🎉 Up to 70% Off Selected ItemsShop Sale
HomeStore

ಶ್ರೀ ಸ್ವಾಮಿ ಅಯ್ಯಪ್ಪ ಸಹಸ್ರನಾಮ

Product image 1
Product image 2

ಶ್ರೀ ಸ್ವಾಮಿ ಅಯ್ಯಪ್ಪ ಸಹಸ್ರನಾಮ

ಶ್ರೀ ಸ್ವಾಮಿ ಅಯ್ಯಪ್ಪ ಸಹಸ್ರನಾಮ

॥ ಸ್ವಾಮಿಯೇ ಶರಣಂ ಅಯ್ಯಪ್ಪ ॥

ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಕರುಣಿಸುವ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ಭಗವಾನ್ ಅಯ್ಯಪ್ಪ ಸ್ವಾಮಿಯು ಮಹಿಮೆ ಅನಂತ-ಅಪಾರ. ಮೋಹಿನಿ ಸ್ವರೂಪದಲ್ಲಿ ವಿಷ್ಣುವಿಗೆ ಮತ್ತು ಪರಮೇಶ್ವರನಿಗೆ ಮಗನಾಗಿ ಹರಿಹರಪುತ್ರನೆಂಬ ಹೆಸರಿನಿಂದ ಭೂಮಿಗೆ ಬಂದ ಭಗವಂತನನ್ನು ಸ್ತೋತ್ರ, ನಾಮಾರ್ಚನೆ ಮೂಲಕ ಸ್ತುತಿಸಿ-ಅರ್ಚಿಸಿ ಕೊಂಡಾಡುವುದು ಆಯ್ಯಪ್ಪ ಸ್ವಾಮಿ ಭಕ್ತರೆಲ್ಲರ ನಿತ್ಯನೂತನ ದಿನಚರಿ.

ಕೇರಳದ ಪಂದಳ ರಾಜನ ಸಾಕುಮಗನಾಗಿ ಪವಡಿಸಿದ ಮಣಿಕಂಠನು. ದೈವಸಂಕಲ್ಪದಂತೆ ಶಬರಿಗಿರಿಯ ದಟ್ಟಾರಣ್ಯದ ಮಧ್ಯೆ ತನಗೊಂದು ಮಂದಿರವನ್ನು ಕಟ್ಟಿಸಿಕೊಂಡು, ಯೋಗಮುದ್ರೆಯಲ್ಲಿ ಬಾಲಕನ ರೂಪದಲ್ಲಿ ಅಲ್ಲೇ ನೆಲೆನಿಂತು ತನ್ನರಸಿ ಬರುವ ಸಕಲ ಭಕ್ತಜನರ ಮನೋವಾಂಛಿತ ಫಲಗಳನ್ನು ಈಡೇರಿಸುತ್ತಾ ಕರುಣಾಮೂರ್ತಿಯಾಗಿದ್ದಾನೆ.

ಪ್ರಸ್ತುತ ಸ್ವಾಮಿಯ 108-1000 ದಿವ್ಯ ನಾಮಗಳು, ಸ್ತೋತ್ರ, ಕವಚ, ನಮಸ್ಕಾರ ಶ್ಲೋಕಾದಿ ಸ್ತೋತ್ರಗಳನ್ನು ಸಂಗ್ರಹಿಸಿ ನೀಡಲಾಗುತ್ತಿದ್ದು, ಅಯ್ಯಪ್ಪ ಸ್ವಾಮಿಯ ಭಕ್ತರೆಲ್ಲರು ಈ ಪುಣ್ಯ ನಾಮಸ್ಮರಣೆಯನ್ನು ಸ್ಮರಿಸಿ, ಚಿನ್ಮಯಮೂರ್ತಿ ಮಣಿಕಂಠನನ್ನು ಮನದಲ್ಲಿ ಅನುಕರಣೆಗೊಳಿಸಿಕೊಂಡು ಸ್ವಾಮಿಯ ದಿವ್ಯ ಪವಾಡಗಳ ಆಂತರಿಕ ದರ್ಶನವನ್ನು ಪಡೆಯಲೆಂಬುದೇ ನಮ್ಮ ಮಹದಾಸೆ.

ಅನವರತ ಕಾಯುವ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ಸ್ವಾಮಿ ಅಯ್ಯಪ್ಪನು ಎಲ್ಲರಿಗೂ ಧರ್ಮಮಾರ್ಗದಲ್ಲಿ ನಡೆಯುವ ಸನ್ಮತಿಯನ್ನು ಕರುಣಿಸಲಿ. ನಮ್ಮ ನಾಲಗೆಯು ಎಂದೆಂದೂ ಅವನ ನಾಮಾಮೃತವನ್ನು ನುಡಿಯುತ್ತಿರಲಿ. ನಮ್ಮ ಕಿವಿಗಳಲ್ಲಿ ಸ್ವಾಮಿಯ ದಿವ್ಯ ಕೀರ್ತಿ ಉಲಿಯುತ್ತಿರಲಿ. ಕಣ್ಣುಂಬ ಧರ್ಮಶಾಸ್ತನ ಮುದ್ದುಮುದ್ದಾದ ಮಂಗಳಕರ ಸ್ವರೂಪ ತುಂಬಿಕೊಂಡಿರಲಿ.

$0.16

Original: $0.54

-70%
ಶ್ರೀ ಸ್ವಾಮಿ ಅಯ್ಯಪ್ಪ ಸಹಸ್ರನಾಮ

$0.54

$0.16

Product Information

Shipping & Returns

Description

ಶ್ರೀ ಸ್ವಾಮಿ ಅಯ್ಯಪ್ಪ ಸಹಸ್ರನಾಮ | Harivu Books