🎉 Up to 70% Off Selected ItemsShop Sale
HomeStore

ಸಾವಿನ ಮನೆಯ ಕದವ ತಟ್ಟಿ

Product image 1
Product image 2

ಸಾವಿನ ಮನೆಯ ಕದವ ತಟ್ಟಿ

ಸಾವಿನ ಮನೆಯ ಕದವ ತಟ್ಟಿ

ಹಾಸ್ಯಪ್ರಜ್ಞೆಯೇ ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ತಮ್ಮ ಹಾಸ್ಯಪ್ರಜ್ಞೆಯಿಂದಲೇ ಮಾರಕವಾದ ರೋಗವೊಂದರಿಂದ ವ್ಯಕ್ತಿಯೊಬ್ಬರು ವಿಮುಕ್ತರಾಗಿದ್ದಾರೆಂದರೆ ನಂಬಲಾಗುತ್ತಿಲ್ಲ. ಆದರೆ ಇದು ನಿಜ. ಮಲಯಾಳಂ ಚಿತ್ರರಂಗದಲ್ಲಿ ಹಲವಾರು ದಶಕಗಳಿಂದ ಹಾಸ್ಯನಟರಾಗಿ, ಪೋಷಕನಟರಾಗಿ ಸುಮಾರು ಆರುನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಜನಮಾನಸದಲ್ಲಿ ಛಾಪನ್ನು ಒತ್ತಿರುವ ವ್ಯಕ್ತಿ ಇನ್ನಸೆಂಟ್, ತಮ್ಮ ಬದುಕಿನ ಪುಟಗಳತ್ತ ನಮ್ಮ ಗಮನ ಸೆಳೆಯುತ್ತಾರೆ. ಕ್ಯಾನ್ಸರ್ ಎಂಬ ಮಾರಕರೋಗಕ್ಕೆ ತುತ್ತಾಗಿ ಮನಕ್ಷೇಶಕ್ಕೆ ಒಳಗಾದಾಗ, ಅವಲಂಬಿತ ಕುಟುಂಬ ಘಾಸಿಗೊಳಗಾದಾಗ, ನೋವಿನ ನಡುವೆಯೇ ತಮ್ಮೊಳಗಿನ ಅಪೂರ್ವ ಹಾಸ್ಯಪ್ರಜ್ಞೆಯನ್ನು ಜಾಗೃತಗೊಳಿಸಿ ನೋವಿನಲ್ಲೂ ನಲಿವನ್ನು ಕಾಣುತ್ತಾರೆ. ತಮ್ಮ ಸುತ್ತಲ ಪರಿಸರದಲ್ಲಿ, ಆಸ್ಪತ್ರೆಯ ಬೆಡ್ಡಿನ ಮೇಲೆ- ಎಲ್ಲೆಲ್ಲೂ ಹಾಸ್ಯಕ್ಕೆ ವಸ್ತುವೊಂದು ಅವರಿಗೆ ಸಿಗುತ್ತದೆ. ಅದನ್ನವರು ಸ್ವತಃ ಅನುಭವಿಸಿ ತಮ್ಮ ಮೊಗದಲ್ಲಿ ಕಿರುನಗೆ ಚಿಮುಕಿಸಿ ಸುತ್ತಲಿದ್ದವರೂ ಮುಕ್ತವಾಗಿ ನಗುವಂತೆ ಮಾಡಿದ್ದಾರೆ. ಈ ಲಘುಹಾಸ್ಯದ ಮಾಧ್ಯಮದ ಮೂಲಕವೇ ಅವರು ತಮ್ಮ ನೋವನ್ನು ಮರೆತಿದ್ದಾರೆ. ಅಷ್ಟೇ ಅಲ್ಲ, ಅವರ ಹಾಸ್ಯೌಷಧ ಕೆಲಸ ಮಾಡಿದೆ. ಅವರೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. 2014ರಲ್ಲಿ ಚಾಲಕ್ಕುಡಿ ಕ್ಷೇತ್ರದಿಂದ ಲೋಕಸಭೆಯನ್ನೂ ಪ್ರವೇಶಿಸಿರುವ ಇವರು ತಮ್ಮ ಬದುಕಿನ ಕರಾಳದಿನಗಳ ನೆನಪನ್ನು ಸರಳವಾಗಿ ಅಕ್ಷರರೂಪಕ್ಕಿಳಿಸಿ ಓದುಗರ ಮನವನ್ನೂ ಗೆದ್ದಿದ್ದಾರೆ. ಅವರು ಮಲಯಾಳಮ್ ಭಾಷೆಯಲ್ಲಿ ಬರೆದ ಪುಸ್ತಕ ಭಾರತದ ಅನೇಕ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆಯಾಗಿ ಜನಪ್ರಿಯವಾಗಿದೆ. ಇದೀಗ ಕನ್ನಡದಲ್ಲಿ "ಸಾವಿನ ಮನೆಯ ಕದವ ತಟ್ಟಿ" ಎಂಬ ಹೆಸರಿನಲ್ಲಿ ಶ್ರೀಮತಿ ಮಾಯಾ ಬಿ.ನಾಯರ್ ಅವರಿಂದ ಅನುವಾದಿತಗೊಂಡು ಕನ್ನಡ ಓದುಗರಿಗೆ ಲಭ್ಯವಾಗುತ್ತಿದೆ.

ಇದು ಅನುವಾದಿತ ಕೃತಿ ಎಂದೆನಿಸುವುದಿಲ್ಲ. ಸುಲಭವಾಗಿ ಓದಿಗೆ ಒಗ್ಗುವ ಹೃದ್ಯ ಗುಣ ಬರಹದಲ್ಲಿದೆ. ನಡುನಡುವೆ ಬರುವ ಲಘುಹಾಸ್ಯದ ಪ್ರಸಂಗಗಳು ಮೊಗದಲ್ಲಿ ನಗು ತುಳುಕಿಸುವಲ್ಲಿ ಯಶಸ್ವಿಯಾಗಿವೆ. ಸರಕಾರಿ ಉದ್ಯೋಗದಲ್ಲಿರುವ ಶ್ರೀಮತಿ ಮಾಯಾ ಅವರ ಅನನ್ಯ ಸಾಹಿತ್ಯಾಸಕ್ತಿ ಈ ಅನುವಾದಿತ ಕೃತಿ ಹೊರಬರುವುದಕ್ಕೆ ಕಾರಣವಾಗಿದೆ.ಅವರ ಸಾಹಿತ್ಯಕೃಷಿ ಹುಲುಸಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಇಂತಹದೊಂದು ಅಪರೂಪದ ಕೃತಿಯನ್ನು ಕನ್ನಡ ಓದುಗರಿಗೆ ತಲುಪಿಸುವ ಅವಕಾಶ ಲಭ್ಯವಾದುದಕ್ಕೆ ಸಂತೋಷವಾಗುತ್ತಿದೆ.

-ಕೆ.ಬಿ.ಪರಶಿವಪ್ಪ, ಸ್ನೇಹ ಬುಕ್ ಹೌಸ್

$1.41
ಸಾವಿನ ಮನೆಯ ಕದವ ತಟ್ಟಿ
$1.41

Product Information

Shipping & Returns

Description

ಸಾವಿನ ಮನೆಯ ಕದವ ತಟ್ಟಿ | Harivu Books