🎉 Up to 70% Off Selected ItemsShop Sale
HomeStore

ವೃದ್ಧರ ಮನಸ್ಸು ಹೀಗೇಕೆ?

Product image 1

ವೃದ್ಧರ ಮನಸ್ಸು ಹೀಗೇಕೆ?

ವೃದ್ಧರ ಮನಸ್ಸು ಹೀಗೇಕೆ?

ವೃದ್ಧರ ಮನಸ್ಸು ಹೀಗೇಕೆ?

ಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ಗೌರವ, ಪ್ರೀತ್ಯಾದರಗಳು ಇಂದು ಎಲ್ಲೋ ಕಳೆದುಹೋಗುತ್ತಿವೆ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬ ಭಾವನೆ ಬರುವಂತೆ ನಾವು ವರ್ತಿಸುವುದು ನಮಗೆ ಶೋಭೆಯಲ್ಲ. ವೃದ್ಧಾಪ್ಯದಲ್ಲಿನ ಮಾನಸಿ ಸ್ಥಿತಿ, ಕುಗ್ಗಿಹೋದ ಆತ್ಮವಿಶ್ವಾಸ, ಕೀಳರಿಮೆ ಅವರನ್ನು ಇನ್ನಷ್ಟು ಹಿಂಡಿ ಮನಸ್ಸನ್ನು ಘಾಸಿ ಗೊಳಿಸುತ್ತವೆ. ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳು ಇಲ್ಲಿವೆ. ಅವರ ಸ್ಥಾನ ವೃದ್ಧಾಶ್ರಮಗಳಲ್ಲಿ ಅಲ್ಲ; ಅವರು ಕುಟುಂಬದ ಹಿರಿಯರು, ಇದೇ ಮನೆಗಾಗಿ ದುಡಿದವರು, ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಇಂಥ ಪುಸ್ತಕವನ್ನು ನೀವು ಓದಲೇಬೇಕು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ.

ಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಿದವರು ಡಾ|| ಸಿ. ಆರ್. ಚಂದ್ರಶೇಖರ್, ಇವರು ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.
$1.03
ವೃದ್ಧರ ಮನಸ್ಸು ಹೀಗೇಕೆ?
$1.03

Product Information

Shipping & Returns

Description

ವೃದ್ಧರ ಮನಸ್ಸು ಹೀಗೇಕೆ? | Harivu Books