ಪಡಸಾಲಿ
ಹಳ್ಳಿಯ ಘಮಲನ್ನು, ಬಾಲ್ಯದ ಸವಿಯನ್ನು, ವಿಜ್ಞಾನದ ಮೆಲುಕನ್ನು ಕಾವ್ಯದ ಸವಿಯಲ್ಲಿ ಹಿಡಿದು ಕಟ್ಟಿದ ಕವಿತೆಗಳು ಈ ಸಂಕಲನದಲ್ಲಿವೆ. ವೆಂಕಟೇಶ ಮರಕಂದಿನ್ನಿಯಂತಹ ಗ್ರಾಮದಲ್ಲಿ ತಾನು ಮತ್ತು ತನ್ನಂತೆ ಬದುಕಿದವರು ಸಂಕಟದಲ್ಲೂ-ಸಂತಸದಲ್ಲೂ ಅನುಭವಿಸುವ ಸಂಗತಿಗಳನ್ನು ಹಾಡಾಗಿಸಿದ್ದಾರೆ. ‘ಗುಡಿಸಲ ಬದುಕಾದರೂ ನಾಡಿಗೆ ಬೆಳಕಾಗುವವರು ಇವರೇ’ ಎನ್ನುವ ಆಶಯದ ಕವಿತೆ -
ಹೊಗೆ ಸೂರಿದ ಟಿನ್ನಿನ ಕಪ್ಪು ಮಸಿ ಕಣ್ಣ ಕಾಡಿಗೆ, ಇಲ್ಲಿಂದಲೇ ಹುಟ್ಟುತ್ತವೆ ನಾನಾ ಬಣ್ಣಗಳು ಈ ನಾಡಿಗೆ.
ಭಾರತಕ್ಕೆ ಬೇಕಾದ ಭೇದರಹಿತ ಸಮಾಜವನ್ನು ಕವಿ ಅವ್ವನಲ್ಲಿ ಕಾಣುತ್ತಾನೆ. 'ಯಾವ ದೇಶವೂ ಇದುವರೆಗೂ ಮತ್ತು ಮುಂದೆಂದಿಗೂ ನಿರ್ಮಿಸದಷ್ಟು ಎತ್ತರದ ಪ್ರತಿಮೆ ನನ್ನವ್ವ' ಎನ್ನುತ್ತ ಅವಳ ಕಾಯಕದಲ್ಲಿ ಸಮಾನತೆಯ ಸಂದೇಶ ಹುಡುಕಿದ್ದಾರೆ -
ಅಮನಾಬೇಗಂ, ಅಂಕಲೀಯ ಜೋಡಾ, ಕಮಲಮ್ಮ ಹೀಗೆ ಎಲ್ಲರ ಬಟ್ಟೆಗಳನ್ನು ಒಂದೇ ಬಾಕ್ಸಿನಲ್ಲಿ ಹಾಕಿಕೊಳ್ಳುವ ಅವ್ವನ ರಾಟೆಚಕ್ರಕ್ಕೆ ಯಾವುದೇ ಭೇದವಿಲ್ಲ.
ಇಂಗ್ಲಿಷ್ ಪದಗಳನ್ನು ಕನ್ನಡವೆಂಬಂತೆ ಆಪ್ತತೆಯಲ್ಲಿ ಬಳಸಿದ್ದು ಕವಿಯ ಜಾಣ್ಮೆ. ಓದಿದ ವಿಜ್ಞಾನವನ್ನು ಗೆಳತಿಗೆ ಉಪಮೆಯಾಗಿಸಿ ‘ಹನ್ನೆರಡು ವರುಷ ಕಾಯಿಸುವ ನೀಲಕುರಂಜಿಯೂ ಅಲ್ಲ’ ಅನ್ನುತ್ತಾರೆ. ಪ್ರಯೋಗಕ್ಕಾಗಿ ಬಳಸಿದ ಶಬ್ದಗಳ ಸಶಕ್ತತೆ 'ಯಂಕನ್ ಪದ'ದಲ್ಲಿ ವ್ಯಕ್ತವಾಗಿದೆ. ನೋವನ್ನೂ, ಪ್ರೀತಿಯನ್ನೂ, ಬದುಕಿನ ವೈರುಧ್ಯಗಳನ್ನು ವಿನೂತನವಾಗಿ ಕಾವ್ಯದಲ್ಲಿ ಕೊಟ್ಟಿದ್ದಾರೆ.
– ಮಹಾಂತೇಶ ಮಸ್ಕಿ ಮಾಜಿ ಅಧ್ಯಕ್ಷರು, ಜಿಲ್ಲಾ ಕ.ಸಾ.ಪ., ರಾಯಚೂರು
ಇಲ್ಲಿನ ಕವಿತೆಗಳು ವ್ಯಷ್ಟಿ ಮತ್ತು ಸಮಷ್ಟಿಗಳನ್ನು ಸಮನಾಗಿ ಒಳಗೊಳ್ಳುವ ಮತ್ತು ಇವೆರಡರ ನಡುವಿನ ಒಂದು ಆರೋಗ್ಯಕರವಾದ ಸಮದೂರದಲ್ಲಿ ನಿಂತು ತನ್ನ ಒಳಗನ್ನು ತನ್ನ ಸುತ್ತಣ ಹೊರಗಿನೊಂದಿಗೆ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುವ ಎಚ್ಚರವನ್ನು ಸಾಧಿಸಿವೆ.
ಮತ್ತು ತಮ್ಮ ಪ್ರಾದೇಶಿಕ ಭಾಷಾ ಸೊಗಡಿನಿಂದ, ತನ್ನದೇ ಆದ ಕಾವ್ಯ ಜಿಜ್ಞಾಸೆ ಹಾಗು ಅಂತರಂಗ ಬಹಿರಂಗಗಳ ಜೊತೆ ಕವಿ ನಡೆಸುವ ಅನುಸಂಧಾನದಿಂದ, ಸಾಮಾಜಿಕ ಕಳಕಳಿಯ ಬದ್ಧತೆಯಿಂದ, ಹೊಸ ಬಗೆಯ ಪದಸ್ಪರ್ಶದಿಂದ, ಅಪರೂಪವಾದ ರೂಪಕ ಮತ್ತು ಪ್ರತಿಮೆಗಳ ಬಳಕೆಯಿಂದ, ಕನ್ನಡ ನಾಡಿನ ಬಗೆಗಿನ ವಿಶೇಷ ಕಳಕಳಿಯಿಂದ - ಭೂತ ಮತ್ತು ವರ್ತಮಾನಗಳ ನಡುವಿನ ತಾಕಲಾಟದಿಂದ, ಸಮಕಾಲೀನ ಸಂದರ್ಭಕ್ಕೆ ಸಾಕ್ಷಿಯಾಗಿ ಕನ್ನಡ ಕಾವ್ಯ ಜಗತ್ತಿಗೆ ಒಬ್ಬ ಭರವಸೆಯ ಕಾವ್ಯಶಕ್ತಿಯುಳ್ಳ ಕವಿಯೊಬ್ಬನ ಕೃತಿಯಾಗಿ ಹೊರಹೊಮ್ಮಿವೆ... (ಮುನ್ನುಡಿಯಿಂದ)
– ಪ್ರೊ. ಟಿ. ಯಲ್ಲಪ್ಪ ಕವಿಗಳು ಹಾಗೂ ಕನ್ನಡ ಪ್ರಾಧ್ಯಾಪಕರು
Product Information
Product Information
Shipping & Returns

Original: $1.30
-70%$1.30
$0.39Product Information
Product Information
Shipping & Returns
Shipping & Returns
Description