🎉 Up to 70% Off Selected ItemsShop Sale
HomeStore

ಶ್ರೀ ದುರ್ಗಾಸಪ್ತಶತಿ

Product image 1
Product image 2

ಶ್ರೀ ದುರ್ಗಾಸಪ್ತಶತಿ

ಶ್ರೀ ದುರ್ಗಾಸಪ್ತಶತಿ

ಮೊದಲ ಮಾತು...

ಸೃಷ್ಟಿಗೆ ಮೊದಲು ದೇವಿ ಆತ್ಮ (ಚೈತನ್ಯವು)ರೂಪಿಯಾಗಿರುವಳೆಂದು ಶಾಸ್ತ್ರಗಳು ಹೇಳುತ್ತವೆ. ಅಂತಹ ಆತ್ಮಕ್ಕೆ ಅನಾದಿಯಾದಂತಹ ಸ್ಥಿರವಾದ ಅನಿರ್ವಚನೀಯವಾದ ಶಕ್ತಿ ಇದೆ. ಇದನ್ನೇ ಮಾಯೆ ಎಂದು ವೇದಾಂತವು ಹೇಳುತ್ತದೆ. ಮಾಯೆ ಮತ್ತು ಬ್ರಹ್ಮ ಇಬ್ಬರೂ ಒಂದೇ ಆಗಿದ್ದಾರೆ. ಇವರಿಬ್ಬರನ್ನೂ ಯಾರಿಂದಲೂ ಬೇರೆ ಮಾಡಲು ಸಾಧ್ಯವಿಲ್ಲ. ಸೃಷ್ಠಿಗೆ ಮಾಯೆ *ಉಪಾದಾನ ಕಾರಣವು, ಮಾಯೆಯಲ್ಲಿ ಪ್ರತಿಫಲಿಸಿದ ಬ್ರಹ್ಮನು ನಿಮಿತ್ತ ಕಾರಣನು -ಮಾಯೆಯನ್ನು ತಪ, ತಮ, ಜಡ,ಪ್ರಕೃತಿ,ಶಕ್ತಿ, ವಿಮರ್ಶೆ, ಅವಿದ್ಯಾ ಎಂಬುದಾಗಿ ಅನೇಕ ವಿಧಗಳಿಂದ ಕರೆಯುತ್ತಾರೆ. ಅದೇ ಮಾಯಾಸಹಿತವಾದ ಬ್ರಹ್ಮನು, ಅವ್ಯಾಕೃತನು, ಅವ್ಯಕ್ತನೂ ಎಂದು ಅನೇಕ ವಿಧಗಳಿಂದ ಕರೆಯಲ್ಪಡುವ ಆ ಏಕೈಕ ಶಕ್ತಿಯೇ ಚಂಡಿಕಾ ತತ್ವವಾಗಿದೆ.

