕಾದಂಬರಿಯ ಹರವು ವಿಸ್ತರಿಸಿದೆ.

ಇಲ್ಲಿ ತಾಯಂದಿರು ಮಕ್ಕಳ ಮನಸ್ಸನ್ನು ಹಾಗೂ ನಡವಳಿಕೆಗಳನ್ನು ಗಮನಿಸುತ್ತ ತಿದ್ದುತ್ತಿರುವುದು ಮೂರಾಲ್ಕು ಸಂದರ್ಭಗಳಲ್ಲಿ ಕಾಣಿಸುತ್ತದೆ. ಇವೆಲ್ಲ ನಮ್ಮ ಮಹಿಳೆಯರ ಸೂಕ್ಷ್ಮಮತಿಗೆ ನಿಲುಕುವ ಅನನ್ಯತೆ ಮತ್ತು ಕಾಳಜಿಗಳಲ್ಲವೇ ಅನಿಸುವಂತಿವೆ. ಒಡೆದ ಎರಡು ಮನಸ್ಸುಗಳನ್ನು ಸೇರಿಸುವ ಕೊಂಡಿಯಾಗಿ 'ಅಮ್ಮ' ಎಂಬ ವ್ಯಕ್ತಿ ಇದ್ದೇ ಇರುತ್ತಾಳೆ. ಇಡೀ ಕಾದಂಬರಿಯ ಉದ್ದಕ್ಕೂ ಅಮ್ಮನ ವ್ಯಕ್ತಿತ್ವವನ್ನು ಲೇಖಕರು ಘನತೆಯಿಂದ ಕಾಪಿಟ್ಟಿದ್ದಾರೆ.

— ಸುನಂದಾ ಕಡಮೆ ಕಥೆಗಾರ್ತಿ, ಹುಬ್ಬಳ್ಳಿ

ತಮ್ಮ ಅನುಭವವನ್ನೇ ಆಧಾರವಾಗಿರಿಸಿಕೊಂಡು ವೈ.ಜಿ. ಭಗವತಿಯವರು 'ಮತ್ತೆ ಹೊಸ ಗೆಳೆಯರು' ಎಂಬ ಮಕ್ಕಳ ಕಾದಂಬರಿಯನ್ನು ರಚಿಸಿದ್ದಾರೆ. ಇದು ಈಗಾಗಲೇ ಅನೇಕ ಕಂತುಗಳಲ್ಲಿ ನಮ್ಮ 'ನೈರುತ್ಯ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖಕರೇ ತಿಳಿಸಿರುವಂತೆ, ನೈಜತೆಯ ಜೊತೆ ಒಂದಿಷ್ಟು ಕಲ್ಪನೆಗಳನ್ನು ಬೆರೆಸಿ ಕಥೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ವಾಸ್ತವವಾಗಿ ಇದು ನಮ್ಮ ಸಮಕಾಲೀನರಿಗೆ ತಮ್ಮದೇ ಅನುಭವವೆನಿಸಿದರೆ, ಇಂದಿನ ಮಕ್ಕಳಿಗೆ ಈ ಕಾದಂಬರಿಯಲ್ಲಿನ ಅಂಶಗಳು ಕುತೂಹಲ ಮತ್ತು ಅಚ್ಚರಿ ಮೂಡಿಸಬಹುದು. ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಸಂದರ್ಭದಲ್ಲಿ ಅನೇಕ ಓದುಗರು ಈ ಧಾರವಾಹಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

— ಡಾ. ಅರುಣ ಹೊಸಕೊಪ್ಪ ಸಂಪಾದಕರು, 'ನೈರುತ್ಯ' ಮಾಸಪತ್ರಿಕೆ, ಬೆಂಗಳೂರು.

$0.57

Original: $1.89

-70%
ನಾವು ಹೊಸ ಗೆಳೆಯರು

$1.89

$0.57

Product Information

Shipping & Returns

Description

ನಾವು ಹೊಸ ಗೆಳೆಯರು | Harivu Books