🎉 Up to 70% Off Selected ItemsShop Sale
HomeStore

ವಚನಹೃದಯ - ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ (ಸಂಪುಟ - ೧)

Product image 1
Product image 2

ವಚನಹೃದಯ - ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ (ಸಂಪುಟ - ೧)

ವಚನಹೃದಯ - ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ (ಸಂಪುಟ - ೧)

ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳ ೧೪ನೆಯ ಸಾಹಿತ್ಯ ಕೃತಿ— 'ವಚನಹೃದಯ: ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ'. ವಚನ ಸಾಹಿತ್ಯವು ಇಂದಿಗೂ ಅನೇಕ ವಿದ್ವಾಂಸರ, ಸಂಶೋಧಕರ ಚರ್ಚೆಗೆ ಹಾಗೂ ಜಿಜ್ಞಾಸೆಗೆ ಮೂಲದ್ರವ್ಯವಾಗಿದೆ. ವಿಭಿನ್ನ ನೆಲೆಗಳಿಂದ ವಚನಗಳ ಅಧ್ಯಯನಗಳು ನಡೆದಿದ್ದರೂ, ವಚನಾಂಕಿತಗಳ ಬಗ್ಗೆ ಇಂತಹ ಆಳವಾದ ಅಧ್ಯಯನ ನಡೆದಿರಲಿಲ್ಲ. ವಿಶ್ವ ಸಾಹಿತ್ಯದ ಹಿನ್ನೆಲೆಯಲ್ಲಿ ನೋಡಿದಾಗ, ಅಂಕಿತನಾಮಗಳನ್ನು ಇಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ ಮೊದಲಿಗರೆಂಬ ಶ್ರೇಯಸ್ಸು ಶರಣರಿಗೇ ಸಲ್ಲುತ್ತದೆ.

ಅಧ್ಯಾತ್ಮ ಸಾಧಕರೂ, ನಿಸರ್ಗ ಚಿಕಿತ್ಸಾತಜ್ಞರೂ ಆಗಿರುವ ಸ್ವಾಮಿಗಳು ವಚನಾಂಕಿತಗಳನ್ನು ಕುರಿತು ಸುದೀರ್ಘವಾದ ಚಿಂತನ-ಮಂಥನ ನಡೆಸಿದ್ದಾರೆ. 'ವಚನಹೃದಯ' ಎಂಬ ಹೊಳಹಿನಿಂದ ಶೋಧನೆ ಆರಂಭಿಸಿ, ತಮ್ಮ ತಲಸ್ಪರ್ಶಿ ಅಧ್ಯಯನ ಮತ್ತು ಸೂಕ್ಷ್ಮ ಗ್ರಹಿಕೆಯ ಮೂಲಕ ನಿಶ್ಚಿತ ನಿರ್ಣಯಗಳಿಗೆ ಅವರು ತಲುಪಿದ್ದಾರೆ. ಇವು ಕೇವಲ ಸ್ಥಾವರಲಿಂಗ ಮೂಲದವಲ್ಲ, ಬದಲಿಗೆ ಜಂಗಮ ಭಾವದ ಸ್ವೋಪಜ್ಞ ಕುರುಹುಗಳು ಎಂಬುದನ್ನು ಅವರು ಎತ್ತಿಹಿಡಿದಿದ್ದಾರೆ.

