🎉 Up to 70% Off Selected ItemsShop Sale
HomeStore

ಕಮ್ಮಟ ಕೀಲಿ

Product image 1
Product image 2

ಕಮ್ಮಟ ಕೀಲಿ

ಕಮ್ಮಟ ಕೀಲಿ

ಶ್ರೀ ಮಲ್ಲೇಶಯ್ಯ ಕೆ. ಬಿ. ಅವರು ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರು, ವೃತ್ತಿಯಲ್ಲಿ ಅವರು ಬಿ. ಹೆಚ್‌. ಇ. ಎಲ್. ಕಾರ್ಖಾನೆಯ ಉದ್ಯೋಗಿಯಾಗಿದ್ದರೂ, ಅವರ ಸಾಹಿತ್ಯಾಸಕ್ತಿ ಹಾಗೂ ಸೇವೆಗೆ ಅಡ್ಡಿಯಾಗಿಲ್ಲ. ಅವರು ಈಗಾಗಲೇ ಜೀವನ ಚಿತ್ರ, ವಿಚಾರ ಸಾಹಿತ್ಯ, ನಾಟಕ ಮುಂತಾದ ಪ್ರಕಾರಗಳಲ್ಲಿ ಕೈಯ್ಯಾಡಿಸಿ ಗಮನ ಸೆಳೆದಿದ್ದಾರೆ. ಅವರ ಇತ್ತೀಚಿನ ಯೂರೋಪಿಯನ್ ರಾಷ್ಟ್ರಗಳ ಪ್ರವಾಸ ಕಥನ ನವ ನಾಗರಿಕ ನಾಡುಗಳಲ್ಲಿ ನಾವು ಎನ್ನುವ ಕೃತಿಯಲ್ಲಿ ಅವರ ಪ್ರತಿಭೆ ಮನಮೆಚ್ಚುವಂತೆ ಪ್ರಕಟವಾಗಿದೆ. ಆದರೆ, ಮೂಲತಃ ಅವರ ಆಸಕ್ತಿಯ ವಿಷಯ ವಚನ ವಾಙ್ಮಯವೇ ಆಗಿದೆ.

ವಚನಕಾರರನ್ನು ಕುರಿತು ಅವರು ಅನೇಕ ಕಿರುಹೊತ್ತಗೆಗಳನ್ನೂ ರಚಿಸಿದ್ದಾರೆ. ಪ್ರಸ್ತುತ ಅವರು ಬೆಂಗಳೂರು ವಿಶ್ವವಿದ್ಯಾಲಯದ ಬಸವಾದಿ ಶಿವಶರಣರ ವಚನ ಸಂಕಲನ ವಚನ ಕಮ್ಮಟಕ್ಕೆ ವ್ಯಾಖ್ಯಾನವನ್ನು ಬರೆಯುವ ಸಾಹಸ ಮಾಡಿದ್ದಾರೆ. ಇದರಲ್ಲಿ ಅರವತ್ತು ಸ್ತ್ರೀ, ಪುರುಷ ವಚನಕಾರರ ೫೧೬ ವಚನಗಳಿವೆ.

ವಚನ ವ್ಯಾಖ್ಯಾನಗಳು ಮಹಲಿಂಗದೇವ, ಸಿಂಗಳದ ಸಿದ್ಧಬಸವರಾಜ, ಮೊದಲಾದವರಿಂದ ಮಧ್ಯಯುಗದಲ್ಲಿಯೇ ಆರಂಭವಾಗಿದ್ದವು. ಹತ್ತೊಂಬತ್ತನೆಯ ಶತಮಾನದಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿ, ರಂ. ರಾ. ದಿವಾಕರರಿಂದ ಆರಂಭವಾಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ಎಲ್. ಬಸವರಾಜು, ಹೆಚ್. ತಿಪ್ಪೇರುದ್ರಸ್ವಾಮಿ, ಎಸ್. ವಿದ್ಯಾಶಂಕರ ಮೊದಲಾದವರಿಂದ ಮುಂದುವರೆದು ನಿರಂತರ ಆಸಕ್ತಿಯ ವಿಷಯವಾಗಿದೆ.

ಶ್ರೀ ಮಲ್ಲೇಶಯ್ಯನವರ ವ್ಯಾಖ್ಯಾನವು ಓದುಗ ಮಿತ್ರ ರೀತಿಯದಾಗಿದೆ. ಇಲ್ಲಿನ ವಚನಗಳಲ್ಲಿ ಅಲ್ಲಮ, ಮುಕ್ತಾಯಿಯಂತಹವರ ಬೆಡಗಿನ ವಚನಗಳೂ ಇವೆ. ಮಲ್ಲೇಶಯ್ಯನವರನ್ನು ಇವು ಹೆದರಿಸಿಲ್ಲ! ಅವುಗಳನ್ನೂ ಅವರು ಪ್ರೀತಿಯಿಂದ ವ್ಯಾಖ್ಯಾನಿಸಿದ್ದಾರೆ.

ಈ ವಿಶ್ಲೇಷಣೆಗಳನ್ನು ಓದಿದಾಗ ಅಭ್ಯಾಸಿಗೆ ಗೆಳೆಯನೊಬ್ಬ ಇದರಲ್ಲಿಯ ವಚನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ. ಶ್ರೀ ಮಲ್ಲೇಶಯ್ಯನವರ ಹೃದಯ ವಚನಾರ್ಥಗಳಿಂದ ಆರ್ದ್ರವಾಗಿರುವುದು ನಮ್ಮ ಮನಸ್ಸನ್ನು ಸೆಳೆಯದೇ ಬಿಡುವುದಿಲ್ಲ.

-ಪ್ರೊ ಜಿ ಎಸ್ ಸಿದ್ಧಲಿಂಗಯ್ಯ
ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ನಿವೃತ್ತ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ

(ಮುನ್ನುಡಿಯಿಂದ...)
$2.05
ಕಮ್ಮಟ ಕೀಲಿ
$2.05

Product Information

Shipping & Returns

Description

You may also like

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೩

$1.62

$0.49

-70%NEW
Thumbnail 1

ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ

$1.41

$0.42

-69%NEW
Thumbnail 1

ಪಕ್ಷಿಗಳ ಹಾರಾಟ

$0.65

$0.20

-68%NEW
Thumbnail 1

ಹಾಸ್ಯ ಪಟಾಕಿ

$0.22

$0.07

-70%NEW
Thumbnail 1

ವಿಶ್ವದಲ್ಲಿ ಜೀವಾಂಕುರ ಎಂದು? ಎಂತು?

$1.08

$0.32

-70%NEW
Thumbnail 1

ಆಕಾಶ ಮತ್ತು ಬೆಕ್ಕು

$1.08

$0.32

-70%NEW
Thumbnail 1

ಯೋಗ ದಿನಚರಿ

$1.35

$0.41

NEW
Thumbnail 1

ಮಾಯಾಲೋಕ :೧

$4.12

NEW
Thumbnail 1

ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!

$0.97

NEW
Thumbnail 1

ಕುಪ್ಪಳಿ ಡೈರಿ

$2.16

NEW
Thumbnail 1

ರಾಮನ್ ಮತ್ತು ಅವರ ಪರಿಣಾಮ

$1.08

NEW
Thumbnail 1

ಎಲ್ಲಿಂದ ಬಂತು ಬೂಸ್ಟ್?

$0.70

ಕಮ್ಮಟ ಕೀಲಿ | Harivu Books