ಶ್ರೀ ರೇಣುಕಾ ಪರಶುರಾಮ ತಂತ್ರಮ್
ದಶಮಹಾವಿದ್ಯೆಗಳಲ್ಲಿ ಒಂದಾದ ಛಿನ್ನಮಸ್ತಾಳ ಮತ್ತೊಂದು ಸ್ವರೂಪವೇ ಭಗವತಿ ಶ್ರೀ ರೇಣುಕೆಯು, ದಕ್ಷಿಣ ಭಾರತದಲ್ಲಿ "ರೇಣುಕಾಂಬಾಲ ಅಮ್ಮನ್'', ''ರೇಣುಕಾ ಪರಮೇಶ್ವರಿ' ಎಂದು ಕರೆಯಲ್ಪಡುವ ದೇವಿಯನ್ನು, ಉತ್ತರ ಭಾರತದಲ್ಲಿ ಶಬರಿ, ಏಕವೀರಾ ಎಂದು ಕರೆಯುತ್ತಾರೆ. ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲಿ ಏಲಾಂಬಾ (ಎಲ್ಲಮ್ಮ), ರೇಣುಕಾ, ಮಾತಂಗಿ ಎಂಬ ಹೆಸರುಗಳು ಹೆಚ್ಚು ರೂಢಿಯಲ್ಲಿರುತ್ತವೆ.
ಭಗವಾನ್ ಪರಶುರಾಮನ ತಾಯಿ ಮತ್ತು ಜಮದಗ್ನಿ ಮಹರ್ಷಿಯ ಪತ್ನಿಯೂ ಆದ ಮಹಾನ್ ಪತಿವ್ರತೆ ರೇಣುಕೆ ಪ್ರತಿನಿತ್ಯ ನದಿ ತೀರಕ್ಕೆ ಹೋಗಿ ಸ್ನಾನ ಮಾಡಿ, ಮರಳಿನಿಂದ ತಯಾರಿಸಿದ ಕೊಡದಲ್ಲಿ ನೀರು ತುಂಬಿಕೊಂಡು, ಪತಿ ಜಮದಗ್ನಿಯ ಪೂಜೆ-ಅನುಷ್ಠಾನಕ್ಕೆ ತಂದು ಕೊಡುತ್ತಿದ್ದಳು. ಒಂದು ದಿನ ಅವಳು ನದಿಗೆ ಹೋದಾಗ ಗಂಧರ್ವನೊರ್ವನು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ನೋಡಿದ ರೇಣುಕೆಗೆ ಅಂದು ಮರಳಿನಿಂದ ಕೊಡ ತಯಾರಿಸಲಾಗಲಿಲ್ಲ. ಪೂಜೆಗೆ ನೀರು ತರದೆ ಬಂದ ರೇಣುಕೆಯನ್ನು ನೋಡಿ ಮಹರ್ಷಿಯು ಕೋಪದಿಂದ ಅವಳ ಶೀಲವನ್ನು ಶಂಕಿಸಿದನು. ತಂದೆಯ ಆಣತಿಯ ಮೇರೆಗೆ, ರೇಣುಕೆಯ ಪುತ್ರ ಪರಶುರಾಮನು ತನ್ನ ತಾಯಿಯ ಶಿರವನ್ನು ಛೇದಿಸಿದನು. ಆಗ ರೇಣುಕಳ ಮುಂಡದಿಂದ ಹೊರಹೊಮ್ಮಿದ ಸತಿತ್ವದ, ಪಾತಿವ್ರತ್ಯದ ಪ್ರಕಾಶವು ದೃಷ್ಟಿಗೋಚರವಾಯಿತು. ಆ ತೇಜೋರೂಪವೇ ಶ್ರೀ ರೇಣುಕೆಯಾದಳು ಎಂದು ಹೇಳಲಾಗುತ್ತದೆ.
