ಗುಣ
'ಒಂದು ಮಾತು ಕೇಳ್ತೀನಿ. ನೀನು ಭಾರತೀನ ಎಂದಾದರೂ ಪ್ರೀತಿಸಿದ್ದೆಯಾ?' ಕೀರ್ತಿ ಕೇಳಿದ. ಗೌತಮ ಸುಮ್ಮನೆ ಕೀರ್ತಿಯನ್ನು ನೋಡಿ ನಕ್ಕ.
'ಓಕೆ, ಬಿಡಿಸಿ ಕೇಳ್ತಿನಿ. ಇಷ್ಟು ದಿನ ಭಾರತೀನ, ಕ್ಷಮಾನ ಬಿಟ್ಟಿದೀಯಲ್ಲ. ಒಂದು ದಿನವಾದರೂ ನಿನಗೆ ಅವರಿಬ್ಬರ ಜತೆ ಹೋಗಿ ಇರಬೇಕು ಅನ್ನಿಸುತ್ತಾ?'
'ಪ್ರತಿದಿನವೂ' ಎಂದ ಗೌತಮ.
'ನೋಡು, ಈ ಕಂಪ್ಯಾನಿಯನ್ಶಿಪ್ಪು ಅನ್ನೋದು ಒಂದು ರೀತಿ ಚಟ ಇದ್ದ ಹಾಗೆ. ಬಹಳ ದಿನ ಯಾರದಾದರೂ ಜತೆ ಇದ್ದರೆ ಈ ಸಹಬಾಳ್ವೆಯಿಂದಲೇ ಇವರನ್ನು ಬಿಟ್ಟಿರೋಕಾಗೊಲ್ಲ ಅನ್ನಿಸಿರುತ್ತೆ. ಅದನ್ನು ಪ್ರೀತಿಗೆ ಕನ್ಪ್ಯೂಸ್ ಮಾಡ್ಕೊಬೇಡ. ನಾನು ಬಹಳ ಅನುಭವಿಸಿದ್ದೀನಿ' ಎಂದ ಕೀರ್ತಿ.
'ಐ ಹೇಟ್ ಯು ಗೌತಮ. ನಿನ್ನ ಪ್ರಕಾರ ಇದು ಯಾವ ದೊಡ್ಡ ವಿಷಯವೂ ಅಲ್ಲ. ಮುಂದಿನ ವರ್ಷ, ಕ್ಷಮಾ ಕಾಲೇಜಿಗೆ ಹೊರಡ್ತಾಳೆ. ಅವಳ ಕಂಪ್ಯೂಟರನ್ನು ಕದ್ದು ಸರ್ವೆ ಮಾಡಬೇಕಾಗಿರೋ ನಾನು, ಅವಳ ಮೊಬೈಲಿನ ಕಾಲ್ಗಳನ್ನು, ಫೇಸ್ಬುಕ್ಕಿನ ಪೋಸ್ಟ್ಗಳನ್ನು ಲೆಕ್ಕ ಇಡಬೇಕಾದ ನಾನು ಇದ್ದಕ್ಕಿದ್ದಂತೆ ಆ ನೈತಿಕ ಹಕ್ಕನ್ನು ಕಳಕೊಂಡಂತೆ ಅನಿಸಿತು. ಕ್ಷಮಾಳನ್ನು ನೋಡಿಕೊಳ್ಳುವ ಯಾವ ಹಕ್ಕೂ ನನಗಿಲ್ಲ ಅನಿಸಿತು' ಎಂದಳು ಭಾರತಿ.
'ನನಗೊತ್ತಿಲ್ಲ. ನಾನು ಹೋಸೇನ ಒಂದೆರಡು ಸರ್ತಿ ನೋಡಿದ್ದೇನೆ. ಒಳ್ಳೇ ಹುಡುಗನಂತೆ ಕಾಣುತ್ತಾನೆ. ಆದರೆ ಕ್ಷಮಾ ಹೇಳ್ತಾ ಇದ್ದಳು. ಹೋಸೆ ಮತ್ತು ಆಕೆ ಬರೇ ಫ್ರೆಂಡ್ಸ್ ಅಂತೆ.'
'ಏನು ಭಾರತಿ ಹಂಗಂದ್ರೆ?'
'ನನಗೊತ್ತಿಲ್ಲ ಗೌತಮ. ಈ ಹುಡುಗರು ಯಾವಾಗ ಫ್ರೆಂಡ್ಸ್ ಆಗಿರ್ತಾರೆ. ಯಾವಾಗ ಬಾಯ್ಫ್ರೆಂಡ್, ಗರ್ಲ್ ಫ್ರೆಂಡಾಗ್ತಾರೆ ಅಂತ ನಂಗೊತ್ತಿಲ್ಲ. ಎರಡಕ್ಕೂ ಏನು ವ್ಯತ್ಯಾಸ ಅಂತ ನನಗೊತ್ತಿಲ್ಲ. ಏನಂತ ಕೇಳಲಿ ನಾನು ಅವಳನ್ನ? ಬರೇ ಫ್ರೆಂಡ್ಸಂದ್ರೆ ಏನು ಮಾಡ್ತೀರ ಅಂತ ಕೇಳಲಾ?'
Product Information
Product Information
Shipping & Returns

Description