🎉 Up to 70% Off Selected ItemsShop Sale
HomeStore

ಉದಯ ರಶ್ಮಿ

Product image 1
Product image 2

ಉದಯ ರಶ್ಮಿ

ಉದಯ ರಶ್ಮಿ

ಸ.ನಾ.ಮೂರ್ತಿ, ಬಾಲ್ಯಸ್ನೇಹಿತ, ನನ್ನ ಆತ್ಮೀಯ ಮಿತ್ರ, ಕಾಲೇಜು ವ್ಯಾಸಂಗದಲ್ಲಿ ಒಡನಾಡಿಗಳು, ಒಂದೇ ಕೋಣೆಯಲ್ಲಿ ವಾಸವಿದ್ದು ಆತ್ಮೀಯತೆ ಹಂಚಿಕೊಂಡವರು. ಅವರ ತಂದೆ ಷಾಪೂರು ಸುಬ್ರಹ್ಮಣ್ಯಶಾಸ್ತ್ರಿಗಳು ಪಾಂಡಿತ್ಯಪೂರ್ಣ ಪುರೋಹಿತರು, ಗ್ರಾಮೀಣ ಜನರ ಹಿತ ಬಯಸಿದವರು. ನಾನು ಹೊನ್ನುಡಿ ಸಂಪಾದಕನಾಗಿದ್ದಾಗ ಮೂರ್ತಿ ಪತ್ರಿಕೆಯ ಅಂಕಣಕಾರರಾಗಿದ್ದರು. ಆಗ ಅವರು ಉಪನ್ಯಾಸಕರು. ಜೀವನದ ಸತ್ಯಗಳನ್ನು ತೆರೆದಿಡುವ ವಿಚಾರಪೂರ್ಣ ಬರೆಹಗಳನ್ನು 1980ರಲ್ಲಿಯೇ, ಅವರು ವಕೀಲರಾಗುವ ಮುನ್ನವೇ ಬರೆಯುವ ಅಭ್ಯಾಸ ಮಾಡಿಕೊಂಡಿದ್ದರು. ಆಗಲೇ ಅವರು ತಮ್ಮ ಸಾಹಿತ್ಯವನ್ನು ಸೇರಿಸಿ ಪುಸ್ತಕ ಪ್ರಕಟಣೆ ಆರಂಭಿಸಿದ್ದರೆ, ಇಂದು ನೂರು ಪುಸ್ತಕಗಳಿಗೂ ಹೆಚ್ಚು ಪ್ರಕಟಗೊಳ್ಳುತ್ತಿದ್ದವೇನೋ? ವಕೀಲಿ ವೃತ್ತಿಯ ಕಾರಣ ಕಾಲಾವಕಾಶದ ಕೊರತೆಯಿಂದ ಬರೆಯುವ ಅಭ್ಯಾಸಕ್ಕೆ ವಿರಾಮ ನೀಡಿರಬಹುದು. ಆದರೂ ಅವರನ್ನು ಕಾಡುತ್ತಲೇ ಇದ್ದ ಪ್ರವೃತ್ತಿ ಇದೀಗ ಚೇತೋಹಾರಿಯಾಗಿದೆ. ಈಗಾಗಲೇ ಒಂದು ಕೃತಿ ಹೊರ ಬಂದಿದೆ. ಎರಡನೆಯದು ಇದೀಗ ನಿಮ್ಮ ಕೈಲಿದೆ. ಮನಸು ನಿಯಂತ್ರಣವಿಲ್ಲದ ಹುಚ್ಚುಕುದುರೆ. ನಮ್ಮನ್ನು ಹಾದಿ ತಪ್ಪಿಸಲು ಮನಸ್ಸು ಯಾವಾಗಲೂ ಹೊಂಚು ಹಾಕುತ್ತಿರುತ್ತದೆ. ಹುಚ್ಚು ಕುದುರೆಯನ್ನು ನಿಯಂತ್ರಿಸುವ ಲಗಾಮು ಬೇಕಲ್ಲವೆ? ಅದು ನಮ್ಮ ಬಳಿಯೇ ಇರಬಹದು. ಅದನ್ನು ತೋರುವವರು ಯಾರು? ಅದನ್ನು ಅನ್ವೇಷಿಸಿ ಎಲ್ಲಿ ಹೋಗುವುದು. ಅಂತಹ ಪರಿಣಾಮಕಾರೀ, ಶಕ್ತಿಯುತ ಲಗಾಮೇ ಸ.ನಾ. ಮೂರ್ತಿ ಅವರ ಬರೆಹಗಳು. ಮನಸ್ಸು ಮುದುಡಿದಾಗ ಮುದಗೊಳಿಸುವ ಜಾದು ಚಿಪ್ಪಿನೊಳಗೆ ಮುತ್ತುಗಳಂತೆ ಹುದುಗಿವೆ. ಈ ಮುತ್ತುಗಳನ್ನು ಮನನ ಮಾಡಿ ಮಾಲೆ ಮಾಡಿಕೊಂಡು ಮನದ ಗುಡಿಯಲ್ಲಿ ಧರಿಸಿದರೆ ಅವರ ಅಂತರಂಗದ ಮಾತುಗಳು ಸನ್ಮಾರ್ಗಕ್ಕೆ ಕೊಂಡೊಯ್ಯಬಲ್ಲದು.

ಅ.ನಾ.ಪ್ರಹ್ಲಾದರಾವ್

ಸಾಹಿತಿ, ಪದಬಂಧಕಾರರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಬೆಂಗಳೂರು

$2.70
ಉದಯ ರಶ್ಮಿ
$2.70

Product Information

Shipping & Returns

Description

ಉದಯ ರಶ್ಮಿ | Harivu Books