🎉 Up to 70% Off Selected ItemsShop Sale
HomeStore

ಶೀಲ-ಅಶ್ಲೀಲ

Product image 1
Product image 2

ಶೀಲ-ಅಶ್ಲೀಲ

ಶೀಲ-ಅಶ್ಲೀಲ

ಇಂದು ಓಶೋರ ಸಮಸ್ತ ಬರವಣಿಗೆ, ಫೋಟೋಗಳು, ಆಡಿಯೋ-ವೀಡಿಯೋ ಉಪನ್ಯಾಸಗಳು, ಯಾವುದೇ ಹಕ್ಕು ಸ್ವಾಮ್ಯಗಳಿಲ್ಲದೇ ಮುಕ್ತವಾಗಿ, ಉಚಿತವಾಗಿ (ಭಾರತದ ಮಟ್ಟಿಗೆ) ಲಭ್ಯವಿದೆ. ಹೀಗಿದ್ದೂ ಓಶೋ ಮುಕ್ತಕಾಮವನ್ನು ಅನುಮೋದಿಸುವ ವಿದ್ರೋಹಿಯೆಂಬ, ಶ್ರೀಮಂತ ವರ್ಗದ ಗುರುವೆಂಬ, ಅಗ್ಗದ ಪ್ರಚಾರ ಲಾಭಕ್ಕಾಗಿ ಬೇಡದ ವಿವಾದಗಳನ್ನು ಹುಟ್ಟಿಸುವ ವ್ಯಕ್ತಿಯೆಂಬ ನೆರೆಟಿವ್ಗಳನ್ನು ಸೃಷ್ಟಿಸುವ ವ್ಯರ್ಥ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿರುವುದನ್ನು ನೋಡಿದರೆ ಇಂದಿನ ಆಧುನಿಕ ಯುಗದಲ್ಲೂ ಸಹ ನಾವಿನ್ನೂ ಬಹಳ ಪುರಾತನ ಕಾಲದಲ್ಲಿದ್ದೇವೆ ಎಂಬುದು ವೇದ್ಯವಾಗುತ್ತದೆ. ಅವರು ೧೯೬೮ರಲ್ಲಿ 'ಸಂಭೋಗದಿಂದ ಸಮಾಧಿಯ ವರೆಗೆ' ಎಂಬ ವಿಷಯದ ಮೇಲೆ ನೀಡಿದ ಪ್ರವಚನ ಮಾಲೆಯಿಂದ (ಅಥವಾ ಅದನ್ನು ಅಂದಿನ ಮಾಧ್ಯಮಗಳು ತಿರುಚಿದುದರಿಂದ) ಅವರು ವಿವಾದಾತ್ಮಕ ಗುರುವೆನಿಸಿದರು. ಆದರೆ ಆ ಕೃತಿಯ ಒಳಹೊಕ್ಕು ನೋಡಿದರೆ ಅದರಲ್ಲಿ ವಿವಾದ ವೆಬ್ಬಿಸುವ ಯಾವುದೇ ಅಂಶವಿಲ್ಲವೆಂದು ಸಾಧಾರಣ ಓದುಗರಿಗೂ ತಿಳಿಯುತ್ತದೆ. ಆ ಕೃತಿಯನ್ನು ಬದಿಗಿರಿಸಿ ಆ ಕಾಲಮಾನದ ಅವರ ಬೇರೆ ಇತರೆ ಕೃತಿಗಳನ್ನು ಅವಗಾಹಿಸಿದಾಗ ಅವರ ನಿಜವಾದ ವಿದ್ರೋಹದ ಪರಿಚಯ ನಮಗಾಗುತ್ತದೆ. ಆ ಕಾಲಘಟ್ಟದಲ್ಲಿ ಅತಿಹೆಚ್ಚು ಪ್ರಚಲಿತದಲ್ಲಿದ್ದ ಗಾಂಧೀವಾದ, ಸಮಾಜವಾದಗಳನ್ನು ಟೀಕಿಸುವುದರ ಜೊತೆಗೆ ಅವರು ಒಟ್ಟಾರೆ ನಮ್ಮ ಮೌಲ್ಯ ವ್ಯವಸ್ಥೆಯನ್ನು ಮರುವಿಮರ್ಶೆಗೆ ಒಳಪಡಿಸುತ್ತಾರೆ. 'ಸಮಾಜದ ಸಮಸ್ತ ಕೇಡುಗಳಿಗೂ ನಾವು ಮಾಡಿಕೊಂಡಿರುವ ಕುಟುಂಬ ವ್ಯವಸ್ಥೆಯೇ ಮೂಲಕಾರಣ'ವೆಂಬ ಅವರ ಚಿಂತನೆ ಬೌದ್ಧಿಕವಾಗಿ ಅಹುದೆನಿಸಿದರೂ ಪ್ರಾಯೋಗಿಕವಾಗಿ ಅದನ್ನು ಅನುಷ್ಠಾನಕ್ಕೆ ತರುವ ಪಕ್ವತೆ ಅಥವಾ ದಿಟ್ಟತನ ನಮಗಿನ್ನೂ ಸಿದ್ದಿಸಿಲ್ಲ. ಈ ಕೃತಿಯಲ್ಲಿ ಸದ್ಯದ ಸಮಾಜ ನಂಬಿರುವ 'ಶೀಲ' ಮತ್ತು 'ಅಶ್ಲೀಲ'ದ ಪರಿಕಲ್ಪನೆಯ ಮರುವಿಮರ್ಶೆ ಇದೆ.

$0.49

Original: $1.62

-70%
ಶೀಲ-ಅಶ್ಲೀಲ

$1.62

$0.49

Product Information

Shipping & Returns

Description

ಶೀಲ-ಅಶ್ಲೀಲ | Harivu Books