ಶ್ರೀರಾಮಾಯಣದ ಮಹಾಪ್ರಸಂಗಗಳು
ಭಾರತೀಯ ಪದ್ಧತಿಯ ವ್ಯಾಖ್ಯಾನಪರಂಪರೆಯ ಬಗೆಗೂ ಹೇಳಬೇಕಾದುದಿದೆ.ಗೋವಿಂದರಾಜೀಯ, ಮಹೇಶತೀರ್ಥೀಯ, ತನಿಶ್ಲೋಕೀ, ಧರ್ಮಾಕೂತಂ,ನೀಲಕಂಠೀಯ, ಶ್ರೀಧರೀಯ, ವೀರ ರಾಘವೀಯ ಮೊದಲಾದವು ರಾಮಾಯಣ, ಭಾರತ, ಭಾಗವತಗಳ ಶ್ಲೋಕ, ಸಂದರ್ಭಗಳ ಹಿನ್ನೆಲೆ, ಪ್ರಾಚೀನ ವೈದಿಕ ಪ್ರಮಾಣಗಳು, ಶ್ಲೋಕಾರ್ಥ, ಇಂಗಿತ ಅವುಗಳ ರಸ, ಧ್ವನಿ, ಅಲಂಕಾರಗಳ ಬಗೆಗೆ ಪುಷ್ಕಲ ವಿವರಣೆ ನೀಡುತ್ತಾ ಗ್ರಂಥಗಳ ಪಾತ್ರಗಳು, ಸಂದರ್ಭಗಳನ್ನು ಹೃದ್ಯವಾಗಿ ಅರಿಯಲು ತುಂಬಾ ಉಪಯುಕ್ತವೂ, ಅನನ್ಯಶರಣವೂ ಆಗಿದೆ ಎಂಬುದು ನಿಸ್ಸಂದೇಹ ಸತ್ಯ. ಆದರೂ ಒಂದು ವ್ಯವಸ್ಥಿತ ಕ್ರಮದಲ್ಲಿ ಪಾತ್ರವಿಶ್ಲೇಷಣೆ, ಸಂದರ್ಭ, ನಿರೂಪಣೆ, ಇವುಗಳ ವೈಶಿಷ್ಟ್ಯಗಳ ಪರಾಮರ್ಶೆ ಈ ವ್ಯಾಖ್ಯಾನಗಳಲ್ಲಿ ಇಲ್ಲ. ಪಾಶ್ಚಾತ್ಯರಲ್ಲಿ ವ್ಯಾಖ್ಯಾನ ಪರಂಪರೆಯೇ ಇಲ್ಲ. ಎರಡನ್ನೂ ಉಪಯೋಗಿಸಿ ಹೀಗೇಕೆ ಮೂಲಕೃತಿಗಳಲ್ಲಿನ ವಿಶೇಷಾಂಶಗಳನ್ನು ಗುರುತಿಸಿ ಅನುಭವಿಸಬಾರದು? ಎಂಬ ಪ್ರಶ್ನೆ ವಿದ್ಯಾರ್ಥಿ ದೆಸೆಯಿಂದಲೇ ನನ್ನನ್ನು ಕಾಡಲಾರಂಭಿಸಿತ್ತು! ಷೇಕ್ಸ್ಪಿಯರನ ನಾಟಕಗಳ ಬಗ್ಗೆ. ಬ್ರಾಡ್ಲಿ, ವಿಲ್ಸನ್ ನೈಟ್, ಡೌಡನ್, ವೆರಿಟಿ, ಸೇಂಟ್ಸ್ಬರಿ ಮೊದಲಾದ ೧೯ನೇ ಶತಮಾನದ ಮಹಾಮೇಧಾವಿಗಳು ಬರೆದ ಉದ್ದಂಥಗಳನ್ನು ವಿದ್ಯಾರ್ಥಿಗಳಾದ ನಾವು ಓದಿದರೆ ಅಪರಾಧ ಎಂಬ ಭಾವವನ್ನು ಕೆಲವು ಪ್ರಾಧ್ಯಾಪಕರು ನಮ್ಮಲ್ಲಿ ಮೂಡಿಸಿದ್ದರು! ಅದಕ್ಕೆ ಕಾರಣ ಕೇಂಬ್ರಿಜ್ ಮೂಲದ ಒಂದು ಅತಿರೇಕದ, ಅತಿವಾದದ ವಿಮರ್ಶಾಪದ್ಧತಿ analytical school ಎಂಬುದು. ಈ ತರ್ಕಹೀನ, ವಿಚಾರರಹಿತ ಪದ್ಧತಿಯ ಮನವಿಕೃತಿ ನನ್ನ ಅರಿವಿಗೆ ಬಂದದ್ದು ನಾನೂ ಪ್ರಾಧ್ಯಾಪಕನಾದಮೇಲೆ, ಸ್ವಬುದ್ಧಿಯಿಂದ ಸತ್ಯ ಕಂಡುಕೊಂಡು ಪಾಠ ಹೇಳಲು ಆರಂಭಿಸಿದಮೇಲೆ! ಆಮೇಲೆ ರಾಮಾಯಣ, ಭಾರತ, ಭಾಗವತಾದಿಗಳ ಮೇಲೆ ಪಾತ್ರ ವಿಶ್ಲೇಷಣೆ, ಸಂದರ್ಭ, ಪ್ರಸಂಗಗಳ ವಿವೇಚನೆ ಕುರಿತಂತೆ ನಾನು ಗ್ರಂಥಗಳನ್ನು ಬರೆಯಲಾರಂಭಿಸಿದ್ದು. "ತರಂಗ" ಪತ್ರಿಕೆಯಲ್ಲಿ ಬರೆಯಬೇಕಾದ ನಿರ್ಬಂಧಗಳ ಸ್ವಾಗತಾರ್ಹ ಸಂದರ್ಭ ಒದಗಿಬಂದದ್ದರಿಂದ. ಇದು ಜನಪ್ರಿಯವೂ, ಪಂಡಿತಪಾಮರರಿಗೂ ಹೃದ್ಯವೂ, ಬೋಧ ಪ್ರದವೂ ಆದದ್ದು ನನಗೆ ತೃಪ್ತಿ ತಂದಿದೆ.
-ಲೇಖಕನ ಅರಿಕೆಯಿಂದ
Product Information
Product Information
Shipping & Returns

Description