ಅದಕ್ಕೆ ಪೀಠಿಕೆಯಾಗಿ ವೀರಶೈವ-ಲಿಂಗಾಯತ ಅಧ್ಯಯನಗಳಲ್ಲಿ ಒಡಮೂಡಿದ ಕೆಲವು ಒಪ್ಪಿತ ಪರಿಕಲ್ಪನೆಗಳು ಹಾಗೂ ಹಿಂದಣ ಕಾವ್ಯ-ಪುರಾಣಗಳ ಕಲ್ಪಿತಗಳು ಮಿಥ್ಯ ಎಂಬುದನ್ನು ಅವರು ಆಧಾರಸಹಿತ ನಿರೂಪಿಸುತ್ತಾರೆ. ಆದ್ಯರು, ವೇದ್ಯರು, ಪುರಾತನರು ಮತ್ತು ಪ್ರಮಥರು ಎಂಬ ಪದಗಳಿಗೆ ನಿಖರವಾದ ಅರ್ಥ ನೀಡುವ ಪ್ರಯತ್ನ ಇಲ್ಲಿದೆ. ಕನ್ನಡದ ಹೆಸರಾಂತ ಸಂಶೋಧಕರ ನಿರ್ಣಯಗಳನ್ನು ಒರೆಗೆ ಹಚ್ಚಿ, ಅವರ ತೀರ್ಮಾನಗಳಲ್ಲಿನ ದುಡುಕನ್ನು ನಿರ್ಭಿಡೆಯಿಂದ ವಿಶ್ಲೇಷಿಸಿ ಹೊಸ ಅರ್ಥವನ್ನು ಕಟ್ಟಿಕೊಡುತ್ತಾರೆ. ಪೂಜ್ಯರ ಚಿಕಿತ್ಸಕ ದೃಷ್ಟಿ ಕೃತಿಯುದ್ದಕ್ಕೂ ಪ್ರಜ್ಞಾ ಸ್ತರದಲ್ಲಿ ಪ್ರವಹಿಸುತ್ತದೆ. ಶರಣರ ಜೀವನ ಚರಿತ್ರೆ ಹಾಗೂ ಶರಣತತ್ತ್ವಗಳನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶವನ್ನು ಇದು ನೀಡುತ್ತದೆ. ಇಲ್ಲಿ ಶರಣರ ಹೃದಯಧ್ವನಿ ಕೇಳಿಸುತ್ತದೆ; ಮುಂದಿನ ಹಲವು ವಚನಾಧ್ಯಯನಗಳಿಗೆ ಇದು ಮಾರ್ಗದರ್ಶಿಯಾಗಿದೆ.

ಮಹತ್ವದ ಒಳನೋಟ ಮತ್ತು ಹೊಸ ಅರಿವು ನೀಡುವ ಈ 'ವಚನಹೃದಯ'ವು ಪಂಡಿತರಿಗೂ ಪಾಮರರಿಗೂ ಏಕಕಾಲಕ್ಕೆ ಹೃದ್ಗತವಾಗಬಲ್ಲ ಭಾಷೆ, ವಿಶ್ಲೇಷಣೆ ಹಾಗೂ ನಿರೂಪಣೆಗಳನ್ನು ಹೊಂದಿದೆ. ಬಾಹ್ಯದೃಷ್ಟಿ ವಿದೂರರಾಗಿದ್ದರೂ ತಮ್ಮ ಅಂತರ್ ದೃಷ್ಟಿಯಿಂದಲೇ ಹೇಳಿ ಬರೆಸಿದ ಈ ಕೃತಿ, ವಚನಾಭ್ಯಾಸಿಗಳಿಗೆ 'ಬಗೆಗಣ್ಣು' ನೀಡಿದರೆ ಲೇಖಕರ ನಿತಾಂತ ಶ್ರಮ ಸಾರ್ಥಕವಾಗುತ್ತದೆ. ಇಂಥ ಅಪರೂಪದ ಕೃತಿ ರಚಿಸಿದ ಶ್ರೀ ಬಸವಾನಂದ ಸ್ವಾಮಿಗಳು ಅಭಿನಂದನಾರ್ಹರು. ಇದು ಮೊದಲ ಸಂಪುಟವಾಗಿದ್ದು, ಮುಂದಿನ ಸಂಪುಟಗಳಿಗಾಗಿ ಕನ್ನಡ ವಿದ್ವತ್ ಲೋಕ ಕಾಯುವಂತಾಗಿದೆ.

— ಡಾ. ಹೇಮಾ ಪಟ್ಟಣಶೆಟ್ಟಿ

$2.11

Original: $7.03

-70%
ವಚನಹೃದಯ - ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ (ಸಂಪುಟ - ೧)

$7.03

$2.11

Product Information

Shipping & Returns

Description

ವಚನಹೃದಯ - ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ (ಸಂಪುಟ - ೧) | Harivu Books