ಪುರುಷನು, ಪ್ರಕೃತಿಯಲ್ಲಿ ಅಂಶರೂಪದಿಂದ ಪ್ರವೇಶಿಸಿ, ಜೀವಿ' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದಾನೆ. ಜೀವಿಯು ಪ್ರಕೃತಿವಶನಾಗಿ ಅಹಂಕಾರಗಳಿಂದ ತನ್ನ ಸ್ವಸ್ವರೂಪ ಜ್ಞಾನವನ್ನು ತಿಳಿದುಕೊಳ್ಳದೆ, ತನ್ನ ಉಪಾಧಿಗೆ ಸಂಬಂಧಿಸಿದವುಗಳಲ್ಲಿ ಮೋಹಪರವಶನಾಗುತ್ತಿದ್ದಾನೆ. ಚಿದಾನಂದಗಳಿಂದ ದೂರವಾಗುತ್ತಿದ್ದಾನೆ. ಕರ್ಮವಶದಿಂದ ಜನನ ಮರಣ ಚಕ್ರದ ಸುಳಿಯಲ್ಲಿ ಸಿಕ್ಕಿಕೊಂಡು, ಮತಿಭ್ರಮೆಯಿಂದ ತಿರುಗುತ್ತಿದ್ದಾನೆ. ಇಂತಹ ಕಷ್ಟದಿಂದ ತಪ್ಪಿಸಿಕೊಂಡು ಮತ್ತೆ ಪುನಃ ತನ್ನ ಪೂರ್ವ ನಿತ್ಯಾನಂದ, ನಿರ್ವಿಕಲ್ಪ ಸ್ಥಿತಿಯನ್ನು ಹೊಂದುವುದೇ ಮೋಕ್ಷ ಅಂತಹ ಉತ್ತಮೋತ್ತಮ ಪುರುಷಾರ್ಥವನ್ನು ಸಿದ್ಧಿಸಿಕೊಳ್ಳಲೋಸುಗವಾಗಿಯೇ ಸಾಧಕರಿಗೆ ಕಲ್ಪವೃಕ್ಟೋಪಾದಿಯಲ್ಲಿರುವಂತಹ “ಸಪ್ತಶತಿ' ಗ್ರಂಥವು ಕಲಿಯುಗದಲ್ಲಿಯೂ ಅವತಾರ ತಾಳಿ ಮಾನವರನ್ನು ದೈವತ್ವದ ಕಡೆಗೆ ಎಳೆಯುವಂತಹ ಮಹಾ ಗ್ರಂಥವಾಗಿದೆ. ಇಂತಹ “ದುರ್ಗಾಸಪ್ತಶತೀ'' ಪಾರಾಯಣದಿಂದ ಪ್ರತಿಯೊಬ್ಬರೂ ಐಹಿಕಾಮುಕ್ಷಿಕ ಸುಖಗಳನ್ನು ಹೊಂದಬಹುದು.

ಸಾಧಕನು ಸದ್ಗುರುಗಳಿಂದ ದೀಕ್ಷೆಯನ್ನು ಸ್ವೀಕರಿಸಿ, ಸಾಧಕನು ಮಂತ್ರ ಜಪ ಪೂಜಾದಿಗಳಿಂದ ಸಪ್ತಶತಿಯನ್ನು ಏಕಾಗ್ರತೆಯಿಂದ, ಭಕ್ತಿ, ಶ್ರದ್ವಾ, ವಿಶ್ವಾಸಗಳಿಂದಲೂ, ಶ್ರೀಮಾತೆಯ ಅನುಗ್ರಹವನ್ನು ಯಾಚಿಸುತ್ತಾ ಸತ್ಯ, ಧರ್ಮ, ನ್ಯಾಯ ನಿಷ್ಠನಾಗಿ ಪಾರಾಯಣವನ್ನು ಮಾಡಿದರೆ ಕ್ಷೇಮವೂ, ಜ್ಞಾನ, ಐಶ್ವರ್ಯ, ವಿದ್ಯಾ, ಭೂರಾಜಸನ್ಮಾನ - ಸದ್ಗುರುಗಳ ಕಟಾಕ್ಷವೂ ಲಭಿಸುವುದರಲ್ಲಿ ಸಂದೇಹವಿಲ್ಲ. ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಮತ್ತು ಚಂಡಿಕಾ ಹೋಮ ಮಾಡುವ ಎಲ್ಲ ಸಾಧಕರಿಗೂ ದೇವಿಯ ಅನುಗ್ರಹವುಂಟಾಗಿ ದೇಶವು ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸುತ್ತಾ ಈ ಕಿರುಹೊತ್ತಿಗೆಯನ್ನು ಸಾಧಕರ ಉಪಯೋಗಕ್ಕೆ ಸಮರ್ಪಿಸುತ್ತಿದ್ದೇನೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಪ್ರಕಾಶನಗೊಳಿಸಿದ ಪ್ರಕಾಶಕರಿಗೆ ನನ್ನ ಅಭಿನಂದನೆಗಳು.

|| ಓಂ ನಮಃಶ್ಚಂಡಿಕಾಯ್ಕೆ |

$2.16
ಶ್ರೀ ದುರ್ಗಾಸಪ್ತಶತಿ
$2.16

Product Information

Shipping & Returns

Description

ಶ್ರೀ ದುರ್ಗಾಸಪ್ತಶತಿ | Harivu Books