🎉 Up to 70% Off Selected ItemsShop Sale
HomeStore

ಮನಸು ಅಭಿಸಾರಿಕೆ

Product image 1

ಮನಸು ಅಭಿಸಾರಿಕೆ

ಮನಸು ಅಭಿಸಾರಿಕೆ

ಮನಸು ಅಭಿಸಾರಿಕೆ

ಶಾಂತಿಯವರು ವಿಶಿಷ್ಟವಾಗುವುದು ಆಧುನಿಕತೆಯನ್ನು ಅವರು ಅನುಸಂಧಾನ ಮಾಡುವ ಬಗೆಯಲ್ಲಿ. ಅದು ನನ್ನ ತಲೆಮಾರಿನವರು ಎದುರಿಸಿದ ಇಪತ್ತನೆಯ ಶತಮಾನದಲ್ಲಿ ಮೂಡಿಬಂದ ಅಧುನಿಕತೆಯಲ್ಲ ಇದು ಆಧುನಿಕ ನಮ್ಮ ಬದುಕಿನ 'ಫೈಬರ್'ನಲ್ಲಿಯೇ ಸೇರಿಹೋಗಿರುವ ಎಲ್ಲವನ್ನೂ ಬದಲಿಸುತ್ತಿರುವ ಆಧುನಿಕತೆ, ಇಂದಿನ ಯುವಕ ಯುವತಿಯರಿಗೆ ಹಾಗೂ ಬರಲಿರುವ ಪೀಳಿಗೆಗಳಿಗೆ ಇದರಿಂದ ಬಿಡುಗಡೆಯೇ ಸಾಧ್ಯವಿಲ್ಲ. ಅದರ ಮುಖ್ಯಲಕ್ಷಣ ನಮ್ಮ ಬದುಕಿನ ಬಾಹ್ಯವನ್ನು ಆವರಿಸಿರುವ ಕೊಳ್ಳುಬಾಕ ಸಂಸ್ಕೃತಿಯಲ್ಲ, ಬದಲಾಗಿ ಅದರ ಕೇಂದ್ರದಲ್ಲಿ ಇರುವುದು ಮೌಲ್ಯಪಲ್ಲಟ ಮತ್ತು ಮೌಲ್ಯಸೃಷ್ಟಿಗಳು. ಅವು 'ರೀಪ್ಲೇಸ್' ಮಾಡುತ್ತಿರುವ ಹಳೆಯ ಮೌಲ್ಯಗಳು ಬಹಳ ಒಳ್ಳೆಯವೇನೂ ಆಗಿರಲಿಲ್ಲ. ಅದರಲ್ಲೂ ಹೆಣ್ಣುಮಕ್ಕಳಿಗೆ ಅವು ಅನ್ಯಾಯವನ್ನೇ ಮಾಡುತ್ತಿದ್ದವು. ಈ ಸಂಕಲೆಗಳಿಂದ ಲಿಬರೇಟ್ ಆಗುವ ಕಿರುಹಾದಿಗಳನ್ನು ಈ ಆಧುನಿಕತೆ ತೋರಿಸಿಕೊಟ್ಟಿದೆ. ಅವು ಹೊಸ ಸಂವೇದನೆಗಳನ್ನು ಹೊಸ ಹಂಬಲಗಳನ್ನು ಹುಟ್ಟುಹಾಕಿವೆ. ಅಂಥ ಸಂವೇದನೆಗೆ ಇಲ್ಲಿನ ಅನೇಕ ಕಥೆಗಳು ನುಡಿಕೊಟ್ಟಿದೆ. ಈ ಕತೆಗಳು ಮುಖ್ಯವೆನಿಸುವದು ಕಥೆಹೇಳುವ ಧಾವಂತದಲ್ಲಿ ಅಥವಾ ಸಾಮಾಜಿಕ ನ್ಯಾಯದ ಅರಸುವಿಕೆಯಲ್ಲಿ ತಾತ್ವಿಕ ಹುಡುಕಾಟಗಳನ್ನು ಮರೆತಿರುವ ನಮ್ಮ ಕಾಲದ ಹಲವು ಕಥೆಗಾರರಿಗಿಂತ ಭಿನ್ನವಾಗುವುದರಿಂದ.

-ಎಚ್ ಎಸ್‌ ರಾಘವೇಂದ್ರ ರಾವ್
$0.75

Original: $2.49

-70%
ಮನಸು ಅಭಿಸಾರಿಕೆ

$2.49

$0.75

Product Information

Shipping & Returns

Description

ಮನಸು ಅಭಿಸಾರಿಕೆ | Harivu Books