ಶ್ರೀ ರೇಣುಕಾ ದೇವಿಯ ಮೂಲ ಸ್ಥಾನವು ಮಹಾರಾಷ್ಟ್ರದ ಮಾಹುರಗಳ ಎಂಬಲ್ಲಿದೆ ಎಂದು ಹೇಳಲಾಗುತ್ತದೆ. ಶ್ರೀಮದೇವಿ ಭಾಗವತದಲ್ಲಿ ಇದೊಂದು ಶಕ್ತಿಪೀಠವೆಂದು ಉಲ್ಲೇಖಿಸಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ನಗರದ ಹತ್ತಿರವಿರುವ “ಎಲ್ಲಮ್ಮನ ಗುಡ್ಡ' ಎಂದು ಕರೆಯಲ್ಪಡುವ ಪರ್ವತ ಪ್ರದೇಶದಲ್ಲಿ ದೇವಿಯು ನೆಲೆಸಿರುವಳು. ಶಿವಮೊಗ್ಗಾ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ರೇಣುಕಾಂಬೆಯ ದೇವಸ್ಥಾನವಿರುತ್ತದೆ. ಗದಗದ ಹತ್ತಿರ ಬಿದರಳ್ಳಿ, ಅಥಣಿ ತಾಲೂಕಿನ ಕೊಕಟನೂರುಗಳಲ್ಲಿಯೂ ರೇಣುಕಾ ದೇವಿಯ ದೇವಸ್ಥಸಾನಗಳಿದ್ದು, ಜಾಗೃತ ಕ್ಷೇತ್ರಗಳು ಎಂದು ಪ್ರತೀತಿ ಹೊಂದಿರುತ್ತವೆ. ತಮಿಳುನಾಡಿನಲ್ಲಿ ತಿರುವಣ್ಣಾಮಲೈ ಜಿಲ್ಲೆಯ ಪಡೆವೀಡು ಎಂಬಲ್ಲಿ 'ರೇಣುಕಾಂಬಾಲ್ ಅಮ್ಮನ್' ಎಂಬ ಹೆಸರಿನಿಂದ, ನಾಗಪಟ್ಟಣಂ ಜಿಲ್ಲೆಯ ತಿರುಚಿಮಲ್ಲಿಯಲ್ಲಿ ದೇವಿಯು ರೇಣುಕಾ ಪರಮೇಶ್ವರಿ ಎಂಬ ಹೆಸರಿನಿಂದ ನೆಲೆಸಿರುವಳು. ಉತ್ತರ ಭಾರತದಲ್ಲಿ ಉತ್ತರಾಂಚಲ ರಾಜ್ಯದ ಉತ್ತರಕಾಶಿಯ ಹತ್ತಿರವಿರುವ ದೇವದೋಬ್ರಿ, ಬಚನಗಾಂವ್, ಸರ್ನೌಲ್ ಎಂಬ ಗ್ರಾಮಗಳಲ್ಲಿ ರೇಣುಕಾದೇವಿ ಮತ್ತು ಜಮದಗ್ನಿ ಮಹರ್ಷಿಗಳ ಆರಾಧನೆ ನಡೆಯುತ್ತದೆ. ಉತ್ತರ ಭಾರತದ ಕೆಲವು ಬ್ರಾಹ್ಮಣ ಪಂಗಡಗಳು ಪರಶುರಾಮನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯ ಹತ್ತಿರ ಪರಶುರಾಮನ ದೇವಸ್ಥಾನವಿದ್ದು, ಅದರ ಸುತ್ತಲಿನ ಪ್ರದೇಶವನ್ನು ಪರಶುರಾಮ ಕ್ಷೇತ್ರವೆಂದು ಕರೆಯಲಾಗುತ್ತದೆ.
ಮಹಾದೇವಿಯ ಅಸಂಖ್ಯಾತ ಭಕ್ತರು, ಆರಾಧಕರ ಆಗ್ರಹದ ಮೇರೆಗೆ ದೇವಿಯ ಮಂತ್ರ, ಯಂತ್ರ, ಸ್ತೋತ್ರ, ಕವಚ, ಅಷ್ಟೋತ್ತರ, ಶತನಾಮ, ಸಹಾಸ್ರನಾಮ ಸ್ತೋತ್ರ, ನಾಮಾವಳಿಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಸಾಧಕರು ಪ್ರತಿನಿತ್ಯ, ಮಂಗಳವಾರ ಅಥವಾ ಶುಕ್ರವಾರ ಅಥವಾ ಹುಣ್ಣಿಮೆಯ ದಿನಗಳಲ್ಲಿ ದೇವಿಯ ಸ್ತೋತ್ರ / ನಾಮಾವಳಿ ಪಾಠ ಮಾಡುವುದರಿಂದ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಅಲ್ಲದೆ, ಆಷಾಢ, ಕಾರ್ತಿಕ ಮಾಸಗಳಲ್ಲಿ ದೇವಿಯ ದರ್ಶನ, ಆರಾಧನೆ ಮಾಡುವುದರಿಂದ ವಿಶೇಷ ಫಲಗಳಿರುತ್ತವೆ.
Product Information
Product Information
Shipping & Returns

Original: $2.38
-70%$2.38
$0.71Product Information
Product Information
Shipping & Returns
Shipping & Returns
Description