ಓಶೋ ಸಾವಿನ ಸುತ್ತ
ಒಬ್ಬ ಕೃಪಣನ ಕೈಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಸಿಕ್ಕಾಗ ಆತ ಅತ್ಯಾಸೆಗೆ ಬಿದ್ದು ಕೋಳಿಯನ್ನು ಕೊಂದುಬಿಡುತ್ತಾನೆ! “ಓಶೋ ಸಾವಿನ ಸುತ್ತ' ಒಂದು ಅಪರೂಪದ ಕೃತಿ. ಓಶೋ ಪ್ರೇಮಿಗಳಷ್ಟೇ ಅಲ್ಲ ಸಾಹಿತ್ಯಾಸಕ್ತರಾದ ಸರ್ವರಿಗೂ ಅನುಭಾವಿಯ ಕೊನೆಯ ದಿನಗಳ ಜೀವನ ಗಾಥೆ ತೆರೆದಿಡುವ ಅಪರೂಪದ ಕೃತಿ ಇದು. ಕೃತಿಯಲ್ಲಿ ಓಶೋ ಸಾವಿಗೆ ಮೂಕ ಸಾಕ್ಷಿಯಂತಿದ್ದ ಸನ್ಯಾಸಿಗಳ ಕಿರು ಪರಿಚಯವಿದೆ. ಓಶೋ ಆಶ್ರಮದ ಬೆಳವಣಿಗೆಗಳು ಅವರ ಸಾವಿನ ಬಗ್ಗೆ ಇರುವ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ. ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿ ಪತ್ರ ನಕಲು ಮಾಡಿದ್ದು ಹಾಗೂ ಧ್ಯಾನ ಕೇಂದ್ರವನ್ನು ರೆಸಾರ್ಟ್ ತರಹದಲ್ಲಿ ನೋಡಿಕೊಂಡಿರುವುದು ಕೃತಿಯ ಆಂತರಿಕ ಬಂಡಾಯದ ಮೂಲ ಪ್ರೇರಣೆಯಾಗಿದೆ. ಓಶೋ ಶಿಷ್ಯವಲಯದಲ್ಲಿ ಉಂಟಾದ ಬಿರುಕು ಅವರ ಗಮನಕ್ಕೂ ಬರದಂತೆ ಸಂಭವಿಸುವುದು ಆಶ್ಚರ್ಯಕರ ಮತ್ತು ನಿರೀಕ್ಷಿತ.
1985ರಲ್ಲಿ ಓಶೋ ಅಮೆರಿಕದಿಂದ ಅಧಿಕೃತವಾಗಿ ಗಡಿಪಾರಾದರು. ಅಸಲಿ ಕಥೆ ಇಲ್ಲಿಂದ ಪ್ರಾರಂಭವಾಗುತ್ತದೆ, 21 ದೇಶಗಳು ಓಶೋರ ವೀಸಾವನ್ನು ರದ್ದುಗೊಳಿಸಿದವು. ಓಶೋ ತೀರಿಕೊಂಡ ಮೇಲೆ ಸ್ವಾಮಿ ಆನಂದ್ ಜಯೇಶ್ ಎಂಬ ಕೃಪಣನಾದ ಶಿಷ್ಯನೋರ್ವ ಆಶ್ರಮದ ಮುಂದಾಳತ್ವ ವಹಿಸುತ್ತಾನೆ.
ಓಶೋ ಮರಣಕ್ಕೆ ಸಂಬಂಧಿಸಿದಂತೆ ಕೃತಿಯು ಹಲವು ಅನುಮಾನಾಸ್ಪದ ಸಂಗತಿಗಳನ್ನು ತೆರೆದಿಡುತ್ತದೆ. ಉದಾಹರಣೆಗೆ, ಓಶೋರ ಆಪ್ತಸಂಗಾತಿ ನಿರ್ವಾಣೋ ನಿಗೂಢವಾಗಿ ಸಾವನ್ನಪ್ಪುವುದು, ಇದಾದ 40 ದಿನಗಳೊಳಗೆ ಓಶೋ ದೇಹ ತೊರೆದುದು, ಅವರ ಮರಣ ವಾರ್ತೆಯನ್ನು ಅವರ ಧೂರ್ತ ಶಿಷ್ಯರು ಅದೆಷ್ಟೋ ಗಂಟೆಗಳ ತರುವಾಯ ಹೊರಜಗತ್ತಿಗೆ ಪ್ರಕಟಿಸಿದುದು, ಕೇವಲ 10 ನಿಮಿಷಗಳ ಕಾಲ ಸನ್ಯಾಸಿ ದರ್ಶನಕ್ಕೆ ಸೀಮಿತಗೊಳಿಸಿದುದು. ಅಸ್ವಸ್ಥ ಮಗನನ್ನು ನೋಡಲು ಹಾತೊರೆದ ಅವರ ತಾಯಿಗೆ ಶಿಷ್ಯಸಂಕುಲವೆನಿಸಿಕೊಂಡವರು ಅವಕಾಶ ನೀಡದಿರುವುದು, ಅವಸರವಸರವಾಗಿ ಸೀಮೆಎಣ್ಣೆ ರಬ್ಬರ್ ಟೈಯರ್ ಉಪಯೋಗಿಸಿ ಓಶೋ ದೇಹವನ್ನು ದಹಿಸಿದ್ದು, ಮಿತಿಮೀರಿದ ಔಷಧ ಸೇವನೆ ಓಶೋ ಅವರ ದೇಹವನ್ನು ಸಾವಿನ ದವಡೆಗೆ ದೂಡಿತೆಂದು ಪುಕಾರೆಬ್ಬಿಸಿದ್ದು, ಓಶೋ ತಾಯಿ ಮಗನ ಕಳೇಬರದೆದುರು ನಿಂತು "ಮಗನೇ, ಅವರೆಲ್ಲ ಸೇರಿಕೊಂಡು ನಿನ್ನನ್ನು ಕೊಂದು ಬಿಟ್ಟರಲ್ಲೋ" ಎಂದು ಗೋಳಾಡಿದ್ದು, ಓಶೋ ಸಾವಿನ ಸುದ್ದಿ ಕೇಳಿದ ಅವರ ಮೊದಲ ಶಿಷ್ಯ ಮಾ ಯೋಗಲಕ್ಷ್ಮಿ ಇದಂತೂ ಸಹಜ ಸಾವಲ್ಲ” ಎಂದು ಆರ್ಭಟಿಸಿದ್ದು. ಹೀಗೆ ಕೃತಿಯುದ್ದಕ್ಕೂ ಅನುಮಾನಸ್ಪದ ಅಚ್ಚರಿಗಳು, ಪ್ರಸಂಗಗಳು ಎದುರಾಗುತ್ತವೆ. ಓರ್ವ ಅನುಭಾವಿಯ ದೇಹಾವಸಾನದ ಸುತ್ತ ಅನುಮಾನಾಸ್ಪದ ಹಾಗೂ ಸುಸ್ಪಷ್ಟ ಚಿತ್ರಣವೊಂದನ್ನು ಕೃತಿ ತೆರೆದಿಡುತ್ತದೆ.
-ಅರುಣ್ ಹಾಂಶಿ
Product Information
Product Information
Shipping & Returns

Description