🎉 Up to 70% Off Selected ItemsShop Sale
ಒಂದು ಖಾಲಿ ಕುರ್ಚಿ
ಬಟ್ಟೆ ಕೊಳೆಯಾಗಿತ್ತು. ಕಣ್ಣು ಭಾರವಾಗಿತ್ತು. ಗಾಜಿನ ಕಿಟಕಿಯಿಂದ ಕೆಳಗಡೆ ಕಣ್ಣು ಹಾಯಿಸಿದೆ. ಟೆಕ್ ಪಾರ್ಕಿನ ಹೊರಗಡೆ, ಸಾಲು ಸಾಲಾಗಿ ನಿಂತ ತಿಂಡಿಯ ಬಂಡಿಗಳು ಕಂಡವು. ಚರ್ ಚರ್ ಅಂತ ದೋಸೆ ಹೊಯ್ಯುವವನು 'ಕಮ್ ಸರ್, ಪ್ಲೀಸ್ ಕಮ್'' ಅಂತ ಬರ ಮಾಡಿಕೊಂಡಂತೆ ಕಾಣುತ್ತಿತ್ತು. ಈ ಬಂಡಿಗಳಲ್ಲಿ ಏನು ಸಿಗಲ್ಲ? ಟೀ, ಕಾಫಿ, ತಿಂಡಿ, ಊಟ, ಸಿಗರೇಟ್, ಜ್ಯೂಸು, ಬಬಲ್ ಗುಮ್ಮು, ಪರೋಟ, ದೋಸಾ, ಇಡ್ಲಿ ಉಪ್ಪಿಟ್ಟು, ಎಲೆ, ಅಡಕೆ - ಹೀಗೆ ಎಲ್ಲವೂ ನಾಲಿಗೆ ಬೇಡುವ ಸಕಲ ರುಚಿಗಳ ಸಂಗಮವಿದು, ಟೆಕ್ಕಿಗಳ ಜಾಗೃತ ಜಾಗವಿದು. ಬೆಳಿಗ್ಗೆ ಏಳಾದರೆ ಸಾಕು, ಟೆಕ್‌ಪಾರ್ಕಿನ ಹೊರಗಡೆ ಜಾತ್ರೆಗೆ ಸೇರಿದ ಜನಜಂಗುಳಿ ಇರುತ್ತದೆ. ಬಿಸಿಲಾದರೂ ಇರುಳಾದರೂ ಈ ಜಾಗಕ್ಕೆ ವಿರಾಮವಿಲ್ಲ. ಇಲ್ಲಿ ಯಾರಿಗೂ ಕುಂತು ತಿನ್ನುವಷ್ಟು ವ್ಯವಧಾನವಿಲ್ಲ. ಒಂದು ವೇಳೆ ನೀವು ಕುಳಿತುಕೊಂಡು ತಿನ್ನುತ್ತಿದ್ದರೆ, ನಿಮಗೆ ಪ್ರೊಜೆಕ್ಟಿನಲ್ಲಿ ಅಷ್ಟಾಗಿ ಕೆಲಸವಿಲ್ಲ ಎಂದಂತಲೇ ಅರ್ಥ. ಅವರು ಆಕಾಶಕ್ಕೆ ಮುಖಮಾಡಿ ಬಿಡುವ ಸಿಗರೇಟಿನ ಹೊಗೆಯೊಳಗೆ, ಇಡೀ ಜನ್ಮಕ್ಕಾಗುವ ನಿರಾಳತೆ ಅಡಗಿರುತ್ತದೆ. ಆ ನಿರಾಳತೆಯೊಳಗೇ ಶುದ್ಧ ಪ್ರಾಮಾಣಿಕ ಮಾತುಗಳು ಹೊರಬೀಳುತ್ತವೆ. ಹೈಕು, ಅಪ್ರೈಸಲ್‌ಗಳ ನಿಷ್ಪಕ್ಷಪಾತಚರ್ಚೆ, ಈ ಹೊಗೆಯಾಡುವ ವಾತಾವರಣದಲ್ಲೇ ಜರಗುತ್ತವೆ. ಬಹುತೇಕ ಎಲ್ಲ ಸಾಫ್ಟ್‌ವೇರ್ ಇಂಜಿನಿಯರ್‌ಗಳ ಮಹತ್ತರ ನಿರ್ಧಾರಗಳು ಈ ಬಂಡಿಗಳ ಆಸುಪಾಸಿನಲ್ಲೇ ಆಗುತ್ತವೆ. ಕಂಪನಿ ಬಿಡೋದರಿಂದ ಹಿಡಿದು, ಕೆಲಸೇತರ ಗಾಸಿಪ್ಪುಗಳು ಜಗಜ್ಜಾಹೀರುಗೊಳ್ಳುವುದು ಇಲ್ಲೇ. ನೀಟಾಗಿ ಇನ್ ಮಾಡಿ ಶೂ ಹಾಕಿಕೊಂಡು, ನಿಂತಲ್ಲೇ ತುಸು ಮುಂದಕ್ಕೆ ವಾಲಿ ತಿನ್ನುವ ಜೀವಿಗಳು, ಮೇಲ್ವರ್ಗ ಮತ್ತು ಕೆಳವರ್ಗದ ಮಧ್ಯ ಸಿಕ್ಕಿಬಿದ್ದಿರುವ ಆತ್ಮದಂತೆ ಕಾಣುತ್ತವೆ. ಸಾಲು ಸಾಲಾಗಿ ನಿಂತಿರುವ ಬಂಡಿಗಳು ಎರಡೂ ಜಗತ್ತನ್ನು ಜೋಡಿಸುವ ಸೇತುವೆಯಂತೆ ಕಾಣುತ್ತವೆ.
Product Information
Product Information
Shipping & Returns

$1.19
ಒಂದು ಖಾಲಿ ಕುರ್ಚಿ—
$1.19
Product Information
Product Information
Shipping & Returns
Shipping & Returns
Description